ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ವಿವರ ಸಲ್ಲಿಸಲಿ

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸೇವಾ ನಿಯಮಾವಳಿಗೆ ಅನುಗುಣವಾಗಿ  ನೌಕರರು ತಾವು ಮಾಡಿರುವ ಸಾಲ, ಗಳಿಸಿರುವ ಸಂಪತ್ತು ಕುರಿತು ವಿವರವಾದ ಮಾಹಿತಿಯನ್ನು ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ ಸರ್ಕಾರಕ್ಕೆ ಸಲ್ಲಿ­ಸ­ಬೇಕಿರುತ್ತದೆ. ‘ಡಿ’ ದರ್ಜೆ ನೌಕರರು ಪ್ರಾಮಾ­ಣಿ­ಕರು ಆಥವಾ ಅವರಿಗೆ ನೀತಿ ನಿರೂಪಣೆ­ಯಲ್ಲಿ ಗಣನೀಯ ಪಾತ್ರವಿಲ್ಲ ಎಂಬ ಕಾರ­ಣಕ್ಕೋ ಏನೋ ಈ ನೌಕರರು ತಮ್ಮ ವಾರ್ಷಿಕ ವರದಿ ಸಲ್ಲಿಸುವುದರಿಂದ ಇದುವರೆಗೆ ವಿನಾಯಿತಿ ನೀಡಲಾಗಿದೆ. 

ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಲೋಕಾ­ಯುಕ್ತ ದಾಳಿಗಳಲ್ಲಿ  ‘ಡಿ’ ದರ್ಜೆಯ  ಕೆಲ ನೌಕ­ರರು ಅಧಿಕಾರಿಗಳಿಗಿಂತಲೂ ಹೆಚ್ಚು ಸಂಪ­ತ್ತು ಹೊಂದಿರುವ ಸತ್ಯ ಹೊರಬಂದಿದೆ. ಕೆಲವ­ರಂತೂ ಮಾಸಿಕ ₨ ೨೦-–೩೦ ಸಾವಿರ ಸಂಬಳ ಪಡೆದರೂ ₨ 2–3 ಕೋಟಿ  ಆಸ್ತಿ ಸಂಪಾ­ದಿಸಿ­ದ್ದಾರೆ.  ಈ ಕಾರಣ  ಮುಂದಿನ ದಿನ­ಗಳಲ್ಲಿ ‘ಡಿ’ ದರ್ಜೆ ನೌಕರರೂ ವಾರ್ಷಿಕ ಆಸ್ತಿ ವಿವರ ಕಡ್ಡಾಯವಾಗಿ ಸಲ್ಲಿಸಲು ನೆರವಾಗು­ವಂತೆ ಸರ್ಕಾರ ನಿಯಮಾ­ವಳಿಗಳಲ್ಲಿ ತಿದ್ದುಪಡಿ ತರಲಿ.
–ಡಾ.ಚನ್ನು ಅ. ಹಿರೇಮಠ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT