ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಶಾಸಕನಿಗೆ ‘ಝಡ್‌’ ಶ್ರೇಣಿ ಭದ್ರತೆ: ಟೀಕೆ

Last Updated 26 ಆಗಸ್ಟ್ 2014, 20:01 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಜಫ್ಫರ್‌­ನಗರ ಗಲಭೆ ಆರೋಪಿ, ಬಿಜೆಪಿಯ ಶಾಸಕ ಸಂಗೀತ್‌ ಸೋಮ್‌ ಅವರಿಗೆ ಕೇಂದ್ರ ಸರ್ಕಾರ ‘ಝಡ್‌’ ಶ್ರೇಣಿಯ ಭದ್ರತೆ ಒದಗಿಸಿರುವುದನ್ನು ವಿರೋಧ ಪಕ್ಷಗಳು ಟೀಕಿಸಿವೆ. ಕೇಂದ್ರದ ಈ ನಡೆ ‘ಹತ್ಯೆಗೆ ಲೈಸೆನ್ಸ್‌’ ನೀಡಿದಂತೆ ಎಂದು ಕಾಂಗ್ರೆಸ್‌ ಹೇಳಿದೆ.

ಉತ್ತರಪ್ರದೇಶದ ಸಾರ್ಧಾನ ಕ್ಷೇತ್ರದ ಶಾಸಕರಾಗಿರುವ ಸೋಮ್‌ ಅವರ ಮೇಲೆ ಉಗ್ರರು ಕಣ್ಣಿಟ್ಟಿರುವ ಸಂಭವ­ವಿದೆ ಎಂಬ ಗುಪ್ತಚರ ಮಾಹಿ­ತಿಯ ಆಧಾ­ರ­ದಲ್ಲಿ ಅವರಿಗೆ  ಕೇಂದ್ರ ಅರೆ­ಸೇನಾ ಪಡೆಯ (ಸಿಆರ್‌ಪಿಎಫ್‌) ರಕ್ಷಣೆ ಒದ­ಗಿಸಲು ಗೃಹ ಸಚಿವಾಲಯ ನಿರ್ಧರಿಸಿದೆ.

‘ಗಲಭೆಯ ಸಂತ್ರಸ್ತರು ನ್ಯಾಯ­ಕ್ಕಾಗಿ ಪರದಾಡುತ್ತಿದ್ದರೆ ಆರೋಪಿ­­ಗಳು ‘ಝಡ್‌’ ಶ್ರೇಣಿಯ ಭದ್ರತೆ ಪಡೆಯು­ತ್ತಿ­ದ್ದಾರೆ. ಮನೆಗಳು ಬೆಂಕಿಗಾಹುತಿ­ಯಾಗಿ  ಸಂಕಷ್ಟಕ್ಕೊಳ­ಗಾಗಿರುವ ಜನರ ಮುಂದೆ ಇದಕ್ಕಿಂತ ದೊಡ್ಡ  ವಿಡಂಬನೆ ಇರಲಾರದು’ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಹೇಳಿದ್ದಾರೆ.

‘ಕೇಂದ್ರ ಸರ್ಕಾರ ಒದಗಿಸಿರುವ ಭದ್ರತೆ ಶಾಸಕ ಸೋಮ್‌ಗಲ್ಲ, ಕೊಲೆ­ಗ­ಡು­ಕರಿಗೆ ಒದಗಿಸಿರುವ ಭದ್ರತೆ’ ಎಂದು ಜೆಡಿ (ಯು) ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಟೀಕಿಸಿದ್ದಾರೆ.

ಆದರೆ ತನ್ನ ನಿಲುವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಅಗತ್ಯ ಸಾಕ್ಷ್ಯಗಳ ಆಧಾರದಲ್ಲಿ ಈ ಕ್ರಮ ಕೈಗೊಂಡಿದೆ. ಇದಕ್ಕೂ ಮೊದಲು ಉತ್ತರ ಪ್ರದೇಶ ಸರ್ಕಾರ ಅಲ್ಲಿನ ಹೈಕೋರ್ಟ್‌ ನಿರ್ದೇಶನದಂತೆ ಸೋಮ್‌ ಅವರಿಗೆ ‘ವೈ’ ಶ್ರೇಣಿಯ ಭದ್ರತೆ ಒದಗಿಸಿತ್ತು’ ಎಂದು ಬಿಜೆಪಿ ವಕ್ತಾರ ಸಂಬೀತ್‌ ಪಾತ್ರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT