ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಉತ್ತೇಜನಕ್ಕೆ ವಿದೇಶಿ ಪ್ರವಾಸ: ಮೋದಿ

Last Updated 28 ಮಾರ್ಚ್ 2015, 12:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಆರ್ಥಿಕತೆಯ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಯು ಮುಂಬರುವ ತಮ್ಮ ವಿದೇಶಿ ಪ್ರವಾಸದ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ತಿಳಿಸಿದ್ದಾರೆ.

ಎಂಟು ದಿನಗಳ ಅವಧಿಯಲ್ಲಿ ಮೋದಿ ಅವರು ಫ್ರಾನ್ಸ್‌, ಜರ್ಮನಿ ಹಾಗೂ ಕೆನಡ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದು, ಏಪ್ರಿಲ್ 9ರಂದು ಪ್ರವಾಸ ಆರಂಭಗೊಳ್ಳಲಿದೆ.

‘ಭಾರತದ ಆರ್ಥಿಕ ಕಾರ್ಯಸೂಚಿಯನ್ನು ಪ್ರೋತ್ಸಾಹಿಸುವುದು ಹಾಗೂ ನಮ್ಮ ಯುವಶಕ್ತಿಗೆ ಉದ್ಯೋಗ ಸೃಷ್ಟಿಸುವುದು ನನ್ನ ಫ್ರಾನ್ಸ್, ಜರ್ಮನಿ ಹಾಗೂ ಕೆನಡ ಪ್ರವಾಸದ ಉದ್ದೇಶ’ ಎಂದು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ಫ್ರಾನ್ಸ್‌ ಪ್ರವಾಸದ ಬಗ್ಗೆ ಪ್ರಸ್ತಾಪಿಸಿರುವ ಮೋದಿ, ‘ಭಾರತ–ಫ್ರಾನ್ಸ್ ನಡುವಣ ಆರ್ಥಿಕ ಸಹಕಾರವನ್ನು ಬಲಗೊಳಿಸುವ ಬಗ್ಗೆ ನಾವು ಚರ್ಚಿಸಲಿದ್ದೇವೆ. ಪ್ಯಾರಿಸ್ ಹೊರವಲಯದಲ್ಲಿ ಕೆಲವು ಅತ್ಯಾಧುನಿಕ ಕೈಗಾರಿಕಾ ಘಟಕಗಳಿಗೆ ಭೇಟಿ ನೀಡುವೆ’ ಎಂದು ಟ್ವೀಟ್‌ ಮಾಡಿದ್ದಾರೆ.

‘ನಾನು ಹಾಗೂ ಚಾನ್ಸಲರ್ ಎಂಜೆಲಾ ಮರ್ಕೆಲ್ ಅವರು ಹ್ಯಾನ್ನೋವರ್ ಮೆಸೆ ( ಕೈಗಾರಿಕಾ ಉತ್ಸವ) ಅನ್ನು ಜಂಟಿಯಾಗಿ ಉದ್ಘಾಟಿಸಲಿದ್ದೇವೆ. ಅದರಲ್ಲಿ ಭಾರತವೂ ಪಾಲ್ಗೊಳ್ಳುತ್ತಿದೆ’ ಎಂದು ಜರ್ಮನಿಗೆ ಭೇಟಿ ಕುರಿತು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಪ್ರವಾಸದ ಕೊನೆಯ ಭಾಗವಾಗಿ ಕೆನಡಗೆ ಪ್ರಯಾಣಿಸಲಿರುವ ಪ್ರಧಾನಿ, ‘ಕೆನಡ ಜತೆಗೆ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಹಾಗೂ ಅಲ್ಲಿನ ನಾಯಕರು,ಕೈಗಾರಿಕಾ ಮುಖ್ಯಸ್ಥರು ಮತ್ತು ಭಾರತೀಯರನ್ನು ಭೇಟಿ ಮಾಡಲು ಉತ್ಸುಕವಾಗಿರುವೆ’ ಎಂದು ಅವರು ಟ್ವೀಟ್ಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT