ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇ ತಿಂಗಳು ಮಹಿಳಾ ಲೀಗ್

ಕಬಡ್ಡಿ: ರಾಜ್ಯದ ತೇಜಸ್ವಿನಿ, ಮಮತಾಗೆ ನಾಯಕತ್ವ
Last Updated 2 ಜೂನ್ 2016, 19:57 IST
ಅಕ್ಷರ ಗಾತ್ರ

ಬೆಂಗಳೂರು: ಸಾಕಷ್ಟು ಕಬಡ್ಡಿ ಪ್ರೇಮಿಗಳು ಕಾತರದಿಂದ ಕಾಯುತ್ತಿ ರುವ ಮಹಿಳಾ ಲೀಗ್ ಇದೇ ವರ್ಷದ ಜೂನ್‌ನಲ್ಲಿ ನಡೆಸಲು ಸಂಘಟಕರು ನಿರ್ಧರಿಸಿದ್ದಾರೆ.

ದೇಶಿ ಕ್ರೀಡೆ ಕಬಡ್ಡಿಯ ಪ್ರಾಮುಖ್ಯತೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕಾಗಿ ಮಷಾಲ ಸ್ಪೋರ್ಟ್ಸ್‌ ಮತ್ತು ಸ್ಟಾರ್‌ ಸ್ಪೋರ್ಟ್ಸ್ ವಾಹಿನಿ 2014ರ ಜುಲೈನಲ್ಲಿ ಮೊದಲ ಬಾರಿಗೆ ಪುರುಷರಿಗೆ ಪ್ರೊ ಕಬಡ್ಡಿ ಲೀಗ್ ಆಯೋಜಿಸಿತ್ತು. ಈಗಾಗಲೇ ಮೂರು ಆವೃತ್ತಿಗಳು ಮುಗಿದಿವೆ. ಈ ವೇಳೆ ಮಹಿಳಾ ತಂಡಗಳಿಗೂ ಕಬಡ್ಡಿ ಲೀಗ್ ನಡೆಸಬೇಕು ಎಂದು ಭಾರಿ ಒತ್ತಾಯ ಕೇಳಿಬಂದಿತ್ತು.  ಆದ್ದರಿಂದ  ಜೂನ್‌ 25ರಿಂದ ನಡೆಯುವ ಪುರುಷರ ಲೀಗ್ ಜೊತೆಗೆ ಮಹಿಳಾ ಲೀಗ್ ಕೂಡ ಆಯೋಜಿಸಲು ಸಂಘಟಕರು ನಿರ್ಧರಿಸಿದ್ದಾರೆ.

‘ಮಹಿಳೆಯರಿಗೂ ಲೀಗ್ ಆರಂಭಿಸಬೇಕು ಎಂದು ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ ಹೋದ ವಾರ ಶಿಬಿರ ನಡೆಸಿ 42 ಆಟಗಾರ್ತಿಯರನ್ನು ಆಯ್ಕೆ ಮಾಡಿದ್ದೇವೆ. ಶಿಬಿರದಲ್ಲಿ ಒಟ್ಟು 80 ಮಂದಿ ಪಾಲ್ಗೊಂಡಿದ್ದರು. ಆಯ್ಕೆ ಯಾದ ಆಟಗಾರ್ತಿಯರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ತಂಡಗಳ ಹೆಸರುಗಳು ಇನ್ನು ಅಂತಿಮವಾಗಿಲ್ಲ’ ಎಂದು ಸ್ಟಾರ್‌ ಸ್ಪೋರ್ಟ್ಸ್‌ ಮೂಲಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿವೆ.

ಮಹಿಳಾ ಲೀಗ್‌ನಲ್ಲಿ ಒಟ್ಟು ಮೂರು ತಂಡಗಳು ಪಾಲ್ಗೊಳ್ಳಲಿವೆ. ಭಾರತ ಕಬಡ್ಡಿ ತಂಡದ ನಾಯಕಿ ಕರ್ನಾಟಕದ ತೇಜಸ್ವಿನಿ ಬಾಯಿ ಮತ್ತು ಇಂಚೆನ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ತಂಡದಲ್ಲಿ ಮಮತಾ ಪೂಜಾರಿ ಅವರು ಒಂದೊಂದು  ತಂಡಕ್ಕೆ ನಾಯಕಿಯರಾ ಗಿದ್ದಾರೆ. ಮಹಾರಾಷ್ಟ್ರದ ಅಭಿಲಾಷ ಇನ್ನೊಂದು ತಂಡವನ್ನು ಮುನ್ನಡೆಸ ಲಿದ್ದಾರೆ. ರಾಜ್ಯದ ಇನ್ನೊಬ್ಬ ಆಟಗಾರ್ತಿ ಉಷಾರಾಣಿ ಕೂಡ ಲೀಗ್‌ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಮುಂಬೈಯ ದಾರಾವಿಯಲ್ಲಿ ಮಹಿಳಾ ತಂಡದ ಶಿಬಿರ ನಡೆಯುತ್ತಿದೆ. ಈ ವಿಷಯವನ್ನು ತೇಜಸ್ವಿನಿ ಖಚಿತ ಪಡಿಸಿದ್ದಾರೆ. ‘ಶೀಘ್ರದಲ್ಲಿಯೇ ಮಹಿಳಾ ಲೀಗ್ ಆರಂಭಿಸುತ್ತೇವೆ, ಅಭ್ಯಾಸ ನಡೆಸಿ ಸಜ್ಜಾಗಿ ಎಂದು ಸಂಘಟಕರು ನಮಗೆ ತಿಳಿಸಿದ್ದಾರೆ’ ಎಂದು ತೇಜಸ್ವಿನಿ ಹೇಳಿದ್ದಾರೆ. ‘ಮಹಿಳೆಯರಿಗೂ ಲೀಗ್ ನಡೆಸ ಬೇಕು ಎಂದು ಸಾಕಷ್ಟು ದಿನಗಳಿಂದ ಕೇಳುತ್ತಿದ್ದೆವು. ಈ ಆಸೆ ಇಷ್ಟು ಬೇಗ ಈಡೇರುತ್ತದೆ ಎಂದು ಅಂದುಕೊಂಡಿ ರಲಿಲ್ಲ. ಪುರುಷರ ನಾಲ್ಕನೇ ಆವೃತ್ತಿಯ ವೇಳೆಯೇ ಮಹಿಳೆಯರ ಚೊಚ್ಚಲ ಲೀಗ್ ನಡೆಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ’ ಎಂದು ತೇಜಸ್ವಿನಿ ಮಾಹಿತಿ ನೀಡಿದ್ದಾರೆ.

ಮಾದರಿ ಹೇಗೆ?: ಪುರುಷರ ಲೀಗ್‌ನಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಒಂದೇ ಸ್ಥಳದಲ್ಲಿ ಏಳು ಪಂದ್ಯಗಳು ನಡೆಯುತ್ತವೆ. ಒಂದು ದಿನ ಒಂದು ಪಂದ್ಯವಷ್ಟೇ ಇರುತ್ತದೆ. ಈ ಬಿಡುವಿನ ಅವಧಿಯ ವೇಳೆ ಮಹಿಳಾ ಲೀಗ್ ಪಂದ್ಯ ನಡೆಸಲು ಸ್ಟಾರ್ ಸ್ಪೋರ್ಟ್ಸ್ ನಿರ್ಧರಿಸಿದೆ ಎಂದೂ ತಿಳಿದು ಬಂದಿದೆ.

ಮಹಿಳಾ ಲೀಗ್‌ನಲ್ಲಿ ಒಟ್ಟು ಎಂಟು ಪಂದ್ಯಗಳು ನಡೆಯಲಿವೆ. ಹೆಚ್ಚು ಪಾಯಿಂಟ್ಸ್‌ ಪಡೆದು ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ರಮವಾಗಿ ಚಾಂಪಿಯನ್‌ ಮತ್ತು ರನ್ನರ್ಸ್‌ ಅಪ್‌ ಸ್ಥಾನ ಪಡೆದುಕೊಳ್ಳಲಿವೆ. ಅಂತರರಾಷ್ಟ್ರೀಯ ಮಹಿಳಾ ಕಬಡ್ಡಿ ಪಂದ್ಯಗಳನ್ನು ಸಾಮಾನ್ಯವಾಗಿ 11X8ರ ಅಳತೆಯ ಅಂಕಣದಲ್ಲಿ ಆಡಿಸಲಾ ಗುತ್ತದೆ. ಆದರೆ ಲೀಗ್‌ನಲ್ಲಿ ಮಹಿಳಾ ತಂಡಗಳು 13X10ರ ಅಂಕಣದ ಅಳತೆಯಲ್ಲಿಯೇ ಆಡಬೇಕಾಗುತ್ತದೆ.  ಒಂದು ತಂಡದಲ್ಲಿ 14 ಆಟಗಾರ್ತಿಯರು ಇರಲಿದ್ದಾರೆ ಎಂದೂ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT