ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಎಂ.ಲೋಧಾ ಮುಂದಿನ ಸಿಜೆಐ

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ನ್ಯಾಯಮೂರ್ತಿ ರಾಜೇಂದ್ರ ಮಲ್‌ ಲೋಧಾ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯ­ಮೂರ್ತಿ­­ಯಾಗಿ (ಸಿಜೆಐ) ನೇಮಿಸ­ಲಾ­ಗಿದ್ದು, ಅವರು ಏ.27ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

64 ವರ್ಷದ ಆರ್‌.ಎಂ.ಲೋಧಾ ಅವರು ಮುಖ್ಯ ನ್ಯಾಯಮೂರ್ತಿ ಪಿ.­ಸದಾಶಿವಂ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿ­ಯಾಗಿ­ದ್ದಾರೆ. ಐದು ತಿಂಗಳ ಕಾಲ ಮಹತ್ವದ ಹುದ್ದೆ ನಿರ್ವ­ಹಿಸಲಿರುವ ಅವರು ಸೆ.27­ರಂದು ನಿವೃತ್ತರಾಗುವರು. ಮುಖ್ಯ ನ್ಯಾಯ­ಮೂರ್ತಿ ಸದಾಶಿವಂ ಅವರು ಲೋಧಾ ಹೆಸರನ್ನು ಮುಂದಿನ ಮುಖ್ಯ ನ್ಯಾಯ­ಮೂರ್ತಿ ಹುದ್ದೆಗೆ ಸೂಚಿಸಿದ್ದರು.

  ಜೋಧಪುರದಲ್ಲಿ ಜನಿಸಿದ ಲೋಧಾ ಅವರು 1973ರಲ್ಲಿ ರಾಜ­ಸ್ತಾನ­ದಲ್ಲಿ ವಕೀಲ ವೃತ್ತಿ ಆರಂಭಿಸಿ­ದರು.ರಾಜ­ಸ್ತಾನ ಹೈಕೋರ್ಟ್‌­ನಲ್ಲಿ –ಸಾಂವಿ­ಧಾನಿಕ, ಸಿವಿಲ್‌, ಕಂಪೆನಿ, ಕ್ರಿಮಿನಲ್‌, ತೆರಿಗೆ, ಕಾರ್ಮಿಕ– ಹೀಗೆ ವಿವಿಧ ಬಗೆಯ ವ್ಯಾಜ್ಯಗಳನ್ನು ನಿರ್ವ­ಹಿಸಿದ ಅನುಭವ ಅವರದ್ದಾಗಿದೆ.

1994ರ ಜನವರಿಯಲ್ಲಿ ರಾಜ­ಸ್ತಾನ ಹೈಕೋರ್ಟ್‌ನ ಕಾಯಂ ನ್ಯಾಯ­ಮೂರ್ತಿಯಾಗಿ ನೇಮಕ­ವಾದ ಅವರು ಅದೇ ಫೆಬ್ರುವರಿಯಲ್ಲಿ  ಬಾಂಬೆ ಹೈಕೋರ್ಟ್‌ಗೆ ವರ್ಗಾವಣೆ­ಗೊಂಡರು ನಂತರ, 2008ರ ಮೇ 13ರಲ್ಲಿ ಪಟ್ನಾ ಹೈಕೋರ್ಟ್‌ ಮುಖ್ಯ ನ್ಯಾಯ­ಮೂರ್ತಿ­ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅವರು ಅದೇ ವರ್ಷದ ಡಿ.17ಕ್ಕೆ ಸುಪ್ರೀಂ­ಕೋರ್ಟ್‌ ನ್ಯಾಯ­­ಮೂರ್ತಿಯಾಗಿ ಬಡ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT