ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಕ್ಕಟ್ಟಿನಲ್ಲಿ ‘ದೇವಮಾನವ’

Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಚಂಡೀಗಡ (ಪಿಟಿಐ): ವಿವಾದಿತ ‘ದೇವಮಾನವ’ ರಾಮ್‌ಪಾಲ್‌ಗೆ ೨೦೦೬ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ನೀಡಲಾಗಿದ್ದ ಜಾಮೀ­ನನ್ನು ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ ಗುರು­ವಾರ ರದ್ದು ಮಾಡಿದ್ದು, ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಈ ನಡುವೆ ಪೊಲೀಸರು, ಆಶ್ರಮ­ದಲ್ಲಿ ನಡೆದ ಸಂಘರ್ಷದ ವೇಳೆ  ಆರು ಮಂದಿ ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಮ್‌ಪಾಲ್‌ ವಿರುದ್ಧ ಮತ್ತೊಂದು ಕೊಲೆ ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಬುಧವಾರ ರಾತ್ರಿ ಬಂಧಿತರಾದ ರಾಮ್‌­ಪಾಲ್‌ ಅವರನ್ನು ಹೈಕೋರ್ಟ್‌ನ ದ್ವಿಸದಸ್ಯ ಪೀಠದ ಮುಂದೆ  ಹಾಜರು­ಪಡಿ­ಸ­ಲಾಯಿತು. ಮುಂದಿನ ವಿಚಾರಣೆ ನವೆಂಬರ್‌್ ೨೮ರಂದು ನಡೆಯಲಿದ್ದು, ಅಲ್ಲಿಯವರೆಗೆ ರಾಮ್‌ಪಾಲ್‌ ನ್ಯಾಯಾಂಗ ಬಂಧನದಲ್ಲಿರುತ್ತಾರೆ. ಕೋರ್ಟ್‌ಗೆ ಹಾಜರುಪಡಿಸುವುದಕ್ಕೆ ಮುನ್ನ ರಾಮ್‌ಪಾಲ್‌ ಅವರನ್ನು ಪಂಚಕುಲಾದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸ­ಲಾ­ಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಸೂಚನೆ: ರಾಮ್‌ಪಾಲ್‌ ಬಂಧನಕ್ಕೆ ಕೈಗೊಂಡ ಕಾರ್ಯಾಚರಣೆಯ ವಿವರ, ಪೊಲೀಸರು ಹಾಗೂ ಬೆಂಬಲಿಗರ ನಡುವಣ ಸಂಘರ್ಷದಲ್ಲಿ ಆಗಿರುವ ಆಸ್ತಿ ನಷ್ಟ, ಜನರಿಗೆ ಆದ ಗಾಯ,  ಆಶ್ರಮದಲ್ಲಿ ಪತ್ತೆಯಾದ ಶಸ್ತ್ರಾಸ್ತ್ರ­ಗಳು... ಇತ್ಯಾದಿ ವಿವರಗಳನ್ನು ಒಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಂ.ಜೈಪಾಲ್‌, ದರ್ಶನ್‌ ಸಿಂಗ್‌ ಅವರಿದ್ದ ಪೀಠವು ಹರಿಯಾಣ ಪೊಲೀಸ್‌್ ವರಿಷ್ಠಾಧಿಕಾರಿಗೆ ಸೂಚನೆ ನೀಡಿತು. ಹೊಸ ಪ್ರಕರಣಗಳ ವಿಚಾರಣೆಗೆ  ಸಂಬಂಧಿಸಿ ರಾಮ್‌ಪಾಲ್‌ ಅವರನ್ನು ನಂತರದಲ್ಲಿ ಹಿಸ್ಸಾರ್‌ಗೆ ಕರೆದೊಯ್ಯಲಾಯಿತು. 

ತನಿಖೆ ಶುರು: ಈಗ ನಿಜವಾದ ತನಿಖೆ ಶುರುವಾಗಿದೆ. ಆಶ್ರಮದಲ್ಲಿದ್ದ ಮುಗ್ಧ ಜನರನ್ನು ರಕ್ಷಿಸುವುದು ಹಾಗೂ ರಾಮ್‌ಪಾಲ್‌್ ಅವರನ್ನು ಬಂಧಿಸು­ವುದು ಮೊದಲು ನಮ್ಮ ಆದ್ಯತೆ­ಯಾಗಿತ್ತು.  ರಾಮ್‌ಪಾಲ್‌್ ಅವರಿಗೆ ನಕ್ಸಲೀ­ಯರ ಸಂಪರ್ಕ ಇದೆಯೇ ಎನ್ನುವುದನ್ನು ಕೂಡ ತನಿಖೆಗೆ ಒಳಪಡಿ­ಸಲಾಗುತ್ತಿದೆ ಎಂದು ಹರಿಯಾಣ ಡಿಜಿಪಿ ವಸಿಷ್ಠ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT