ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್‌ ಬಳಕೆಗೆ ₨ 1,099ರ ಮೊಬೈಲ್‌

Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯ ಜನರೂ ಇನ್ನು ಮುಂದೆ ಕಡಿಮೆ ಬೆಲೆಯ ಮೊಬೈಲ್‌ ಫೋನ್‌ನಲ್ಲಿ ಇಂಟರ್‌ನೆಟ್‌ ಮತ್ತು ಇ–ಆಡಳಿತದ ಲಾಭ ಪಡೆಯ­ಬಹುದು.

ಇದಕ್ಕಾಗಿ ಭಾರತ್ ಸಂಚಾರ್‌ ನಿಗಮ ಲಿಮಿ­ಟೆಡ್‌್ (ಬಿಎಸ್‌್ಎನ್‌ಎಲ್‌) ಇಂಟರ್‌­ನೆಟ್‌ ಸೌಲಭ್ಯ ಬಳಸಿಕೊಳ್ಳಲು ಅವ­ಕಾಶ­ವಿರುವ ‘ಪೆಂಟಾ ಭಾರತ್‌’ ಮೊಬೈಲ್‌ ಫೋನನ್ನು ಶುಕ್ರವಾರ ನಗರ­ದಲ್ಲಿ ಬಿಡುಗಡೆಗೊಳಿಸಿತು. ಇದರ ಬೆಲೆ ₨ 1099. ಎರಡು ಸಿಮ್‌, ಮೂರು ಇಂಚುಗಳ ಸ್ಕ್ರೀನ್‌, ಜಾವಾ ಆಪರೇಟಿಂಗ್‌ ಸಿಸ್ಟಮ್‌ ಹೊಂದಿ­ರುವ ಈ ಸಾಧನದಲ್ಲಿ ಬ್ಯಾಂಕಿಂಗ್‌, ಟೆಲಿ, ವೈದ್ಯಕೀಯ, ಡಾಟಾ ಸ್ಟ್ರೀಮಿಂಗ್‌ ಸೌಲಭ್ಯ­ಗಳ ಜತೆಗೆ ಧ್ವನಿ ಸೇವೆಗಳನ್ನು ಪಡೆಯ­ಬಹುದು. ಬಿಎಸ್‌ಎನ್‌ಎಲ್‌   ಅತ್ಯಾಕರ್ಷಕ ಧ್ವನಿ ಸೇವೆಯ ಪ್ಯಾಕೇಜ್‌ ಸಹ ನೀಡಲಿದೆ.

15 ಗಂಟೆಗಳ ಸ್ಟ್ಯಾಂಡ್‌ ಬೈ ಮತ್ತು 8 ಗಂಟೆಗಳ ಟಾಕ್ ಟೈಮ್‌ಗೆ ಸೂಕ್ತವಾದ ಬ್ಯಾಟರಿ ಇದರಲ್ಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ಎನ್‌ಎಲ್‌ ಅಧ್ಯಕ್ಷ ಪ್ರಶಾಂತ್‌ ತಿವಾರಿ, ‘ಪೆಂಟಾ ಭಾರತ್‌ ಫೋನ್‌ ಈಗ ಭಾರತೀಯ ಗ್ರಾಹಕರಿಗೆ ಕೈಗೆಟಕುವ ದರ­ದಲ್ಲಿ ಲಭ್ಯವಿದೆ. ಇಂಟರ್‌ನೆಟ್‌ ಸೌಲಭ್ಯವಿರುವ ಫೋನ್‌ ಭಾರತೀಯ ಸಮಾಜದ ಅತಿ ಮುಖ್ಯ ವರ್ಗವನ್ನು ತಲುಪಲಿದೆ’ ಎಂದರು.

ಮಾರಿಷಸ್‌ ಅಧ್ಯಕ್ಷ ರಾಜಕೇಶ್ವರ್‌ ಪುರ್ಯಾಗ್‌, ರಾಜ್ಯಪಾಲ ಹಂಸರಾಜ್‌ ಭಾರ­ದ್ವಾಜ್‌, ಸಚಿವ ಆರ್‌.ವಿ. ದೇಶ­ಪಾಂಡೆ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT