ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯಲ್ಲಿ ರಣ ವಿಕ್ರಮ

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಪುನೀತ್ ರಾಜಕುಮಾರ್ ಅಭಿನಯದ ಪವನ್ ಒಡೆಯರ್ ನಿರ್ದೇಶನದ ‘ರಣ ವಿಕ್ರಮ’ ಚಿತ್ರತಂಡ ಚಿತ್ರೀಕರಣಕ್ಕಾಗಿ ಇಟಲಿಗೆ ಪ್ರಯಾಣ ಬೆಳೆಸಿದೆ.

ಕೆಲವು ಮಾತಿನ ಭಾಗ ಹಾಗೂ ಹಾಡಿನ ಚಿತ್ರೀಕರಣ ಅಲ್ಲಿ ನಡೆಯಲಿದೆ. ಇತ್ತೀಚೆಗೆ ಚಿತ್ರದ ಕ್ಲೈಮ್ಯಾಕ್ಸ್‌ಅನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಬೆಂಗಳೂರು, ಹಂಪಿ, ತುಂಗಭದ್ರಾ ನದಿ ದಂಡೆ ಮತ್ತಿತರ ಸ್ಥಳಗಳಲ್ಲಿ 80ಕ್ಕೂ ಅಧಿಕ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಜಯಣ್ಣ ಹಾಗೂ ಭೋಗೇಂದ್ರ ಈ ಚಿತ್ರದ ನಿರ್ಮಾಪಕರು.

ವೈದಿ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ, ಸುರೇಶ್ ಸಂಕಲನ ಚಿತ್ರಕ್ಕಿದೆ. ಅಂಜಲಿ, ಆದ ಶರ್ಮ, ವಿಕ್ರಮ್ ಸಿಂಗ್, ದಿನೇಶ್ ಮಂಗಳೂರು, ಮುಖ್ಯಮಂತ್ರಿ ಚಂದ್ರು, ಗಿರೀಶ್ ಕಾರ್ನಾಡ್,ಅವಿನಾಶ್, ರಂಗಾಯಣ ರಘು, ಅಶೋಕ್, ಸುಧಾ ಬೆಳವಾಡಿ ಇತರರು ತಾರಾಗಣದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT