ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ವಿಶ್ವವಿಜೇತ

Last Updated 29 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾ ತಂಡ ಮತ್ತೆ ಕ್ರಿಕೆಟ್‌ ಜಗತ್ತಿನ ‘ರಾಜ’ ಎನಿಸಿದೆ. ದಾಖಲೆಯ ಐದನೇ ಬಾರಿ ಏಕದಿನ ವಿಶ್ವಕಪ್‌ ಟ್ರೋಫಿ ಎತ್ತಿಹಿಡಿಯುವಲ್ಲಿ ಈ ತಂಡ ಯಶಸ್ವಿಯಾಗಿದೆ.

ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ ಭಾನುವಾರ ನಡೆದ 11ನೇ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಏಳು ವಿಕೆಟ್‌ಗಳಿಂದ ನ್ಯೂಜಿಲೆಂಡ್‌ ತಂಡವನ್ನು ಮಣಿಸಿತು.  ಚೊಚ್ಚಲ ಪ್ರಶಸ್ತಿ ಗೆಲ್ಲಬೇಕೆಂಬ ಕಿವೀಸ್‌ ತಂಡದ ಕನಸು ನುಚ್ಚುನೂರಾಗಿದೆ.

4 ವರ್ಷಗಳ ಹಿಂದೆ ಕೈತಪ್ಪಿ ಹೋಗಿದ್ದ ಕಿರೀಟವನ್ನು ಮರಳಿ ಪಡೆದ ಆಸ್ಟ್ರೇಲಿಯಾ, ವಿಶ್ವ ಕ್ರಿಕೆಟ್‌ನ ಉತ್ತುಂಗದ ಶಿಖರವನ್ನೇರಿದೆ.

ಇದರೊಂದಿಗೆ ಆರು ವಾರಗಳ ಕಾಲ ನಡೆದ ‘ಕ್ರಿಕೆಟ್‌ ಹಬ್ಬ’ಕ್ಕೆ ತೆರೆಬಿದ್ದಿದೆ. 2019ರ ವಿಶ್ವಕಪ್‌ ಇಂಗ್ಲೆಂಡ್‌ ಮತ್ತು ವೇಲ್ಸ್‌ನ ಆತಿಥ್ಯದಲ್ಲಿ ನಡೆಯಲಿದೆ.  ಫೈನಲ್‌ ಪಂದ್ಯ ರೋಚಕತೆಯಿಂದ ಕೂಡಿರಲಿದೆ ಎಂದು ಕೋಟಿ ಕೋಟಿ ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸಿದ್ದರು. ಆದರೆ ಎದುರಾಳಿ ತಂಡವನ್ನು ಆಟದ ಎಲ್ಲ ವಿಭಾಗಗಳಲ್ಲೂ ಹಿಮ್ಮೆಟ್ಟಿಸಿದ ಆಸ್ಟ್ರೇಲಿಯಾ ಏಕಪಕ್ಷೀಯವಾಗಿ ಗೆಲುವು ಒಲಿಸಿಕೊಂಡಿತು.

ಜೇಮ್ಸ್‌ ಫಾಕ್ನರ್‌ ಮತ್ತು ಮಿಷೆಲ್‌ ಜಾನ್ಸನ್‌ ಪ್ರಭಾವಿ ದಾಳಿ ನಡೆಸಿ ಎದುರಾಳಿ ತಂಡವನ್ನು 183 ರನ್‌ಗಳಿಗೆ ನಿಯಂತ್ರಿಸಿದರು.

ಆಸ್ಟ್ರೇಲಿಯಾ 33.1 ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್‌ ಕಳೆದುಕೊಂಡು ಜಯ ಸಾಧಿಸಿತು.

1992 ರಲ್ಲಿ ವಿಶ್ವಕಪ್‌ಗೆ ಆತಿಥ್ಯ ವಹಿಸಿದ್ದಾಗ ಆಸ್ಟ್ರೇಲಿಯಾಕ್ಕೆ ನಿರಾಸೆ ಎದುರಾಗಿತ್ತು. ಇದೀಗ 23 ವರ್ಷಗಳ ಬಿಡುವಿನ ಬಳಿಕ ಆ ನಿರಾಸೆಯನ್ನು ಮರೆಸುವಲ್ಲಿ ಯಶಸ್ವಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT