ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ ಪ್ರಶಸ್ತಿಗೆ ‘ಲೈಯರ್ಸ್‌ ಡೈಸ್‌’ ನಾಮಕರಣ

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಲಯಾಳಂ ನಟಿ ಗೀತು ಮೋಹನ್‌­ದಾಸ್‌ ಅವರ ಚೊಚ್ಚಲ ನಿರ್ದೇಶನದ ಹಿಂದಿ ಚಲನಚಿತ್ರ ‘ಲೈಯರ್ಸ್‌ ಡೈಸ್’ 87ನೇ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿ-ನಿಧಿಸುವ ಚಿತ್ರವಾಗಿ ಆಯ್ಕೆಯಾಗಿದೆ.

ಪ್ರಖ್ಯಾತ ನಿರ್ದೇಶಕ ಟಿ. ಹರಿಹರನ್‌ ನೇತೃತ್ವದ 12 ಸದಸ್ಯರ ಸಮಿತಿ ಈ  ಆಯ್ಕೆ ಮಾಡಿದೆ. ಭಾರತ–ಟಿಬೆಟ್‌ ಗಡಿಯಲ್ಲಿನ ಹಳ್ಳಿ-ಯೊಂದರಲ್ಲಿ ವಾಸಿಸುವ ಬುಡ-ಕಟ್ಟು ಮಹಿಳೆಯೊಬ್ಬಳು  ಕಾಣೆ­ಯಾದ ಪತಿಗಾಗಿ ನಡೆಸುವ ಹುಡು­ಕಾಟದ ಪಯಣ ‘ಲೈಯರ್ಸ್‌ ಡೈಸ್’ನ ಕಥಾ­ಹಂದರ. ಗೀತಾಂಜಲಿ ಥಾಪಾ ಮತ್ತು ನವಾಜುದ್ದೀನ್‌ ಸಿದ್ದಿಕಿ ಮುಖ್ಯ ತಾರಾಗಣದಲ್ಲಿದ್ದಾರೆ.

ಈ ಸಿನಿಮಾದ ಉತ್ತಮ ನಟನೆಗಾಗಿ ನಟಿ ಗೀತಾಂಜಲಿ ಮತ್ತು ಉತ್ತಮ ಛಾಯಾಗ್ರಹಣಕ್ಕಾಗಿ ರಾಜೀವ್‌ ರವಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ‘ಮೇರಿ ಕೋಮ್‌’ ಸೇರಿದಂತೆ ಸ್ಪರ್ಧೆಗಿದ್ದ ದೇಶದ ಒಟ್ಟು 29 ಚಿತ್ರಗ­ಳನ್ನು ಹಿಂದಿಕ್ಕಿ­ ವಿದೇಶಿ ಚಲನಚಿತ್ರಗಳ ವಿಭಾಗ­ದಲ್ಲಿ ಈ ಚಿತ್ರ ಭಾರತವನ್ನು ಪ್ರತಿನಿಧಿ­ಸಲಿದೆ ಎಂದು ಭಾರತೀಯ ಚಲನಚಿತ್ರ ಒಕ್ಕೂ­ಟದ (ಎಫ್ಎಫ್‌ಐ) ಕಾರ್ಯ­ದರ್ಶಿ ಸುಪರ್ಣಾ ಸೇನ್‌ ತಿಳಿಸಿದ್ದಾರೆ. ಹಿಂದಿಯ ‘ಶಾಹಿದ್‌’, ‘ಕ್ವೀನ್‌’, ‘ಮರ್ದಾನಿ’, ಮರಾಠಿಯ ‘ಯಲ್ಲೋ’, ‘ಫ್ಯಾನ್‌ಡ್ರೈ’ ಮತ್ತು  ಬಂಗಾಳಿಯ ‘ಜಾತಿಶ್ವರ್‌’, ‘ಅಪೂರ್‌ ಪಾಂಚಾಲಿ’ ಸ್ಪರ್ಧೆಯಲ್ಲಿದ್ದ ಇತರ ಪ್ರಮುಖ ಚಲನಚಿತ್ರಗಳು. 2015ರ ಫೆಬ್ರುವರಿ 22ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT