ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್‌: ನೇರ ಸಂದರ್ಶನ

Last Updated 19 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಯುಷ್‌ನ ವಿವಿಧ ಕೋರ್ಸ್‌ಗಳಿಗೆ ನಡೆದ ಮೂರನೇ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿದಿರುವ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನೇರ ಸಂದರ್ಶನ ನಡೆಸಲಿದೆ.

ಆಯುರ್ವೇದದಲ್ಲಿ 35 ಸೀಟುಗಳು, ಯುನಾನಿ–33, ಹೋಮಿಯೋಪಥಿ–44, ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ಕೋರ್ಸ್‌ಗಳಲ್ಲಿ 19 ಸೇರಿದಂತೆ ಒಟ್ಟು 131 ಸೀಟುಗಳು ಲಭ್ಯವಿವೆ.

ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಸೋಮವಾರ (ಅ.20) ಸಂಜೆ 5 ಗಂಟೆ ಒಳಗಾಗಿ ಬೆಂಗಳೂರಿನಲ್ಲಿರುವ ಆಯುಷ್‌ ನಿರ್ದೇಶನಾಲಯದಿಂದ  ಪಡೆದು  ಅ.21ರ (ಮಂಗಳವಾರ) ಸಂಜೆ 5.30ರ ಒಳಗಾಗಿ ನಿರ್ದೇಶನಾ­ಲಯಕ್ಕೆ ದೃಢೀಕೃತ ಅಂಕಪಟ್ಟಿ­ಯೊಂದಿಗೆ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್‌ಸೈಟ್‌  kea.kar.nic.in ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT