ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯದ ಮೂಲ ಪಪ್ಪಾಯಿ

Last Updated 11 ಜುಲೈ 2014, 19:30 IST
ಅಕ್ಷರ ಗಾತ್ರ

ಯುರೋಪ್ ಪಪ್ಪಾಯಿ ಹಣ್ಣಿನ ತವರೂರು. ಇದರ ವೈಜ್ಞಾನಿಕ ಹೆಸರು ‘ಕ್ಯಾರಿಕಾ’. ಪಪ್ಪಾಯಿಯಲ್ಲಿ ವಿವಿಧ ತಳಿಗಳಿವೆ. ಮೆಕ್ಸಿಕೊದಲ್ಲಿ ಶೇಕಡ ನಲವತ್ತರಷ್ಟು ಬಿಳಿ ಪಪ್ಪಾಯಿಯನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲೂ ಕಾಣಸಿಗುವ, ಎಲ್ಲ ಋತುಗಳಲ್ಲೂ ದೊರೆಯುವ ಪಪ್ಪಾಯಿ ಹಣ್ಣಿನಲ್ಲಿ ಅಪಾರ ಔಷಧೀಯ ಗುಣಗಳಿವೆ.

ಔಷಧೀಯ ಗುಣಗಳು: ವಿಟಮಿನ್ ಎ, ಸಿ, ಇ, ಐರನ್ ಹಾಗೂ ಕ್ಯಾಲ್ಸಿಯಂ ಅಂಶ ಹೇರಳವಾಗಿದೆ. ಇದರಲ್ಲಿರುವ ‘ಪಪ್ಪಾಯಿಯನ್’ ಎಂಬ ಜೀವಸತ್ವವು ಜೀರ್ಣಕಾರಕವಾಗಿ ಕೆಲಸ ಮಾಡುತ್ತದೆ. ವಯಸ್ಸಾದಂತೆ ಕುಗ್ಗುವ ಜೀರ್ಣಶಕ್ತಿಯನ್ನು ವೃದ್ಧಿಸಲು ಪಪ್ಪಾಯಿ ಸಹಕರಿಸುತ್ತದೆ. ಮೂಳೆ ಸವೆತಕ್ಕೆ, ಹೃದಯ ಕಾಯಿಲೆ ಉಳ್ಳವರಿಗೂ ಪಪ್ಪಾಯಿ ಸೇವನೆ ಶ್ರೇಷ್ಠ. ಮಧುಮೇಹಿಗಳೂ ಈ ಹಣ್ಣನ್ನು ಧಾರಾಳವಾಗಿ ಸೇವಿಸಬಹುದು.

ಪಪ್ಪಾಯಿ ಸೇವನೆಯಿಂದ ಕರುಳಿನಲ್ಲಿ ಸೇರಿಕೊಳ್ಳುವ ಜಂತುಗಳು ನಾಶವಾಗುವುವು. ಇದರ  ಎಲೆಗಳಿಂದ ಹಲ್ಲುಜ್ಜಿದರೆ ಹಲ್ಲು ಹಾಗೂ ವಸಡು ನೋವು ನಿವಾರಣೆಯಾಗುವವು. ಪಪ್ಪಾಯಿ ಸೇವನೆಯಿಂದ ಬಾಣಂತಿಯರಿಗೆ ಎದೆಹಾಲು ಹೆಚ್ಚುತ್ತದೆ. ಮಕ್ಕಳಿಗೆ, ಹಾಲುಣಿಸುವ ತಾಯಂದಿರಿಗೆ ಪಪ್ಪಾಯಿಯು ಶಕ್ತಿದಾಯಕ ಆಹಾರ.  ಮಲಬದ್ಧತೆಯೂ ನಿವಾರಣೆಯಾಗುವುದು.

ಹಾಲು, ಜೇನುತುಪ್ಪ ಹಾಗೂ ಪರಂಗಿ ಹಣ್ಣನ್ನು ಮಿಶ್ರ ಮಾಡಿ ಸೇವಿಸುವುದರಿಂದ ನರ ದೌರ್ಬಲ್ಯ  ದೂರವಾಗುವುದು.  ಪಪ್ಪಾಯಿ ಹಣ್ಣಿನ ಹೋಳಿನಿಂದ ಚರ್ಮವನ್ನುಜ್ಜಿದರೆ ಚರ್ಮದ ಮೇಲಿನ ಕಲೆ ಮಾಯವಾಗುತ್ತದೆ. ಮೂಲವ್ಯಾಧಿ, ಯಕೃತ್ತಿನ ದೋಷಗಳಿಗೂ ಪಪ್ಪಾಯಿ ಅತ್ಯುತ್ತಮ ಔಷಧ. ಎಲೆಯಿಂದ ಒಸರುವ ದ್ರವವನ್ನು  ಗಾಯಕ್ಕೆ ಹಚ್ಚುವುದರಿಂದ ಗಾಯವು ಬೇಗನೆ ವಾಸಿಯಾಗುತ್ತವೆ.

ನಿತ್ಯವೂ ಊಟದ ನಂತರ ಈ ಹಣ್ಣನ್ನು  ನಿಯಮಿತವಾಗಿ ಸೇವಿಸಬೇಕು. ಕಣ್ಣಿನ ಆರೋಗ್ಯಕ್ಕೂ ಸಹಕಾರಿ. ಮನೆ ಮುಂದೆ ತುಸು ಖಾಲಿ ಜಾಗ ಉಳ್ಳವರು  ಒಂದಾದರೂ ಪಪ್ಪಾಯಿ ಗಿಡವನ್ನು ಬೆಳೆದಲ್ಲಿ ಇದರಿಂದ ಹಲವು ಪ್ರಯೋಜನಗಳನ್ನು ಪಡೆಯಬಹುದು. ಬೀಜದಿಂದಲೇ ವೃದ್ಧಿಯಾಗುವ ಗಿಡವಿದು. ಪೋಷಣೆ ಸುಲಭ. ಹೆಚ್ಚಿನ ಆರೈಕೆ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT