ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಂಬಗಿರಿ ಬ್ರಹ್ಮರಥೋತ್ಸವ

Last Updated 16 ಏಪ್ರಿಲ್ 2014, 9:28 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದ ಪ್ರಸಿದ್ದ ಯಾತ್ರಾ­ಸ್ಥಳ ತಾಲ್ಲೂಕಿನ ಆಲಂಬಗಿರಿಯ ಕಲ್ಕಿ ಲಕ್ಷ್ಮೀವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಚೈತ್ರಮಾಸದ ಹುಣ್ಣಿಮೆ­ಯಾದ ಮಂಗಳವಾರ ವಿಜೃಂಭಣೆ­ಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ದೇವಾ­ಲಯ­ವನ್ನು ವಿಶೇಷವಾಗಿ ಅಲಂಕರಿಸ­ಲಾಗಿತ್ತು. ಬೆಳಿಗ್ಗೆಯಿಂದಲೇ ದೂರದ ಊರುಗಳಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸರತಿಯಲ್ಲಿ ನಿಂತು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೈವಾರದಿಂದ ಅಲಂಕೃತ ಪಲ್ಲಕ್ಕಿ­ಯಲ್ಲಿ ಯೋಗಿನಾರೇಯಣ ಯತೀಂದ್ರರ ಉತ್ಸವಮೂರ್ತಿಯನ್ನು ತಂದು ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದ ಪ್ರಾಂಗಣದಲ್ಲಿ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸ­ಲಾಯಿತು. ಮಠದ ಧರ್ಮಾಧಿಕಾರಿ ಡಾ.ಎಂ.ಆರ್‌.ಜಯರಾಂ ನೇತೃತ್ವದಲ್ಲಿ ಶ್ರೀಕೃಷ್ಣ ಗಂಧೋತ್ಸವ ಸೇವೆಯನ್ನು ಸಲ್ಲಿಸಲಾಯಿತು.

ಗಂಧೋತ್ಸವದ ನಂತರ ಆಸ್ಥಾನ ಸೇವೆಯನ್ನು ನೆರವೇರಿಸಿ ಶ್ರೀದೇವಿ, ಭೂದೇವಿ ಶ್ರೀನಿವಾಸಮೂರ್ತಿಯನ್ನು ಶಾಸ್ತ್ರೋಕ್ತವಾಗಿ ಮಂಗಳ ವಾದ್ಯ­ಗಳೊಂದಿಗೆ ತಂದು  ಅಲಂಕೃತಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ರಥವು ಮುಂದೆ ಸಾಗುತ್ತಿದ್ದಂತೆ  ಭಕ್ತರ ಗೋವಿಂದ ನಾಮಸ್ಮರಣೆ ಮುಗಿಲು ಮುಟ್ಟಿತು. ದೇವಾಲಯದ ಸುತ್ತಲೂ ಭಕ್ತರು ಜೈಕಾರ ಹಾಕುತ್ತಾ ಸಡಗರ ಸಂಭ್ರಮದಿಂದ ರಥವನ್ನು ಎಳೆದು ತಂದರು. ಮಾರ್ಗದ ಇಕ್ಕೆಲ­ಗಳಲ್ಲಿ ನೆರೆದಿದ್ದ ನೂರಾರು ಭಕ್ತರು ತೇರಿಗೆ ಬಾಳೆಹಣ್ಣು, ಧವನವನ್ನು ಅರ್ಪಿಸಿದರು.

ಬಿಸಿಲಿನ ಬೇಗೆಯನ್ನು ತಣಿಸಲು ಸುತ್ತಮುತ್ತಲಿನ ಗ್ರಾಮಸ್ಥರು ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳಲ್ಲಿ ಮಜ್ಜಿಗೆ, ಪಾನಕ, ಕೋಸುಂಬರಿಯನ್ನು ವಿತರಿ­ಸುತ್ತಿ­­ದ್ದರು. ಯೋಗಿನಾರೇಯಣ ಮಠದ ಸಹಯೋಗದೊಂದಿಗೆ ಗ್ರಾಮ­ಸ್ಥರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ಗ್ರಾಮದ ಶ್ರೀನಿವಾಸ್‌ ಮತ್ತು ತಂಡದವರು ನಾದಸ್ವರ ಸೇವೆಯನ್ನು ನಡೆಸಿಕೊಟ್ಟರು. ಶ್ರೀರಾಮ­ನವಮಿ-­ಯಿಂದಲೇ ಆರಂಭವಾಗಿರುವ ರಥೋ­ತ್ಸವ ಕಾರ್ಯಕ್ರಮಗಳು 11 ದಿನಗಳ ಕಾಲ ನಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT