ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸೈಕಲ್, ಬೈಕ್‌ ‘ಮಾರ್ಗದರ್ಶಿ’

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ನಗರವೆಂಬ ಸಂತೆಯೊಳಗೆ ಹೋಗಬೇಕಾದ ಸ್ಥಳವನ್ನು ಹುಡುಕುವುದು ಸುಲಭವಲ್ಲ. ಜಿಪಿಎಸ್‌ ಸೌಲಭ್ಯ ಹೊಂದಿರುವ ಮೊಬೈಲ್‌ ಇದ್ದಾಗ ಕಾರು ಓಡಿಸುವಾಗ ಅಷ್ಟೇನೂ ಸಮಸ್ಯೆಯಾಗದು. ಆದರೆ ದ್ವಿಚಕ್ರ ವಾಹನ ಸವಾರರಿಗೆ ಅಷ್ಟು ಸುಲಭವಲ್ಲ. ಮೊಬೈಲ್‌ ನೋಡುತ್ತಾ ಬೈಕ್‌ ಚಲಾಯಿಸುವುದು ಸಾಧ್ಯವಿಲ್ಲ.

   ಬೈಕ್‌ ಮತ್ತು ಸೈಕಲ್ ಸವಾರರಿಗೆಂದೇ ವಿನೂತನ ಬಗೆಯ ಜಿಪಿಎಸ್‌ ವ್ಯವಸ್ಥೆಯುಳ್ಳ ಸಾಧನವೊಂದನ್ನು ‘ಸ್ಮಾರ್ಟ್‌ಹಾಲೊ’ ಬಿಡುಗಡೆ ಮಾಡಿದೆ. ಸೈಕಲ್‌ಗಳಲ್ಲಿ ಇದನ್ನು ಅಳವಡಿಸುವುದು ಇನ್ನೂ ಸುಲಭ. ಹ್ಯಾಂಡಲ್‌ ಮುಂಭಾಗದಲ್ಲಿ ಕಣ್ಣಿಗೆ ಗೋಚರಿಸುವಂತೆ ಈ ಸಾಧನವನ್ನು ಅಳವಡಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಬ್ಲೂಟೂತ್‌ ಮೂಲಕ ಈ ಉಪಕರಣಕ್ಕೆ ಸಂಪರ್ಕಿಸಿದರೆ ಸಾಕು. ಉಪಕರಣದಲ್ಲಿನ ಆ್ಯಪ್‌ನಲ್ಲಿ ನೀವು ಹೋಗಬೇಕಾದ ಸ್ಥಳವನ್ನು ನಮೂದಿಸಿದರೆ ಅದು ಯಾವ ದಿಕ್ಕಿನತ್ತ ತಿರುಗಬೇಕೆಂಬುದನ್ನು ಬಣ್ಣದ ಸಂಕೇತಗಳ ಮೂಲಕ ದಾರಿ ತೋರಿಸುತ್ತದೆ.

ಈ ಆ್ಯಪ್‌ ನೈಸರ್ಗಿಕ ಬೆಳಕನ್ನು ವಾತಾವರಣಕ್ಕೆ ತಕ್ಕಂತೆ ಬಳಸಿಕೊಳ್ಳುತ್ತದೆ. ಇದರಿಂದ ಉಪಕರಣದ ಮೇಲೆ ಮೂಡುವ ಸಂಕೇತ ಯಾವ ರೀತಿಯ ಬೆಳಕಿನಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತದೆ. ರಾತ್ರಿ, ಹಗಲಿನ ವ್ಯತ್ಯಾಸವನ್ನೂ ಇದು ಕಂಡುಕೊಳ್ಳಬಲ್ಲದು. ನಿಗದಿತ ಸ್ಥಳಕ್ಕೆ ತಲುಪಿದಾಗ ಉಪಕರಣ ತಾನಾಗಿಯೇ ಸ್ಥಗಿತಗೊಳ್ಳುತ್ತದೆ. ಒಂದು ವೇಳೆ ವಾಹನವನ್ನು ಎಲ್ಲಿ ಪಾರ್ಕಿಂಗ್‌ ಮಾಡಿದ್ದೀರಿ ಎನ್ನುವುದನ್ನು ನೀವು ಮರೆತಿದ್ದರೂ ಈ ಆ್ಯಪ್‌ ಮೂಲಕ ಪತ್ತೆಹಚ್ಚಬಹುದು. ವಾಹನವನ್ನು ಕಳ್ಳತನ ಮಾಡಲು ಯಾರಾದರೂ ಪ್ರಯತ್ನಿಸಿದರೂ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ.

ಇನ್ನು ಬೈಕ್‌ಗೆ ಅಳವಡಿಸಿದ ಸಾಧನವನ್ನು ಕದಿಯಲು ಸಾಧ್ಯವಿಲ್ಲ. ಅದನ್ನು ಮಾಲೀಕ ಮಾತ್ರ ತೆಗೆಯಲು ಸಾಧ್ಯವಾಗುವಂತಹ ಕೀಯನ್ನು ಅಳವಡಿಸಲಾಗುತ್ತದೆ. ಫಿಟ್‌ನೆಸ್‌ ಟೂಲ್‌ ಆಗಿಯೂ ಈ ಸಾಧನ ಕೆಲಸ ಮಾಡುತ್ತದೆ. ಪ್ರಯಾಣಿಸುವ ದೂರ, ಸರಾಸರಿ ವೇಗ, ಬರ್ನ್‌ ಆದ ಕ್ಯಾಲೊರಿಗಳ ಪ್ರಮಾಣ ಇತ್ಯಾದಿಗಳ ಮಾಹಿತಿಯನ್ನು ಸಹ ಅದು ನೀಡಬಲ್ಲದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT