ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಒ ಕಚೇರಿ ಮುಂದೆ ತಮಟೆ ಚಳವಳಿ

Last Updated 19 ಸೆಪ್ಟೆಂಬರ್ 2014, 19:53 IST
ಅಕ್ಷರ ಗಾತ್ರ

ಯಲಹಂಕ: ಇಲ್ಲಿನ ಸಹಾಯಕ ಪ್ರಾದೇ­ಶಿಕ ಸಾರಿಗೆ ಅಧಿಕಾರಿಗಳು ಭ್ರಷ್ಟಾ­ಚಾರದಲ್ಲಿ ತೊಡಗಿದ್ದು, ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿ, ಪ್ರಜಾ­ವಿಮೋಚನಾ ಚಳವಳಿ (ಅಂಬೇಡ್ಕರ್‌ ವಾದ) ಕಾರ್ಯಕರ್ತರು ಉಪನಗರದ ಆರ್‌ಟಿಒ ಕಚೇರಿ ಮುಂಭಾಗದಲ್ಲಿ ಬೃಹತ್‌ ತಮಟೆ ಚಳವಳಿ ನಡೆಸಿದರು.

ಚಳವಳಿಯ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ವೆಂಕಟೇಶ್‌ ಮಾತನಾಡಿ, ಪ್ರಾದೇಶಿಕ  ಸಾರಿಗೆ ಅಧಿಕಾರಿಗಳಿಂದ  ಸಾರಿಗೆ ಪರವಾನಗಿ ಪತ್ರ, ಚಾಲನ ಪರವಾನಗಿ ಪತ್ರ ನವೀಕರಣ ಹಾಗೂ ನೋಂದಣಿಪತ್ರ ಪಡೆದುಕೊಳ್ಳಲು ನಾಗರಿಕರು ತೀವ್ರ ಶೋಷಣೆಗೆ ಒಳ­ಗಾಗುವಂತಾಗಿದೆ ಎಂದು ದೂರಿದರು.

ಸಾರಿಗೆ ಇಲಾಖೆಯ ಅಧೀಕ್ಷಕ ಶ್ರೀನಿವಾಸ್‌ ಮನವಿಪತ್ರ ಸ್ವೀಕರಿಸಿದರು. ಚಳವಳಿಯ ರಾಜ್ಯ ಉಪಾಧ್ಯಕ್ಷ ರಾಜಾನುಕುಂಟೆ ವೆಂಕಟೇಶ್‌, ಪ್ರಧಾನ ಕಾರ್ಯದರ್ಶಿ ಬಾಗಲೂರು ಪ್ರಕಾಶ್‌, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್‌.ಜಿ, ಉತ್ತರ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ, ಯಲಹಂಕ ಕ್ಷೇತ್ರದ ಅಧ್ಯಕ್ಷ ನಾಗೇನಹಳ್ಳಿ ವಿ.ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT