ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಕರ್‌ ಸಂಭಾವ್ಯ ಪಟ್ಟಿಯಲ್ಲಿ ಹಿಂದಿಯ ‘ಜಲ್’

Last Updated 13 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬಾಲಿವುಡ್‌ನ ಹೆಸರಾಂತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸತತ ಮೂರನೇ ಬಾರಿಗೆ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನ­ಗೊಂಡಿ­­­ದ್ದಾರೆ. ಈ ಬಾರಿ ಅವರು ಸಂಗೀತ  ನೀಡಿರುವ ಹಿಂದಿ ಚಲನಚಿತ್ರ ‘ಜಲ್’ ‘ಒರಿಜಿನಲ್ ಸ್ಕೋರ್’ ವಿಭಾ­ಗದ 114 ಸಂಭಾವ್ಯ ಚಿತ್ರಗಳ ಪಟ್ಟಿ­ಯಲ್ಲಿ ಸ್ಥಾನ ಪಡೆದಿದೆ.

ರೆಹಮಾನ್ ಸಂಗೀತ ನಿರ್ದೇಶನದ ‘127 ಹವರ್ಸ್’ ಮತ್ತು ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರಗಳಿಗೆ ಆಸ್ಕರ್ ಪ್ರಶಸ್ತಿ ಒಲಿದಿತ್ತು. ಅಲ್ಲದೆ ‘ದಿ ಹಂಡ್ರೆಡ್‌ಫೂಟ್ ಜರ್ನಿ’, ‘ಮಿಲಿಯನ್ ಡಾಲರ್ ಆರ್ಮ್’ ಮತ್ತು ರಜನಿ­ಕಾಂತ್‌ ಅಭಿನಯದ ‘ಕೊಚಾಡಿಯನ್’ ಚಿತ್ರ­ಗಳು ಆಸ್ಕರ್‌ಗೆ ಆಯ್ಕೆಯಾಗಿದ್ದವು.

ಗಿರೀಶ್ ಮಲಿಕ್ ನಿರ್ದೇಶನದ ‘ಜಲ್’  ಆಸ್ಕರ್ ಸಿದ್ಧಪಡಿಸಿರುವ 100 ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದೆ ಎನ್ನಲಾಗಿದೆ. ಜಲ್ ಚಿತ್ರ­ವನ್ನು ಸ್ವತಂತ್ರ ಪ್ರವೇಶದ ಅಡಿ­ಯಲ್ಲಿ ಸಲ್ಲಿಸಲಾಗಿತ್ತು. ‘ಲೈಯರ್ಸ್ ಡೈಸ್’ ಆಸ್ಕರ್‌ನಲ್ಲಿ ಈ ಭಾರಿ ಭಾರತವನ್ನು ಪ್ರತಿನಿಧಿಸುತ್ತಿರುವ ಚಿತ್ರ.

‘‘ಜಲ್‌’, ಸ್ವತಂತ್ರ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳ ವಿಭಾಗದಲ್ಲಿ ಸ್ಪರ್ಧಿಸಲಿದೆ. ನಾವು ನೇರವಾಗಿ ಆಸ್ಕರ್‌ ಅಕಾಡೆಮಿಗೆ ಚಿತ್ರವನ್ನು ಕಳುಹಿಸಿದೆವು. ನಮಗೆ ನಮ್ಮ ಕೆಲಸ ಮತ್ತು ಚಿತ್ರಕತೆಯ ಬಗ್ಗೆ ನಂಬಿಕೆಯಿತ್ತು. ಚಿತ್ರಕತೆಯನ್ನು ಆಸ್ಕರ್‌ ಲೈಬ್ರೆರಿ ಪರಿಗಣಿಸಿರುವ ಬಗ್ಗೆ ಎರಡು ದಿನಗಳ ಹಿಂದೆಯಷ್ಟೇ ನಮಗೆ ಸುದ್ದಿ ಬಂತು’ ಎಂದು ಚಿತ್ರದ ನಿರ್ಮಾ­ಪಕ ಪುನೀತ್‌ ಸಿಂಗ್‌ ಸುದ್ದಿಸಂಸ್ಥೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT