ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಂಥ ನಂಟು, ಬಾಂಧವ್ಯ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವ­ವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ‘ಪಿಎಚ್‌.ಡಿ. ಮೌಖಿಕ ಪರೀಕ್ಷೆಗೆ ಉಮಾಶ್ರೀ, ಸಿ.ಟಿ. ರವಿ’– ಎಂದು ‘ಪ್ರಜಾವಾಣಿ’ ಪುಟ 4ರಲ್ಲಿ (ಏ.20) ಅವರವರ ಭಾವಚಿತ್ರಗಳ ಸಹಿತ ಪ್ರಕಟ­ವಾಗಿದೆ. ಒಬ್ಬರು ಹಾಲಿ ಮಂತ್ರಿ, ಒಬ್ಬರು ಮಾಜಿ ಮಂತ್ರಿ. ಇವರಿಗೆ ‘ಜನಸೇವೆ’ ಮಾಡು­ವುದೇ ಮುಖ್ಯ ಕಾಯಕವಾಗಿರುವಾಗ ‘ಸಂಶೋಧನೆ’ಗೆ ಎಲ್ಲಿ ಸಮಯವಿರುತ್ತದೆ?

ಈಗ ಈ ಮುಕ್ತ ವಿಶ್ವವಿದ್ಯಾಲಯದ ಕುಲಪತಿ­ಯಾಗಿರುವ ಡಾ.ಎಂ.ಜಿ. ಕೃಷ್ಣನ್‌ ಅವರು ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾಗ ಇವರಿಗೆ  ಒಬ್ಬ ರಾಜಕಾರಣಿ, ಮತ್ತೊಬ್ಬ ಕಲಾವಿದೆ  ಬೆನ್ನುಹತ್ತಿ ಅವರಿಂದ ಮಾರ್ಗದರ್ಶನ ಪಡೆದು, ಪಿಎಚ್‌.ಡಿ. ಪದವಿಗಳನ್ನು ಪಡೆದ ವರದಿಯನ್ನು  ಓದಿದ್ದೆ. ಈ ಕೃಷ್ಣನ್‌ ಅವರು ಹೋದ ಕಡೆ­ಯೆಲ್ಲಾ ಈ ರೀತಿ ಪಿಎಚ್‌.ಡಿ. ಪದವಿಗಳಿಗೆ ಬೆನ್ನು­ಹತ್ತಿ ಹೋಗುವ ರಾಜಕಾರಣಿಗಳ, ಕಲಾ­ವಿದರ ದಂಡೇ ಇದ್ದಂತಿದೆ! ಇದೆಂಥ ನಂಟು, ಬಾಂಧವ್ಯ?

ಈಚೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಉಮಾಶ್ರೀ ಅವರನ್ನೇ ಕುರಿತು ಅವರ ಸಂಬಂ­ಧಿ­ಕರೇ ಆದ ಬೆಂಗಳೂರಿನ ಕನ್ನಡ ಅಧ್ಯಾಪಕ­ರೊಬ್ಬರು ಪಿಎಚ್‌.ಡಿ. ಅಧ್ಯಯನ ಮಾಡುತ್ತಿದ್ದಾರಂತೆ. ಒಬ್ಬರು ಪಿಎಚ್‌.ಡಿ. ಅಭ್ಯರ್ಥಿ. ಆ ಅಭ್ಯರ್ಥಿ­ಯನ್ನೇ ಕುರಿತು ಇನ್ನೊ ಬ್ಬರು ಪಿಎಚ್‌.ಡಿ. ಅಧ್ಯಯನ ಮಾಡುವುದು– ಈ ದ್ವಂದ್ವ ಎಷ್ಟರಮಟ್ಟಿಗೆ ಸರಿ? ಉನ್ನತ ಶಿಕ್ಷಣ ಕ್ಷೇತ್ರವೂ ‘ಕುಲಗೆಟ್ಟು’ ಹೋಗಿದೆ ಎಂಬುದಕ್ಕೆ ಇವೆಲ್ಲಾ ದೃಷ್ಟಾಂತಗಳು ಅಲ್ಲವೆ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT