ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ನನ್ನ ಆಯ್ಕೆಯ ಜೀವನ

Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಮನುಷ್ಯನ ಜೀವನ ಕ್ರಮವೇ ಒಂದು ಬಗೆ, ಅದರಲ್ಲಿ ಹೆಣ್ಣಿನ ಜೀವನ ಇನ್ನೊಂದು ಬಗೆ. ನಾವು ಬಳೆಯುತ್ತಾ ಹೋದಂತೆ ಹಲವು ದಾರಿ-ಕವಲು, ಪ್ರಶ್ನೆ-ಆಯ್ಕೆಗಳು ಧುತ್ತೆಂದು ನಮ್ಮ ಮುಂದೆ ಬಂದು ನಿಲ್ಲುತ್ತವೆ. ನಾನು ಸಾಮಾನ್ಯ ಕುಟುಂಬದ, ಮಧ್ಯಮ ವರ್ಗದ ಹುಡುಗಿ. ಸ್ವಂತ ಊರು ಹಳ್ಳಿಯಾದರೂ ಓದಿಗೆಂದು ಪಟ್ಟಣ ಸೇರಿದೆ. ಹೀಗಾಗಿ ಎರಡೂ ಜೀವನ ಶೈಲಿಗಳ ಪರಿಚಯವಿದೆ. ಇನ್ನೂ ಉಡುಗೆ-ತೊಡುಗೆಗಳಲ್ಲಿ ಹೆಚ್ಚಿನ ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಎಂದೂ ಹೋದವಳಲ್ಲ. ನನಗೆ ಕಂಫರ್ಟ್ ಎನಿಸುವ ಬಟ್ಟೆಗಳನ್ನು ಆಯ್ದುಕೊಳ್ಳುತ್ತೇನೆ. ಈ ವಿಷಯದಲ್ಲಿ ನನ್ನ ಕುಟುಂಬದಿಂದ ಹೆಚ್ಚೇನು ವಿರೋಧಗಳಿಲ್ಲ. ಬಹುಶಃ ಆಧುನಿಕ ಶೈಲಿಯ ಉಡುಗೆಗಳನ್ನು ಆಯ್ದುಕೊಂಡಿದ್ದರೆ ವಿರೋಧವಿರುತ್ತಿತ್ತೇನೊ?

ನನಗಿನ್ನು ಚೆನ್ನಾಗಿ ನೆನಪಿದೆ. ಆಗಷ್ಟೇ 18ರ ಹೊಸ್ತಿಲಲ್ಲಿದ್ದ ನನಗೆ, ಎರಡು ಆಯ್ಕೆಗಳಿದ್ದವು. ಒಂದು ಶಿಕ್ಷಣ ಮುಂದುವರೆಸುವುದು ಮತ್ತೊಂದು ಮದುವೆಯಾಗುವುದು. ಆ ಸಮಯದಲ್ಲಿ ಇವೆರಡನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕ್ಕೂಳ್ಳುವುದಕ್ಕೆ ಕಾರಣವಿದೆ. ಅದಷ್ಟೇ ಅಮ್ಮನನ್ನು ಕಳೆದುಕೊಂಡು ಕೆಲವೇ ತಿಂಗಳುಗಳಾಗಿದ್ದವು. ಹಾಗೂ ಅಪ್ಪನಿರದ ಬಹು ವರ್ಷಗಳೂ ಆಗಿದ್ದವು. ಹೀಗಾಗಿ ಪೋಷಕರ ಆಶ್ರಯದಲ್ಲಿ ಬೆಳೆಯುತ್ತಿದ್ದೆ. ತುಂಬಾ ನಾಜೂಕು ಪರಿಸ್ಥಿತಿಯ ಆ ದಿನಗಳಲ್ಲಿ ಇವೆರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವುದಕ್ಕೆ ಆದ್ಯತೆ ನೀಡಬೇಕೆಂಬುದಕ್ಕೆ ಸ್ಪಷ್ಟತೆಗಳಿರಲಿಲ್ಲ. ಪ್ರಬುದ್ಧ ಮನಸ್ಸಿನವಳು ಆಗಿರಲಿಲ್ಲ. ಆ ಸಮಯದಲ್ಲಿ ಸಾವಿರ ಸಾವಿರ ಬಾರಿ ಯೋಚಿಸಿ ದೃಢ ಮನಸ್ಸಿನಿಂದ ಶಿಕ್ಷಣ ಮುಂದುವರೆಸಿದೆ. ಅಲ್ಲಿಂದ ಶುರುವಾಯಿತು ನೋಡಿ ಸಂಕಷ್ಟಗಳ ಪರ್ವಕಾಲ. ಆದರೂ ಎಲ್ಲ ಮೆಟ್ಟಿನಿಂತು ಇಂದು ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನನ್ನ ಗುರಿ ತಲುಪಬೇಕೆಂಬ ಅದಮ್ಯ ಛಲದಿಂದ ಅದರ ಹಿಂದೆ ಬಿದ್ದಿದೇನೆ. ಈಗ 26ರ ಗಡಿದಾಟಿರುವ ನಾನು, ನನ್ನ ಗುರಿ ತಲುಪಲು ಭದ್ರಬುನಾದಿ ಹಾಕಿಕೊಂಡಿದ್ದೇನೆ. ಇವೆಲ್ಲವೂ ಸಾಧ್ಯವಾದದ್ದು ಅಂದು ನಾನು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ.

ಈ ನಡುವೆ ನನಗೆ ಹಲವರು ಕೇಳುವ ಪ್ರಶ್ನೆಗಳಿವೆ,ಇನ್ನೂ ಕೆಲವರು ಹೇಳುವ ಒಳ್ಳೆಯ ಮಾತುಗಳು ಇವೆ. ‘ನೀನು ಗಟ್ಟಿಗಿತ್ತಿ. ತುಂಬಾ ಧೈರ್ಯವಂತೆ, ವಿಲ್‌ಪವರ್ ಬಹಳ ಇದೆ. ಇಷ್ಟೊಂದು ಧೈರ್ಯ ಎಲ್ಲಿಂದ ಬಂತು? ಎಷ್ಟೊಂದು ಸಮಸ್ಸೆಗಳಿದ್ದರೂ ಹೇಗೆ ನಗುತ್ತಿರತೀಯಾ?’. ಇವೂ ಬಿಡಿ, ಈ ನಗರದಲ್ಲಿ ಕೇಳೊ ಕುತೂಹಲಕರ ಪ್ರಶ್ನೆಗಳೆಂದರೆ, ‘ಸ್ಟಿಲ್ ಯು ಆರ್ ಅ ಸ್ಪಿನ್‌ಸ್ಟರ್? ಅಲೋನ್‌ನೆಸ್ ಫೀಲ್ ಆಗಲ್ವ?’ ಹಾಗೆ ಹಳ್ಳಿಯಲ್ಲಿ, ‘ಮದುವೆ ಯಾವಾಗ?’ ಅಂತ ಕೇಳತ್ತಾರೆ. ಎಲ್ಲವನ್ನೂ ಮುಗುಳ್ನಗೆಯೊಂದಿಗೆ ಸ್ವಾಗತಿಸುತ್ತೇನೆ. ನನ್ನ ಬುದ್ಧಿ ಮತ್ತು ಮನಸ್ಸು ಯಾವಾಗಲೂ ಹೇಳುತ್ತವೆ  ಇದು ನನ್ನ ಆಯ್ಕೆಯ ಜೀವನ’.                   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT