ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಟರ್‌ಸಿಟಿ ಬರಲಿ

Last Updated 1 ಮೇ 2015, 19:30 IST
ಅಕ್ಷರ ಗಾತ್ರ

ಬಳ್ಳಾರಿಯಿಂದ ಗದಗ ಮಾರ್ಗವಾಗಿ ವಿಜಯಪುರಕ್ಕೆ ನಿತ್ಯ ಒಂದು ಇಂಟರ್‌ಸಿಟಿ ರೈಲು ಸೌಲಭ್ಯ ಇದ್ದರೆ ಉತ್ತಮ. ಈಗ ಈ ಮಾರ್ಗದಲ್ಲಿ  ಗದಗದಿಂದ ಬಾಗಲಕೋಟೆ– ವಿಜಯಪುರ ಕಡೆಗೆ ಹೋಗಲು ಬೆಳಿಗ್ಗೆ  8ರ ನಂತರ ಮಧ್ಯಾಹ್ನ  2ರ ವರೆಗೆ ಒಂದೂ ರೈಲು ಇಲ್ಲ. ಸದ್ಯ ಗದಗ– ಬಾಗಲಕೋಟೆ– ಗದಗ ಮಧ್ಯೆ ಓಡಿಸುತ್ತಿರುವ ಪ್ಯಾಸೆಂಜರ್ ರೈಲನ್ನು ಬದಲಾಯಿಸಿ ಮುಂಜಾನೆ 6ಕ್ಕೆ ಬಳ್ಳಾರಿಯಿಂದ ಹೊರಟು 10 ಗಂಟೆಗೆ ಗದಗ ಮೂಲಕ ಹಾದು ಮಧ್ಯಾಹ್ನ 2ಕ್ಕೆ ವಿಜಯಪುರ ತಲುಪಿ ಪುನಃ ಮಧ್ಯಾಹ್ನ 3ಕ್ಕೆ ವಿಜಯಪುರದಿಂದ ಹೊರಟು ಸಂಜೆ 7 ಗಂಟೆಗೆ ಗದಗ ಮೂಲಕ ರಾತ್ರಿ 11ಕ್ಕೆ ಬಳ್ಳಾರಿ ತಲುಪಿದರೆ ವ್ಯಾಪಾರಸ್ಥರಿಗೆ, ನೌಕರರಿಗೆ, ವಿದ್ಯಾರ್ಥಿಗಳು, ಪ್ರವಾಸಿಗರಿಗೂ ಅನುಕೂಲ.
- ದತ್ತು ಜೋಶಿ,
ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT