ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಅಲಿ ಶತಕದ ಬಲ

Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಸ್ಟರ್‌ ಲೆ ಸ್ಟ್ರೀಟ್‌ (ಎಎಫ್‌ಪಿ): ಮೊಯಿನ್‌ ಅಲಿ ಬಾರಿಸಿದ ಶತಕದ ನೆರವಿನಿಂದಾಗಿ ಇಂಗ್ಲೆಂಡ್ ತಂಡ ಇಲ್ಲಿ ನಡೆ ಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆ ಹಾಕಿದೆ.

ಟಾಸ್‌ ಜಯಿಸಿದ್ದ ಆತಿಥೇಯರು  ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಈ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್‌ ಕಳೆದುಕೊಂಡು 310 ರನ್ ಗಳಿಸಿತ್ತು. ಉತ್ತಮ ಆರಂಭ ಲಭಿಸಿದ್ದ ಕಾರಣ ಎರಡನೇ ದಿನವಾದ ಶನಿವಾರದ ದಿನದಾಟದ ಕೊನೆಯಲ್ಲಿ ಒಟ್ಟು ಒಂಬತ್ತು ವಿಕೆಟ್‌ಗಳಿಗೆ 498 ರನ್ ಕಲೆ ಹಾಕಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ.

ಪ್ರಥಮ ಇನಿಂಗ್ಸ್ ಆರಂಭಿಸಿರುವ ಲಂಕಾ 17  ಓವರ್‌ಗಳು ಪೂರ್ಣ ಗೊಂಡಾಗ ಮೂರು ವಿಕೆಟ್‌ ಕಳೆದು ಕೊಂಡು 56 ರನ್‌ ಕಲೆ ಹಾಕಿ ಆರಂಭಿಕ ಸಂಕಷ್ಟಕ್ಕೆ ಸಿಲುಕಿದೆ.

ಅಲಿ ಶತಕದ ಬಲ: ಮೊದಲ ದಿನದಾಟದ ಅಂತ್ಯಕ್ಕೆ 28 ರನ್ ಕಲೆ ಹಾಕಿ ಕ್ರೀಸ್‌ ಕಾಯ್ದುಕೊಂಡಿದ್ದ ಮೊಯಿನ್‌ ಅಲಿ ಶನಿವಾರ ವೇಗವಾಗಿ ರನ್ ಕಲೆ ಹಾಕಿದರು.

ಒಟ್ಟು 295 ನಿಮಿಷ ಕ್ರೀಸ್‌ನಲ್ಲಿದ್ದ ಅವರು 207 ಎಸೆತಗಳನ್ನು ಎದುರಿಸಿ ದರು. 17 ಬೌಂಡರಿ ಮತ್ತು ಎರಡು ಸಿಕ್ಸರ್‌ ಒಳಗೊಂಡಂತೆ ಔಟಾಗದೆ 155 ರನ್ ಕಲೆ ಹಾಕಿದರು. ಅಲಿ ಟೆಸ್ಟ್‌  ನಲ್ಲಿ ಗಳಿಸಿದ ಎರಡನೇ ಶತಕ ಇದಾಗಿದೆ.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ 132 ಓವರ್‌ಗಳಲ್ಲಿ 9 ವಿಕೆಟ್‌ಗೆ 498 ಡಿಕ್ಲೇರ್ಡ್‌. (ಮೊಯಿನ್‌ ಅಲಿ ಔಟಾಗದೆ 155, ಕ್ರಿಸ್‌ ವೋಕ್ಸ್ 39, ಸ್ಟುವರ್ಟ್ ಬ್ರಾಡ್‌ 7, ಸ್ಟೀವನ್‌ ಫಿನ್ 10; ಸುರಂಗ ಲಕ್ಮಲ್‌ 115ಕ್ಕೆ2, ನುವಾನ್‌ ಪ್ರದೀಪ್‌ 107ಕ್ಕೆ4, ಮಿಲಿಂದಾ ಸಿರಿವರ್ಧನ 35ಕ್ಕೆ2)
ಶ್ರೀಲಂಕಾ ಪ್ರಥಮ ಇನಿಂಗ್ಸ್ 17 ಓವರ್‌ಗಳಲ್ಲಿ 3ಕ್ಕೆ56. (ದಿಮುತ್‌ ಕರುಣಾರತ್ನೆ 9, ಕುಶಾಲ್‌ ಸಿಲ್ವಾ 13, ಕುಶಾಲ್‌ ಮೆಂಡಿಸ್‌ ಬ್ಯಾಟಿಂಗ್ 28, ದಿನೇಶ್ ಚಾಂಡಿಮಾಲ್‌ 4; ಜೇಮ್ಸ್ ಆ್ಯಂಡರ್‌ಸನ್‌ 2ಕ್ಕೆ30). ಸ್ಕೋರ್‌ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT