ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಜಯಾ ಪ್ರಮಾಣ

Last Updated 22 ಮೇ 2015, 19:39 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ):  ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ  ಎಂಟು ತಿಂಗಳು ರಾಜಕೀಯ ವನವಾಸ ಅನುಭವಿಸಿದ್ದ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ 5ನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಲಿದ್ದಾರೆ.

ಅವರೊಂದಿಗೆ  28 ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇವರೆಲ್ಲ ಈ ಮೊದಲು ಜಯಾ ಸಂಪುಟದಲ್ಲಿ ಇದ್ದವರೇ ಆಗಿದ್ದಾರೆ.

ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಶುಕ್ರವಾರ ಜಯಾ ಸರ್ವಾನುಮತದಿಂದ ಆಯ್ಕೆಯಾದರು. ರಾಜ್ಯಪಾಲ ರೋಸಯ್ಯ ಅವರು ಸರ್ಕಾರ ರಚಿಸುವಂತೆ ಅವರಿಗೆ ಆಹ್ವಾನ ನೀಡಿದ ಬೆನ್ನಲ್ಲಿಯೇ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ  ತಮ್ಮ ಸ್ಥಾನಕ್ಕೆ  ರಾಜೀನಾಮೆ ನೀಡಿದರು.

ಪನ್ನೀರ್‌ಸೆಲ್ವಂ ಹಾಗೂ ಅವರ ಸಂಪುಟ ಸಚಿವರ ರಾಜೀನಾಮೆಯನ್ನು ಅಂಗೀಕರಿಸಿರುವ ರೋಸಯ್ಯ, ಮುಂದಿನ ವ್ಯವಸ್ಥೆ ಆಗುವ ವರೆಗೆ ಕಾರ್ಯನಿರ್ವಹುಸುವಂತೆ ಸೂಚಿಸಿದರು.

ಜಯಲಲಿತಾ ಮದ್ರಾಸ್‌್ ವಿಶ್ವವಿದ್ಯಾಲಯ ಶತಾಬ್ದಿ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಗೆ  ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಡಿಎಂಡಿಕೆ ಶಾಸಕರು: ಡಿಎಂಡಿಕೆ ಬಂಡಾಯ ಶಾಸಕರಾದ ಕೆ.ತಮಿಳ್‌ ಅಳಗನ್‌, ಎಂ. ಅರುಣ್‌್  ಸುಬ್ರಮಣಿಯನ್‌, ಟಿ.ಸುರೇಶ್‌ಕುಮಾರ್‌,  ಕೆ. ಪಾಂಡಿಯರಾಜನ್‌,  ಎಸ್‌. ಮೈಕೆಲ್‌್ ರಾಯಪ್ಪನ್‌ ಹಾಗೂ ಆರ್‌. ಸುಂದರ್‌ ರಾಜನ್‌್ ಅವರು  ಎಐಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಜಯಾ ಅವರಿಗೆ ಬೆಂಬಲ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT