ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಗದ ನಿಲುವಿಗೆ ಸಿ.ಎಂ ಅತೃಪ್ತಿ

Last Updated 17 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೈಸೂರು: ಚುನಾವಣಾ ದಿನ ಮತ್ತು ಅದರ ಮುನ್ನಾದಿನದಂದು ಮತದಾರರ­ಲ್ಲ­ದವರು ತಮ್ಮ ಲೋಕ­ಸಭಾ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಇರಬಾರದು ಎಂಬ ನಿಯಮವನ್ನು ಚುನಾವಣಾ ಆಯೋಗವು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿ­ಸಿದರು.

ಗುರುವಾರ ತಮ್ಮ ತವರೂರು ಸಿದ್ದರಾಮನಹುಂಡಿಯಲ್ಲಿ ಮತ ಚಲಾ­ಯಿಸಿದ ಅವರು ನಂತರ ಸುದ್ದಿಗಾ­ರರೊಂದಿಗೆ ಮಾತನಾಡಿದರು.
ಬುಧವಾರ ಸಂಜೆ ಬಿಜೆಪಿ ಕಾರ್ಯ­ಕರ್ತರು ಮೈಸೂರಿನಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿರು­ವುದು ಮಾದರಿ ನೀತಿಸಂಹಿತೆಯ ಉಲ್ಲಂಘನೆ ಎಂದು ಖಂಡಿಸಿ ಪ್ರತಿಭಟಿಸಿದ್ದರು. ಇದರಿಂದ ಚುನಾವಣಾ ಅಯೋಗದ ನಿರ್ದೇಶ­ನದಂತೆ ಸಿದ್ದರಾಮಯ್ಯ ಕೂಡಲೇ ಬೆಂಗಳೂರಿಗೆ ತೆರಳಿದ್ದರು.

‘ನನ್ನ ಸ್ವಂತ ಮನೆಯು ಮೈಸೂರಿ­ನಲ್ಲಿದೆ. ಅಲ್ಲಿರದೇ ಎಲ್ಲಿ ಇರಲಿ? ಆಯೋಗವು ಈ ಬಗ್ಗೆ ತಪ್ಪು ಗ್ರಹಿಕೆ­ಯಲ್ಲಿದೆ. ಈ ಬಗ್ಗೆ ದೊಡ್ಡ ವಿವಾದ ಮಾಡುವುದು ಬೇಡ’ ಎಂದರು.

‘ಬಿಜೆಪಿ ತನಗಿರುವ ಸಾಮರ್ಥ್ಯವನ್ನು ಅತಿರಂಜಿತವಾಗಿ ಪ್ರದರ್ಶಿಸುತ್ತಿದೆ. ನಾನು ಮೊದಲೇ ಹೇಳಿದಂತೆ 19–20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವುದು ಖಚಿತ. ಮೇ 16ಕ್ಕೆ ಎಲ್ಲವೂ ಬಹಿರಂಗವಾಗಲಿದೆ’ ಎಂದರು.

ಗುರುವಾರ ಬೆಳಿಗ್ಗೆ ವಿಶೇಷ ವಿಮಾನ­ದಲ್ಲಿ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದ ಅವರು, ಶಾರದಾ­ದೇವಿ­ನಗರದ ಮನೆಗೆ ತೆರಳಿದರು. ನಂತರ ಮಧ್ಯಾಹ್ನ  ಸಿದ್ದರಾಮನ­ಹುಂಡಿಗೆ ತೆರಳಿ ಮತದಾನ ಮಾಡಿದರು. ಅವರು ಮುಖ್ಯಮಂತ್ರಿ­ಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ತಮ್ಮ ತವರೂರಿಗೆ ಹೋಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT