ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಬ್ರಹ್ಮಚಾರಿಗಳ ಕೂಟ: ಒವೈಸಿ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಹೈದರಾಬಾದ್‌(ಪಿಟಿಐ):  ಆರ್‌ಎಸ್‌­ಎಸ್‌ ಒಂದು ಅವಿವಾಹಿತರ (ಬ್ರಹ್ಮಚಾ­ರಿಗಳು) ಗುಂಪು  ಎಂದು ಹೇಳಿರುವ ಅಖಿಲ ಭಾರತ ಮಜ್ಲಿಸ್-ಎ- ಇತ್ತೆ­ಹಾದುಲ್ ಮುಸ್ಲಿಮೀನ್ (ಎಂಐಎಂ)  ಮುಖಂಡ  ಅಕ್ಬರುದ್ದಿನ್‌ ಒವೈಸಿ, ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರ­ಬೇಕು ಎಂದು ಇವರು ಕರೆ ನೀಡುತ್ತಿ­ದ್ದಾರೆ. ಆದರೆ ಹೀಗೆ ಕರೆ ಕೊಡುವುದಕ್ಕೆ ಇವರಿಗೆ ಯಾವುದೇ ಹಕ್ಕಿಲ್ಲ. ಯಾಕೆಂದರೆ ಇವರು ವಿವಾಹವೇ ಆಗಿಲ್ಲ  ಎಂದಿದ್ದಾರೆ. ಕೋಮುವಾದಿ ರಾಜ­ಕೀ­ಯದ ವಿರುದ್ಧ ತಮ್ಮ ಪಕ್ಷ ಹೋರಾಟ ನಡೆಸಲಿದೆ ಎಂದಿರುವ ಅವರು, ಎಲ್ಲ ಮುಸ್ಲಿಮರು ಒಗ್ಗಟ್ಟಾಗಬೇಕು ಎಂದು ಕರೆ ನೀಡಿದ್ದಾರೆ.

ತಮ್ಮ ಧರ್ಮವನ್ನು ರಕ್ಷಿಸಲು ಹಿಂದೂ ಮಹಿಳೆ­ಯರು ಕಡ್ಡಾಯ­ವಾಗಿ 4 ಮಕ್ಕಳನ್ನು ಹೆರಬೇಕು ಎಂದು ಕೆಲ ದಿನಗಳ ಹಿಂದೆ  ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್‌ ನೀಡಿದ್ದರು. ಆದರೆ ಮಹಾರಾಜ್‌ ಹೇಳಿಕೆ ಉಲ್ಲೇ­ಖಿ­ಸದೆ ಅಕ್ಬರುದ್ದೀನ್‌, ಆರ್‌ಎಸ್ಎಸ್‌ ಬಗ್ಗೆ ತೆಲಂಗಾಣ ವಿಧಾನಸಭೆಯಲ್ಲಿ ಸೋಮ­ವಾರ ಹೇಳಿಕೆ ನೀಡಿದ್ದಾರೆ. ಹೆಚ್ಚು ಮಕ್ಕ­ಳನ್ನು ಹೆರುವ ಬಗ್ಗೆ ಮಾತ­ನಾಡುವ­ವರು ಆ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗ ಕೊಡಿಸಲು ಸಂಪನ್ಮೂಲ­ಗಳನ್ನು ಹೊಂದಿ­ದ್ದಾ­ರೆಯೇ  ಎಂದು ಪ್ರಶ್ನಿಸಿದರು.

‘ಆರ್‌ಎಸ್‌ಎಸ್‌ ಪ್ರಚಾರಕರು ವಿವಾ­ಹವಾಗುವುದಿಲ್ಲ. ಅದೊಂದು ಅವಿವಾಹಿತರ ಗುಂಪು. ಅವರು ಮದುವೆಯೇ ಆಗು­ವುದಿಲ್ಲ. ಹಾಗಾಗಿ ಜವಾ­ಬ್ದಾರಿಯನ್ನೂ ತೆಗೆದು­ಕೊಳ್ಳು­ವುದಿಲ್ಲ. ಹೆಂಡತಿ, ಮಕ್ಕಳು ಮುಂತಾದ ಜೀವನದ ಸವಾಲುಗಳನ್ನು  ಎದುರಿಸು­ವು­ದಿಲ್ಲ. ಆದರೆ ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಇತರರಿಗೆ ಬೋಧನೆ ಮಾಡುತ್ತಾರೆ’ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT