ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ನೆಟ್‌ ಸಂಪರ್ಕಕ್ಕೆ ಸೋಲಾರ್ ಡ್ರೋನ್

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಜನಪ್ರಿಯ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ಮತ್ತೊಂದು ಯೋಜನೆಯತ್ತ ಪುಟ ತಿರುವಲು ಮುಂದಾಗಿದೆ. ವಿಶ್ವದ ಮೂಲೆಮೂಲೆಗೆ ಇಂಟರ್‌ನೆಟ್‌ ಲಭ್ಯವಾಗುವಂತೆ ಮಾಡಲು ಸೋಲಾರ್‌  ವಿಮಾನದ ಪರೀಕ್ಷೆಯನ್ನು ನಡೆಸಿ ಯಶಸ್ವಿಯಾಗಿದೆ. 

ಅಕ್ವಿಲಾ (Aquila) ಹೆಸರಿನ ಲಘು ಮತ್ತು ಎತ್ತರಕ್ಕೆ ಹಾರಬಲ್ಲ ವಿಮಾನ ಅಮೆರಿಕದ ಅರಿಜೋನಾದ ಯುಮಾ ನಗರದ ಮೇಲೆ ಸಾವಿರಾರು ಎತ್ತರ ಅಡಿಗಳ ಮೇಲೆ 96 ನಿಮಿಷ ಹಾರಾಟ ನಡೆಸಿದೆ.   ಮೂರು ತಿಂಗಳುಗಳ ಕಾಲ 60 ಸಾವಿರ (18,290 ಮೀಟರ್) ಎತ್ತರದಲ್ಲಿ ಆಕಾಶದಲ್ಲಿ ಹಾರಾಡಿಕೊಂಡಿರುವ ಸಾಮರ್ಥ್ಯವನ್ನು ‘ಅಕ್ವಿಲಾ’ ಹೊಂದಿದೆ.  ಇಷ್ಟು ಅವಧಿಯಲ್ಲಿ  ಹಲವು ದಿಕ್ಕುಗಳಿಗೆ ಇಂಟರ್‌ನೆಟ್ ಸಂಪರ್ಕವನ್ನು ಇದು ಒದಗಿಸುತ್ತದೆ ಎಂಬ ಅಂದಾಜು ಫೇಸ್‌ಬುಕ್‌ ಕಂಪೆನಿಯದು.

ಗೂಗಲ್‌ನ ಮಾತೃ ಕಂಪೆನಿ ಅಲ್ಪಾಬೆಟ್‌ ಇಂಕ್‌  ‘ಪ್ರಾಜೆಕ್ಟ್‌ ಲೂನ್‌’ ಹೆಸರಿನಲ್ಲಿ ಈಗಾಗಲೇ ಇಂಟರ್‌ನೆಟ್‌ ಸೌಲಭ್ಯ ಒದಗಿಸುತ್ತಿದೆ.  ಭೂಮಿಯಿಂದ ಸುಮಾರು 20 ಕಿ.ಮೀ ಎತ್ತರದಲ್ಲಿ ವಾಯುಮಂಡಲಕ್ಕೆ ಹಾರಿ ಬಿಡುವ ಬಲೂನ್‌ಗಳಲ್ಲಿ ಇಂಟರ್‌ನೆಟ್‌ ಸೌಲಭ್ಯ ಒದಗಿಸುವ ಉಪಕರಣಗಳನ್ನು  ಇಡಲಾಗಿರುತ್ತದೆ.    

2013ರಲ್ಲಿ ಗೂಗಲ್‌ ಕಂಪೆನಿ ಪ್ರಯೋಗಾರ್ಥವಾಗಿ ‘ಪ್ರಾಜೆಕ್ಟ್‌ ಲೂನ್‌’ ಅನ್ನು ನ್ಯೂಜಿಲೆಂಡ್‌ನಲ್ಲಿ ಪ್ರಾರಂಭ ಮಾಡಿತ್ತು. ಆನಂತರ ಕ್ಯಾಲಿಫೋರ್ನಿ ಯಾದ ಸೆಂಟ್ರಲ್ ವ್ಯಾಲಿ ಮತ್ತು ಈಶಾನ್ಯ ಬ್ರೆಜಿಲ್‌ನಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿ ಇದರ ಪ್ರಯೋಗ ನಡೆಸಿತು.

ಅಕ್ವಿಲಾ, ಗೂಗಲ್‌ನ ‘ಪ್ರಾಜೆಕ್ಟ್ ಲೂನ್‌’ ಪ್ರತಿಸ್ಪರ್ಧಿಯಾಗಿ ಆರಂಭಿಸ ಲಾಗಿದೆ ಎನ್ನಲಾಗುತ್ತಿದೆ. ಆದರೆ ಫೇಸ್‌ ಬುಕ್‌  ಹೇಳುವುದೇ ಬೇರೆ. ಅಂತರ್ಜಾಲ ಇಲ್ಲದ ಹಳ್ಳಿ, ಪಟ್ಟಣಗಳನ್ನು ತಲು ಪಬೇಕು ಎಂಬುದು ಇದರ ಹಿಂದಿನ ಉದ್ದೇಶ ಎಂಬ ಸಮರ್ಥನೆ ಫೇಸ್‌ಬುಕ್‌ನದು.

‘ಅಕ್ವಿಲಾ ಆಗಸದಲ್ಲಿ 96 ನಿಮಿಷ ಹಾರಾಟ ನಡೆಸಿದೆ. ಇದರಿಂದ ಒಂದು ಹಂತದಲ್ಲಿ ನಮ್ಮ ಶ್ರಮ ಯಶಸ್ವಿಯಾಗಿದೆ. ಆದರೆ ಇಲ್ಲಿಯೂ ಹಲವಾರು ತಾಂತ್ರಿಕ ಸವಾಲುಗಳಿವೆ’ ಎನ್ನುತ್ತಾರೆ ಫೇಸ್‌ಬುಕ್‌ ನ ಎಂಜಿನಿಯರಿಂಗ್‌ ವಿಭಾಗದ ನಿರ್ದೇಶಕ ಯೇಲ್‌ ಮುಗೈರ್‌. ಈ ಎಲ್ಲ ಸವಾಲುಗಳನ್ನು ಪರಿಹಾರ ಮಾಡೇ ತೀರುತ್ತೇವೆ ಎಂಬ ವಿಶ್ವಾಸ ಅವರದು.  ಆಗಸದಲ್ಲಿ 60 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸಲು ವಿಮಾನ ಅತಿ ಹಗುರವಾಗಿರಬೇಕು.

ದತ್ತಾಂಶ ಗಳನ್ನು ವೇಗವಾಗಿ ಸಂಗ್ರಹ ಮಾಡಿ ವರ್ಗಾವಣೆ ಮಾಡಲು ತಂತ್ರಜ್ಞಾನ ಸಹಕಾರಿಯಾಗಿರಬೇಕು ಎಂಬ ಅಂಶಗ ಳನ್ನು ಗಮನದಲ್ಲಿ ಇಟ್ಟುಕೊಂಡಿಬೇಕು ಎಂದು ಫೇಸ್‌ಬುಕ್‌  ಸಿಇಒ ಮಾರ್ಕ್‌ ಜುಕರ್‌ಬರ್ಗ್‌‌ ತಮ್ಮ ವಿಜ್ಞಾನಿಗಳ ತಂಡಕ್ಕೆ ತಿಳಿಸಿದ್ದರು.

‘ಅಕ್ವಿಲಾ ಹಲವಾರು ಪರೀಕ್ಷೆಗಳ ನಂತರವೇ ಬಳಕೆಗೆ ಮುಕ್ತವಾಗಲಿದೆ. ಮಾನವ ರಹಿತವಾಗಿ ಅತಿ ಹೆಚ್ಚು ಅವಧಿ ಆಗಸದಲ್ಲಿ ಉಳಿದ ಖ್ಯಾತಿ ಈ ವಿಮಾನದ್ದು ಆಗಲಿದೆ’ ಎಂಬ ಆಶಾಭಾವ ಯೇಲ್‌ ಮುಗೈರ್‌ ಅವರದ್ದು. 

ಅಂತರ್ಜಾಲ  ಸಂಪರ್ಕದಿಂದ ದೂರ ಉಳಿದಿರುವವರನ್ನು ಜಾಲಲೋಕಕ್ಕೆ ಪರಿಚಯಿಸುವುದೇ ಫೇಸ್‌ಬುಕ್‌ ಬೆಂಬಲಿತ ‘ಇಂಟರ್‌ನೆಟ್‌ ಆರ್ಗ್‌’  ಕೆಲವು ತಿಂಗಳ ಹಿಂದೆ ಭಾರಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಅಕ್ವಿಲಾ, ಇಂಟರ್‌ನೆಟ್ ಆರ್ಗ್‌  ಅಭಿಯಾನದ ಭಾಗವಾಗಿದ್ದು, ಸಾಂಪ್ರದಾಯಿಕ ದೂರವಾಣಿ ಮತ್ತು ಮೊಬೈಲ್ ಸಂಪರ್ಕ ಸಿಗದ ಜಾಗಗಳಲ್ಲೂ ಇದು ಇಂಟರ್‌ನೆಟ್‌ ಒದಗಿಸಬಲ್ಲದು.

ಅಕ್ವಿಲಾ ಯೋಜನೆಯಲ್ಲಿ ಎಷ್ಟು ಜನ ತೊಡಗಿಸಿಕೊಂಡಿದ್ದರು ಎಂಬುದನ್ನು ಫೇಸ್‌ಬುಕ್‌ ಬಹಿರಂಗ ಮಾಡಿಲ್ಲ. ಆದರೆ, ಇದರಲ್ಲಿ ಬಾಹ್ಯಾಕಾಶ ಯಾನ, ವಿಮಾನಯಾನ, ಮೆಕ್ಯಾನಿಕಲ್‌ ಮತ್ತು ಸಾಫ್ಟ್‌ವೇರ್‌ ತಂತ್ರಜ್ಞರು, ವಿನ್ಯಾಸಕಾರರು, ಮಾನವರಹಿತ ಏರ್‌ಕ್ರಾಫ್ಟ್‌ ವ್ಯವಸ್ಥೆಯ ತಜ್ಞರು, ಸಾರಿಗೆ  ಪರಿಣತರು, ನಾಸಾ, ಬೋಯಿಂಗ್‌, ಅನುಭವಿಗಳು,   ರಕ್ಷಣಾ ಸಂಶೋಧಕರು  ಮತ್ತು   ಬ್ರಿಟಷ್‌ ರಾಯಲ್‌ ಏರ್‌ಫೋರ್ಸ್‌ನ ಸಿಬ್ಬಂದಿ ತೊಡಗಿಕೊಂಡಿದ್ದರು ಎಂಬುದನ್ನು ಮಾತ್ರ ತಿಳಿಸಿದೆ.

ಅಕ್ವಿಲಾ ವಿಶೇಷಗಳು
* 60 ಸಾವಿರ ಎತ್ತರದಲ್ಲಿ ಹಾರಾಡಬಲ್ಲದು

* ಮೂರು ತಿಂಗಳು ಅಕಾಶದಲ್ಲಿ ಇರುವ ಸಾಮರ್ಥ್ಯ

* ಗಂಟೆಗೆ 25 ರಿಂದ 30 ಮೈಲುಗಳ ದೂರ ಕ್ರಮಿಸಬಲ್ಲದು

* ಕಡಿಮೆ ವಿದ್ಯುತ್‌ ಬಳಕೆ. ಇದರಿಂದ ಹೆಚ್ಚು ದಿನ ಉಳಿಯಬಲ್ಲದು

* ಬೋಯಿಂಗ್ 737 ರಷ್ಟು ಉದ್ದದ ರೆಕ್ಕೆಗಳು, ಆದರೆ ತೂಕ ಕಡಿಮೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT