ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್ ಸಾಮರ್ಥ್ಯ ಪರೀಕ್ಷೆ ‘ಟೊಫೆಲ್’

Last Updated 12 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುವ ಕನಸು ಯಾರಿಗಿಲ್ಲ? ಆದರೆ ಇಂಗ್ಲಿಷ್ ಹೇಗಿರಬೇಕೆಂಬ ಪ್ರಶ್ನೆ ಬಹುತೇಕರಲ್ಲಿದೆ. ವಿದೇಶಿ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಆಯ್ಕೆಗೆ ಮುನ್ನ ಅವರ ಇಂಗ್ಲಿಷ್ ಸಾಮರ್ಥ್ಯದ ಕುರಿತು ವಿಶೇಷ ಕಾಳಜಿ ವಹಿಸುತ್ತವೆ. ಹಾಗಾದರೆ ವಿದ್ಯಾರ್ಥಿಗಳ ಇಂಗ್ಲಿಷ್ ಮಾನದಂಡದ ಪರೀಕ್ಷೆ ಏನು? ಇಲ್ಲಿದೆ ಟಿಒಇಎಫ್‌ಎಲ್ (ಟೊಫೆಲ್) ಪರೀಕ್ಷೆ.

ಇಂಗ್ಲಿಷ್ ಭಾಷೆಯ ಮೇಲೆ ನಿಮಗೆಷ್ಟು ಹಿಡಿತವಿದೆ ಎಂಬುದನ್ನು ಪರೀಕ್ಷಿಸಲು ಟೊಫೆಲ್ ಪರೀಕ್ಷೆ ನಡೆಯುತ್ತದೆ. ಭಾರತ ಸೇರಿದಂತೆ ವಿಶ್ವದ 130 ರಾಷ್ಟ್ರಗಳಲ್ಲಿ ಈ ಪರೀಕ್ಷೆಗೆ ಮಾನ್ಯತೆ ಇದೆ. ಆಸ್ಟ್ರೇಲಿಯ, ಕೆನಡ, ಬ್ರಿಟನ್ ಮತ್ತು ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳು ಸೇರಿ ವಿಶ್ವದ 9000ಕ್ಕೂ ಹೆಚ್ಚು ಸಂಸ್ಥೆಗಳು ವಿದ್ಯಾರ್ಥಿಗಳ ಆಯ್ಕೆಗೆ ಮುನ್ನ ಟೊಫೆಲ್ ಪರೀಕ್ಷೆಯ ಅಂಕಗಳನ್ನು ಗಮನಿಸುತ್ತವೆ.

ಟೊಫೆಲ್ ಪರೀಕ್ಷೆಗೆ 50ವರ್ಷಗಳ ಇತಿಹಾಸವಿದೆ. 50ನೇ ವರ್ಷಾಚರಣೆಗಾಗಿ ಟೊಫೆಲ್ ಪರೀಕ್ಷೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ.  ವಿದ್ಯಾರ್ಥಿಯ ಇಂಗ್ಲಿಷ್ ಓದು, ಬರಹ, ಸಂಭಾಷಣೆ ಮತ್ತು ಆಲಿಕೆಯ ಸಾಮರ್ಥ್ಯಕ್ಕೆ ಇದು ಕೈಗನ್ನಡಿ.  ಈ ಕೌಶಲಗಳನ್ನು ಟೊಫೆಲ್ ಪರೀಕ್ಷೆಯ ಮೂಲಕ ನಿಖರವಾಗಿ ಪತ್ತೆಹಚ್ಚಲು ಸಾಧ್ಯ. ಓದು, ಆಲಿಕೆ, ಸಂಭಾಷಣೆ ಮತ್ತು ಬರಹದ ಸಾಮರ್ಥ್ಯವನ್ನು ದೈನಂದಿನ ಸಂವಹನದಲ್ಲಿ ವಿದ್ಯಾರ್ಥಿಯೊಬ್ಬ ಹೇಗೆ ಬಳಸಿಕೊಳ್ಳುತ್ತಿದ್ದಾನೆ ಎಂಬುದನ್ನು ಗುರುತಿಸುತ್ತದೆ. ಉದಾಹರಣೆಗೆ ಪರೀಕ್ಷೆಯಲ್ಲಿ ವಿದ್ಯಾರ್ಥಿ ಒಂದು ಪ್ರಬಂಧವನ್ನು ಓದಿ, ಅದೇ ವಿಷಯದ ಮೇಲೆ ನೀಡುವ ಉಪನ್ಯಾಸವನ್ನು ಕೇಳಬೇಕು. ಎರಡೂ ಮೂಲಗಳಿಂದ ದೊರೆತ ಮಾಹಿತಿಯಿಂದ ತನ್ನದೇ ಪ್ರಬಂಧ ಸಿದ್ಧಪಡಿಸಬೇಕು. 

ಟೊಫೆಲ್ ಪರೀಕ್ಷೆಗೆ ಸಜ್ಜಾಗುವುದು ಹೇಗೆ?
ಟೊಫೆಲ್ ಯಾವುದೇ ರೀತಿಯ ತರಬೇತಿ ತರಗತಿಗಳನ್ನು ನಡೆಸುವುದಿಲ್ಲ. ಆದರೆ ಓದಿಗೆ ಅನುಕೂಲವಾದ ಪುಸ್ತಕಗಳು ಮತ್ತು ಶಿಕ್ಷಕರಿಗೆ ಉಚಿತ ಕಾರ್ಯಾಗಾರಗಳನ್ನು ಟೊಫೆಲ್ ನಡೆಸುತ್ತ ಬಂದಿದೆ. ಅಲ್ಲದೇ ಆನ್‌ಲೈನ್ ಪ್ರೆಪ್ ಕೋರ್ಸ್ ಮೂಲಕ ಆನ್‌ಲೈನ್‌ನಲ್ಲಿಯೂ ವಿದ್ಯಾರ್ಥಿಗಳು ತರಬೇತಿ ಪಡೆಯಬಹುದು. ಭಾರತದಲ್ಲಿ ಟೊಫೆಲ್ ಹಲವು ರೀತಿಯ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ನಡೆಸುತ್ತದೆ. ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ ಮತ್ತು ಕಾಲೇಜು ಉತ್ಸವಗಳನ್ನು ಇದು ಆಯೋಜಿಸುತ್ತಿದೆ. ಆನ್‌ಲೈನ್‌ನಲ್ಲಿ 1.3 ಕೋಟಿಗೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. ಆನ್‌ಲೈನ್ ತರಬೇತಿ ಇಂಟರ್‌್ಯಾಕ್ಟಿವ್ ಮಾದರಿಯಲ್ಲಿರುವುದರಿಂದ ವಿದ್ಯಾರ್ಥಿಗಳಿಗೆ ಇದು ಅನುಕೂಲಕರವಾಗಿದೆ.

ಟೊಫೆಲ್‌ನwww.TOEFLGoAnywhere.orgವೆಬ್‌ಸೈಟಿನಲ್ಲಿ ಮಾದರಿ ಪ್ರಶ್ನೆಗಳ ಭಂಡಾರವೇ ಇದೆ. ಇಲ್ಲಿಯೂ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು. ವಿಶ್ವಾದ್ಯಂತ ಟೊಫೆಲ್ ಪರೀಕ್ಷೆಯನ್ನು ಒಪ್ಪಿಕೊಂಡಿರುವ 8500ಕ್ಕೂ ಹೆಚ್ಚು ಸಂಸ್ಥೆಗಳ ಲಿಂಕ್‌ಗಳು ಇಲ್ಲಿ ದೊರೆಯುತ್ತವೆ.

ಟೊಫೆಲ್ ಪರೀಕ್ಷೆ ಸಿದ್ಧತೆಗೆ ಇಟಿಎಸ್ ಸಂಸ್ಥೆ ಕೈಪಿಡಿಯನ್ನು ಹೊರತರುತ್ತಿದೆ. ಇಟಿಎಸ್ ಆನ್‌ಲೈನ್‌ನಲ್ಲಿಯೂ ತರಬೇತಿಯನ್ನು ನೀಡುತ್ತಿದೆ. ಆನ್‌ಲೈನ್‌ನಲ್ಲಿಯೇ ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರಿಸಿ ಅದೇ ದಿನ ಅಂಕಗಳನ್ನು ತಿಳಿದುಕೊಳ್ಳಬಹುದು.   ಆಸಕ್ತರು www.TOEFLGoAnywhere.org ವೆಬ್‌ತಾಣ ಸಂಪರ್ಕಿಸಬಹುದು. ಇವೆಲ್ಲವೂ ಜೊತೆಗೆ ಮಾದರಿ ಪತ್ರಿಕೆಯೂ ಉಚಿತವಾಗಿರುತ್ತದೆ.

ಟೊಫೆಲ್ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಸುಮಾರು 7500ರೂ.ಗಳನ್ನು ಭರಿಸಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಯೋಜನೆ ಇದೆ. ಕಳೆದ ಐದು ವರ್ಷಗಳಿಂದ ಭಾರತದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ನೀಡುತ್ತಿದೆ. ಪರೀಕ್ಷೆ ಬರೆದ ಸುಮಾರು 10ದಿನಗಳಲ್ಲಿ ಪಡೆದ ಅಂಕಗಳ ವಿವರ ಆನ್‌ಲೈನ್‌ನಲ್ಲಿಯೇ ಲಭ್ಯ. ವಿದ್ಯಾರ್ಥಿಗಳು ಪಿಡಿಎಫ್‌ನಲ್ಲಿರುವ ಫಲಿತಾಂಶದ ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಮಾಹಿತಿಗೆ: ಸೋಮವಾರದಿಂದ ಶುಕ್ರವಾರದವರೆಗೆ ಕಚೇರಿಯ ಅವಧಿಯಲ್ಲಿ 000- 800- 100- 3780  ಕರೆ ಮಾಡಬಹುದು. ಇಮೇಲ್: TOEFLsupport4India@ets.org.    +919711237111

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT