ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿ ತಿನಿಸುಗಳ ಉತ್ಸವ

Last Updated 29 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪೀಣ್ಯಾದ ಎಐಐಎಮ್‌ಎಸ್‌ (ಏಮ್ಸ್‌)ನಲ್ಲಿ ‘ಇಟಾಲಿಯನ್‌ ಕುಲಿನರಿ ಎಕ್ಸ್‌ಪೋ 2015’ ಎಂಬ ಎರಡು ದಿನಗಳ ಇಟಾಲಿಯನ್‌ ತಿನಿಸುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಪ್ರದರ್ಶನದಲ್ಲಿ ಇಟಾಲಿಯನ್‌ ತಿನಿಸುಗಳನ್ನು ಸವಿಯುವುದರ ಜತೆಗೆ ಅವನ್ನು ತಯಾರಿಸುವ ರೀತಿಯನ್ನೂ ಹೇಳಿಕೊಡಲಾಯಿತು.

ಇಟಾಲಿಯನ್‌ ತಿನಿಸುಗಳಿಗೆ ಪ್ರಖ್ಯಾತವಾದ ವಿಶ್ವದ ಟಾಪ್‌ ಸಂಸ್ಥೆ ಅಲ್ಮಾ ಭಾರತದ ಏಮ್ಸ್‌ ಸಂಸ್ಥೆಯ ಜೊತೆಗೂಡಿ ಈ ಪ್ರದರ್ಶನವನ್ನು ಹಮ್ಮಿಕೊಂಡಿತ್ತು. ಇಟಲಿಯ ತಿನಿಸುಗಳಿಗೆ ಭಾರತದ ರಸಗಳನ್ನು ಸಂಯೋಜಿಸಿ ರಸಾಸ್ವಾದ ಒದಗಿಸಿತು. ಇಲ್ಲಿನ ವಿದ್ಯಾರ್ಥಿಗಳಲ್ಲಿ ಇಟಾಲಿಯನ್‌ ಪಾಕಶಾಸ್ತ್ರದ ಕುರಿತು ಉತ್ಸಾಹ ಮೂಡಿಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳು ಅಲ್ಮಾ ಸಂಸ್ಥೆಯ ಬಾಣಸಿಗರಿಂದ ಇಟಲಿ ತಿನಿಸು ತಯಾರಿಸುವ ಬಗೆಯನ್ನು ಉತ್ಸಾಹದಿಂದ ಕಲಿತರು. ಇಲ್ಲಿ ಸೇರಿದ್ದ ವಿದ್ಯಾರ್ಥಿಗಳು ಹಾಗೂ ಹೋಟೆಲ್‌ನ ಪ್ರತಿನಿಧಿಗಳಿಗೆ ಹಲವಾರು ಸ್ಪರ್ಧೆಗಳನ್ನೂ  ಆಯೋಜಿಸಲಾಗಿತ್ತು. ಇಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಹಾಗೂ ವೃತ್ತಿಪರರಿಗೆ ಇಟಲಿ ತಿನಿಸುಗಳ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನೂ ನಡೆಸಲಾಯಿತು.

ಈ ಸ್ಪರ್ಧೆಯಲ್ಲಿ ಎಂ.ಎಸ್‌. ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳು ವಿಜೇತರಾದರು. ಆಹಾರೋತ್ಸವದಲ್ಲಿ ಬಾಣಸಿಗರಾದ ಮನೀಶ್‌ ಮೆಹ್ರೋತ್ರಾ, ಆಂಟೊನಿಯಾ ಟಾಡಿ,  ಅಭಿಜಿತ್‌ ಸಾಹಾ, ಕ್ರಿಸ್ಟಿಯನ್‌ ಬ್ರೋಗ್ಲಿಯಾ,  ಅರ್ಮಾಂಡೋ ಲಿ ಫಿಲಿಪ್ಪೋ ಇತರರು ಭಾಗವಹಿಸಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT