ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಮದ ಲಾಕರ್‌ನಲ್ಲಿ ಶಸ್ತ್ರಾಸ್ತ್ರ ಪತ್ತೆ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬರ್ವಾಲಾ (ಹರಿಯಾಣ) (ಪಿಟಿಐ): ಬಂಧಿತ ‘ದೇವ­ಮಾನವ’ ರಾಮ್‌ಪಾಲ್‌ ಅವರ ಸತ್‌ಲೋಕ್‌ ಆಶ್ರಮದ ಲಾಕರ್‌­ಗಳಲ್ಲಿ ನಗದು, ಶಸ್ತ್ರಾಸ್ತ್ರ, ಗುಂಡು ನಿರೋಧಕ ಜಾಕೆಟ್‌ಗಳು, ಕಮಾಂಡೊ ಉಡುಪುಗಳು ಪತ್ತೆಯಾಗಿವೆ  ಎಂದು ಪೊಲೀಸರು ಹೇಳಿದ್ದಾರೆ.

ರಾಮ್‌ಪಾಲ್‌ ಅವರನ್ನು ಆಶ್ರಮಕ್ಕೆ ಕರೆದೊಯ್ದ ಪೊಲೀಸರು ಆಶ್ರಮದಲ್ಲಿನ ಕಪಾಟುಗಳು ಮತ್ತು ಲಾಕರ್‌ಗಳ ಬಗ್ಗೆ ಅವರಿಂದ ಮಾಹಿತಿ ಪಡೆದು, ಸಾಕ್ಷ್ಯಗಳನ್ನು ಸಂಗ್ರಹಿಸಿದರು.

ಸಾವಿರಾರು ಲಾಠಿಗಳು, ಸುಮಾರು 100 ಹೆಲ್ಮೆಟ್‌ಗಳು, ಕಮಾಂಡೊಗಳ 20 ಉಡುಪುಗಳು, 80 ಕಪ್ಪು ಶರ್ಟ್‌ಗಳು, ಆ್ಯಸಿಡ್‌ ಬಾಟಲಿಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT