ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಪ್ಲಾಸ್ಟಿಕ್ ಬಳಕೆ ನಿಷೇಧ

Last Updated 31 ಅಕ್ಟೋಬರ್ 2014, 20:08 IST
ಅಕ್ಷರ ಗಾತ್ರ

ಹೊಸಕೋಟೆ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನ.1 ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಅದರಂತೆ ಪ್ಲಾಸ್ಟಿಕ್ ಕೈ ಚೀಲ, ಲೋಟ, ತಟ್ಟೆ ಮುಂತಾದವುಗಳನ್ನು ಹೋಟೆಲ್, ಅಂಗಡಿ, ಬೀದಿ ಬಳಿಯ ವ್ಯಾಪಾರಸ್ಥರು, ಕಲ್ಯಾಣ ಮಂಟಪಗಳು ಬಳಸದೆ ಬಟ್ಟೆ ಅಥವಾ ನಾರಿನಿಂದ ತಯಾರಿಸಿದ ಚೀಲ, ಪೇಪರ್, ಲೋಟ ಬಳಸುವಂತೆ ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ವೇಳೆ ಬಳಕೆ ಮಾಡಿದಲ್ಲಿ ಮಾರಾಟಗಾರರಿಗೂ ಮತ್ತು ಬಳಕೆ-ದಾರರಿಗೂ ದಂಡ ವಿಧಿಸಲಾಗುವುದು. ಅಲ್ಲದೆ ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಸಾರ್ವಜನಿಕರು ಕಸ-ವನ್ನು ರಸ್ತೆಗೆ ಎಸೆಯದೆ ಮೂಲ-ದಲ್ಲಿಯೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಮನೆ ಬಾಗಿಲಿಗೆ ಆಗಮಿಸುವ ಪುರಸಭೆ ವಾಹನಕ್ಕೆ ನೀಡಿ ಸಹಕರಿಸುವಂತೆ ಮುಖ್ಯಾಧಿಕಾರಿ ಆನಂದ್ ಕಲ್ಲೋಳಿಕರ್ ಮನವಿ ಮಾಡಿದ್ದಾರೆ.

ನಗೆ ಹಬ್ಬ: ಪಟ್ಟಣದ ಸಿರಿಗಂಧ ಕನ್ನಡ ಗೆಳೆಯರ ಬಳಗ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.2 ಭಾನುವಾರ ಸಂಜೆ 5ಕ್ಕೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗಂಗಾವತಿ ಪ್ರಾಣೇಶ್ ತಂಡದವರಿಂದ ‘ನಗೆ ಹಬ್ಬ’ ಕಾರ್ಯಕ್ರಮ ಹಮ್ಮಿಕೊಂಡಿದೆ. ಜತೆಗೆ ಲೋಕೇಶ್ ತಂಡದವರಿಂದ ನೃತ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಬಳಗದ ಅಧ್ಯಕ್ಷ ಆನಂದ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT