ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಲ್ಲಿ ಸಾವಿರ ಹಕ್ಕುಪತ್ರ ವಿತರಣೆ

ಅರಣ್ಯ ಭೂಮಿ ಸಾಗುವಳಿದಾರರ ಪರ ಕಾಗೋಡುಆಗ್ರಹ
Last Updated 1 ಏಪ್ರಿಲ್ 2015, 20:55 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಅನುಸೂಚಿತ ಬುಡಕಟ್ಟು ಗಳ ಮತ್ತು ಇತರ ಪಾರಂಪರಿಕ ಅರಣ್ಯ­ವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರಿಗೆ ಕನಿಷ್ಠ ಆರು ತಿಂಗಳೊಳಗೆ ಒಂದು ಸಾವಿರ ಹಕ್ಕುಪತ್ರಗಳನ್ನು ವಿತರಿಸಬೇಕು. ಅದು ಮುಖ್ಯಮಂತ್ರಿಯಿಂದಲೇ ವಿತರಣೆಯಾಗಬೇಕು’ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಬುಧವಾರ ನಡೆದ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳ ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರಿನ ಕರ್ನಾಟಕ ಆದಿವಾಸಿ ಒಕ್ಕೂಟ, ಶಿರಸಿಯ ಅರಣ್ಯವಾಸಿಗಳ ಹೋರಾಟಗಾರರ ವೇದಿಕೆ, ಚಿತ್ರದುರ್ಗದ ಅರಣ್ಯ ಹಕ್ಕು ಸಮಿತಿಗಳ ಜಿಲ್ಲಾ ಒಕ್ಕೂಟ ಹಾಗೂ ಬಗರ್‌ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

‘2006ರಲ್ಲಿ ಜಾರಿಯಾದ ಈ ಕಾಯ್ದೆ, ಎರಡು ವರ್ಷ ತಡವಾಗಿ ಅನುಷ್ಠಾನಕ್ಕೆ ಬಂತು. ಗ್ರಾಮ ಅರಣ್ಯ ಸಮಿತಿಯವರು ಸರಿಯಾಗಿ ದನಿ

‘ತೀರ್ಥಹಳ್ಳಿ ತಾಲ್ಲೂಕಿನ ಮಲಂದೂರಿನಲ್ಲಿ ಅಧಿಕಾರಿಗಳು ನಕ್ಸಲರ ಬಂದೂಕಿಗೆ ಹೆದರಿ ಸಾಗುವಳಿ
ದಾರರಿಗೆ ಹಕ್ಕುಪತ್ರ ನೀಡಿದ್ದಾರೆ. ಅಲ್ಲಿ ಸಾಧ್ಯವಾದರೆ, ಇಲ್ಲೇಕೆ ಆಗಿಲ್ಲ?’
ಕಾಗೋಡು ತಿಮ್ಮಪ್ಪ
ವಿಧಾನಸಭಾಧ್ಯಕ್ಷ

ಎತ್ತದ ಪರಿಣಾಮ ಕಾಯ್ದೆ ಸಮರ್ಪಕವಾಗಿ ಜಾರಿಯಾಗಲಿಲ್ಲ. ಇನ್ನು ಮುಂದಾದರೂ ಸಮಿತಿಯವರು ಗಟ್ಟಿಯಾಗಿ ದನಿ ಎತ್ತ
ಬೇಕು. ಅಧಿಕಾರ ಚಲಾಯಿಸಬೇಕು. ಆಗ ಅಧಿಕಾರಿಗಳು ನಿಮ್ಮ ಮಾತು ಕೇಳುತ್ತಾರೆ’ ಎಂದು ಒಕ್ಕೂಟದ ಸದಸ್ಯರನ್ನು ಹುರಿ
ದುಂಬಿಸಿದರು.

‘ಗ್ರಾಮ ಅರಣ್ಯ ಸಮಿತಿಯವರು ನ್ಯಾಯಾಧೀಶರಿದ್ದಂತೆ. ಸಮಿತಿಯವರು ಒಂದು ಪತ್ರ ಬರೆದರೆ ಸಾಕು, ಅಧಿಕಾರಿಗಳು ಗ್ರಾಮಕ್ಕೆ ಬಂದು ಸದಸ್ಯರನ್ನು ಭೇಟಿಯಾಗಿ, ಸಮಿತಿ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳಿಗೆ ಮರುಮಾತನಾಡದೇ ಸಹಿ ಹಾಕುತ್ತಾರೆ. ಒಂದು ಪಕ್ಷ ಸಮಿತಿಯವರಿಗೆ ಅಧಿಕಾರಿಗಳು ಸಹಕರಿಸದಿದ್ದರೆ ಜಿಲ್ಲಾಧಿಕಾರಿಗೆ ದೂರು ನೀಡಿ’ ಎಂದು ಸಲಹೆ ನೀಡಿದರು.

ತರಬೇತಿ ನೀಡಿ: ‘ಅರಣ್ಯ ಹಕ್ಕು ಕಾಯ್ದೆ ಕುರಿತು ತರಬೇತಿ ನೀಡಬೇಕು. ಇದಕ್ಕಾಗಿ ಸರ್ಕಾರ ಹಣ ನೀಡುತ್ತದೆ. ನಿಮಗೆ ತರಬೇತಿ ನೀಡಿದ್ದಾರಾ’? ಎಂದು ಕಾಗೋಡು ಸಮಾವೇಶದಲ್ಲಿದ್ದವರನ್ನು ಕೇಳಿದರು. ‘ಇದು ನಮಗೆ ಗೊತ್ತೇ ಇಲ್ಲ’ ಎಂದು ಜನ ಉತ್ತರಿಸಿದಾಗ, ಸಿಟ್ಟಿಗೆದ್ದ ಅವರು, ಸ್ಥಳದಲ್ಲೇ ಇದ್ದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಅರ್ಜಿ ವಜಾ ಮಾಡುವಂತಿಲ್ಲ:  ‘ಹಕ್ಕು
ಪತ್ರಕ್ಕಾಗಿ ಅರ್ಜಿ ಕೊಟ್ಟು ಅದಕ್ಕೆ ದಾಖಲೆ ಇಟ್ಟುಕೊಂಡರೆ ಸಾಕು ಅಂತಹವರನ್ನು ಒಕ್ಕಲೆಬ್ಬಿಸುವ ಅಧಿಕಾರ ಯಾರಿಗೂ ಇಲ್ಲ. ಶಿರಸಿಯ ತಹಶೀಲ್ದಾರರೊಬ್ಬರು ಒಂದೇ ದಿನ 3,000 ಅರ್ಜಿ ವಜಾ ಮಾಡಿದ್ದರು. ಈ ಬಗ್ಗೆ ಕಾರವಾರ ಜಿಲ್ಲಾಧಿಕಾರಿಗೆ ದೂರು ನೀಡಿದಾಗ, ಅರ್ಜಿ ಮರುಪರಿಶೀಲಿಸಲಾಯಿತು. ಆದ್ದರಿಂದ ಯಾವುದೇ ಅರ್ಜಿಯನ್ನು ವಜಾ ಮಾಡುವ ಮುನ್ನಾ ಅರ್ಜಿದಾರರಿಗೆ ತಿಳಿಸಬೇಕು’ ಎಂದು ಕಾಗೋಡು ತಿಮ್ಮಪ್ಪ ಎಚ್ಚರಿಸಿದರು.

‘ಸಿಎಂ ನಿಯೋಗದೊಂದಿಗೆ ಪ್ರಧಾನಿ ಭೇಟಿ’
‘ಮಾತೃಭಾಷೆಯಲ್ಲೇ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಲು ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ಮಾಡುವಂತೆ ಒತ್ತಾಯಿಸಿ ಪ್ರಧಾನಿ ಬಳಿ ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ಕರೆದೊಯ್ಯುಲಾಗುತ್ತಿದೆ’ ಎಂದು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT