ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ.1ರಿಂದ ಅಂತರರಾಷ್ಟ್ರೀಯ ಸಮ್ಮೇಳನ

Last Updated 29 ಜುಲೈ 2014, 20:14 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲ­ಯವು ಆ.1 ಮತ್ತು  2ರಂದು ‘ಕಂಪ್ಯೂ­ಟಿಂಗ್, ಮಾಹಿತಿ ಸಂವಹನ ಮತ್ತು ಅನ್ವಯಿಕೆ’ ವಿಷಯದ ಕುರಿತು ಅಂತರರಾಷ್ಟೀಯ  ವಿಚಾರ   ಸಮ್ಮೇ­ಳನ ಹಮ್ಮಿಕೊಳ್ಳಲಾಗಿದೆ’ ಎಂದು  ಸಂಸ್ಥೆ ಪ್ರಾಂಶುಪಾಲ ಡಾ.ಎಚ್. ನಾಗರಾಜ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂತರ­ರಾಷ್ಟ್ರೀಯ  ಸಮ್ಮೇಳನವನ್ನು ಕಂಪ್ಯೂ­ಟರ್ ಸೈನ್ಸ್ ಮತ್ತು ಎಂ.ಸಿ.ಎ ವಿಭಾ­ಗಗಳು ಜಂಟಿಯಾಗಿ  ನಡೆಸುತ್ತಿದೆ’ ಎಂದರು. ‘ಸಮ್ಮೇಳನದಲ್ಲಿ ಸಂಶೋಧಕರು, ಎಂಜಿನಿಯರುಗಳು, ವಿಜ್ಞಾನಿಗಳು, ಶಿಕ್ಷಣ ತಜ್ಞರು ಮತ್ತು ತಾಂತ್ರಿಕರಿಗೆ ಅಂತರ್– ಶಾಸ್ತ್ರೀಯ ಅಧ್ಯಯನವನ್ನು ಒದಗಿಸುವ ವೇದಿಕೆಯಾಗಿದೆ. ಸಂಶೋ­ಧನೆ ವಿಷಯಕ್ಕೆ ಸಂಬಂಧಿಸಿದಂತೆ 850 ಕ್ಕಿಂತ ಹೆಚ್ಚು ಲೇಖನಗಳು ಬಂದಿದ್ದು, ಅವುಗಳನ್ನು ತಜ್ಞರ ಸಮಿತಿ  ಸದಸ್ಯರು ಪರಿಶೀಲಿಸಿ, ಗುಣಮಟ್ಟದ ಸಂಶೋಧ­ನೆಯ ಆಧಾರದ ಮೇಲೆ ಕೆಲ ಲೇಖನ­ಗಳನ್ನು ಸಮ್ಮೇಳನದಲ್ಲಿ ಮಂಡಿಸಲಾ­ಗುವುದು ಎಂದರು.

‘ಸಮ್ಮೇಳನಕ್ಕೆ 3ರಿಂದ 4 ಸಾವಿರ ವಿದ್ಯಾರ್ಥಿ­ಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT