ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಧ್ಯ ಪ್ರೀತಿ

ಪಂಚರಂಗಿ
Last Updated 20 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬಿಗ್‌ ಬಿ ಅಮಿತಾಭ್‌ ತಮ್ಮ ಬಿಡುವಿನ ಸಮಯದಲ್ಲಿ ಏನು ಮಾಡುತ್ತಾರೆ ಎನ್ನುವುದು ಅವರ ಅಭಿಮಾನಿಗಳ ಕುತೂಹಲ. 72 ಹರೆಯದಲ್ಲೂ ಬ್ಯುಸಿ ಆಗಿರುವ ಅಮಿತಾಭ್, ತಮಗೆ ಒಂದಿಷ್ಟು ಬಿಡುವು ಸಿಕ್ಕರೆ ಸಾಕು ಮುದ್ದಿನ ಮೊಮ್ಮಗಳು ಆರಾಧ್ಯಳ ಜೊತೆ ಕಾಲ ಕಳೆಯುತ್ತಾರೆ. ಆರಾಧ್ಯಳ ಜೊತೆ ಸಮಯ ಕಳೆಯುವುದೇ ಒಂದು ಅದ್ಭುತ ಅನುಭವ ಎಂದಿದ್ದಾರೆ ಅಮಿತಾಭ್ ಬಚ್ಚನ್.

‘ಅವಳು ತನ್ನ ವಯಸ್ಸಿಗಿಂತ ಹೆಚ್ಚಿನ ಪ್ರೌಢಿಮೆ ಹೊಂದಿದ್ದಾಳೆ. ಅವಳ ನಾನ್‌–ಸ್ಟಾಪ್‌ ಮಾತು ಕೇಳುವುದೇ ಒಂದು ಆನಂದ. ಆದರೆ ಅವಳ ಪ್ರಶ್ನೆಗಳಿಗೆ ಉತ್ತರಿಸುವುದು ಮಾತ್ರ ಬಹಳ ಕಷ್ಟ. ಯಾರೊಬ್ಬರೂ ಕಲ್ಪನೆಯೂ ಮಾಡಿಕೊಳ್ಳದಂತಹ ವಿಚಾರಗಳ ಬಗ್ಗೆ ಅವಳು ಪ್ರಶ್ನೆ ಕೇಳುತ್ತಾಳೆ’ ಎಂದಿದ್ದಾರೆ.

‘ಅವಳ ಜಗತ್ತೇ ಬೇರೆ. ಅವಳ ಕಥೆಗಳು, ಅವಳ ಸ್ನೇಹಿತರು, ಅವಳ ಆಟಿಕೆಗಳು ಮತ್ತು ಅವಳ ಪ್ರಶ್ನೆಗಳು... ಈ ವಯಸ್ಸು ಮಕ್ಕಳ ಪಾಲಿನ ಅತ್ಯಂತ ಸಂತಸದ ದಿನಗಳು. ಅವರು ಈ ‘ದೊಡ್ಡ’ ಮತ್ತು ‘ಕೆಟ್ಟ’ ಪ್ರಪಂಚಕ್ಕೆ ತೆರೆದುಕೊಳ್ಳುವವರೆಗೆ...’ ಎನ್ನುವ ಸಾಲುಗಳನ್ನು ಬಿಗ್‌ ಬಿ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT