ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ತಿರುಚುವ ಬಿಎಂಟಿಸಿ

Last Updated 17 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬಿಎಂಟಿಸಿಯ ಕೆಲವು ಬಸ್ಸುಗಳಲ್ಲಿ ಮುಂದಿನ ನಿಲ್ದಾಣ, ಇಳಿಯಬೇಕಾದ ನಿಲ್ದಾಣ ಕುರಿತು ಧ್ವನಿವರ್ಧಕದಲ್ಲಿ ಘೋಷಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಅದನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಶಿಸ್ತು, ಬದ್ಧತೆ, ಇಲ್ಲದಿದ್ದರೆ ಒಂದು ಉಪಯುಕ್ತ ವ್ಯವಸ್ಥೆಯು ಅನಾಹುತಕಾರಿಯಾಗಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.

ಅಂಥವುಗಳಲ್ಲಿ ನಿಲುಗಡೆಗಳ ಹೆಸರುಗಳನ್ನು ತಪ್ಪುತಪ್ಪಾಗಿ ಘೋಷಿಸಿ, ಪ್ರಯಾಣಿಕರನ್ನು ಗೊಂದಲಕ್ಕೆ ಈಡುಮಾಡುವುದೂ ಒಂದು. ಕೆಂಪೇಗೌಡ ಬಸ್‌ ನಿಲ್ದಾಣದಿಂದ ಹೊಸಕೆರೆಹಳ್ಳಿ ಕೆರೆಕೋಡಿಗೆ ಹೋಗುವ 43ಸಿ ಬಸ್‌ ಈ ಮಾರ್ಗದಲ್ಲಿ ಓಡಾಟ ಪ್ರಾರಂಭಿಸಿದಾಗಿನಿಂದಲೂ ಸರಿಯಾದ ಮಾರ್ಗಸೂಚಿ ಫಲಕವನ್ನು ಅಳವಡಿಸಿಕೊಂಡಿತ್ತು.

ಆದರೆ ಇದೀಗ ಧ್ವನಿವರ್ಧಕದ ಘೋಷಣೆ ಹೊಸಕೆರೆಹಳ್ಳಿ ಕೆರೆಕೋಡಿಯ ನೂರಾರು ವರ್ಷಗಳ ಇತಿಹಾಸವನ್ನು ತಿರುಚಿ ಅದನ್ನು ‘ಮುನೇಶ್ವರನಗರ ಕೆರೆಕೋಡಿ’ ಎಂದು ಕಿರುಚುತ್ತಿದೆ. ಕೆರೆಕೋಡಿಗಿಂತ ಮುನೇಶ್ವರನಗರ ಎರಡು ನಿಲುಗಡೆ ಹಿಂದೆ ಇದೆ. ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕಾಗಿ ವಿನಂತಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT