ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘಾನಿಸ್ತಾನ: 28 ಉಗ್ರಗಾಮಿಗಳ ಹತ್ಯೆ

Last Updated 22 ಡಿಸೆಂಬರ್ 2014, 9:28 IST
ಅಕ್ಷರ ಗಾತ್ರ

ಕಾಬೂಲ್‌ (ಐಎಎನ್‌ಎಸ್‌/ಪಿಟಿಐ): 28 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಆಫ್ಘಾನಿಸ್ತಾನ ರಕ್ಷಣಾ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.

‘ಆಫ್ಘಾನ್‌ ಸೇನೆಯು ಕಳೆದ ಒಂದು ದಿನದಲ್ಲಿ ವಿವಿಧ ಪ್ರಾಂತ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಗಳಲ್ಲಿ ಸ್ಥಳೀಯ ದಂಗೆಕೋರ ನಾಯಕ ಸೇರಿದಂತೆ ಕನಿಷ್ಠ 28 ತಾಲಿಬಾನ್‌ ಉಗ್ರಗಾಮಿಗಳನ್ನು ಹತ್ಯೆ ಮಾಡಿದೆ’ ಎಂದು ರಕ್ಷಣಾ ಸಚಿವಾಲಯ ಪ್ರಕಟಣೆಯನ್ನು ಉದ್ಧರಿಸಿ ಸುದ್ದಿಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಅಲ್ಲದೇ, ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಎಂದೂ ಅದು ತಿಳಿಸಿದೆ.

ಪಾಕ್‌ನಿಂದ ಐವರು ಉಗ್ರರ ಬಂಧನ
ಇಸ್ಲಮಾಬಾದ್‌ ವರದಿ: 

ಪಾಕ್‌ ಸೇನೆಯು ಬಲೂಚಿಸ್ತಾನದ  ನೈರುತ್ಯ ಪ್ರಾಂತ್ಯದ ಮೇಲೆ ಸೋಮವಾರ ದಾಳಿ ನಡೆಸಿದ್ದು,  ಓರ್ವ ನಾಯಕ ಸೇರಿದಂತೆ ಐವರು ತಾಲಿಬಾನ್‌ ಉಗ್ರನ್ನು ಬಂಧಿಸಿದೆ.

ಸೇನೆಯು ಸುಳಿವಿನ ಮೇರೆಗೆ  ದಾಳಿಯನ್ನು ನಡೆಸಿದ್ದು ಉಗ್ರರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT