ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ವಿಜ್ಞಾನಿಗಳಿಗೆ ಜೈಲು

Last Updated 25 ಸೆಪ್ಟೆಂಬರ್ 2014, 20:02 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿವೃತ್ತ ಮಹಾನಿರ್ದೇಶಕ ಡಾ.ವಿ.ಕೆ. ಸಾರಸ್ವತ್‌ ಹಾಗೂ ಹಿರಿಯ ವಿಜ್ಞಾನಿ ಜಿ.ಮಾಲಕೊಂಡಯ್ಯ ಅವರಿಗೆ ಮದ್ರಾಸ್‌ ಹೈಕೋರ್ಟ್‌ ಮೂರು ವಾರಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ರಕ್ಷಣಾ ಸಚಿವಾಲಯದ ವ್ಯಾಪ್ತಿಗೆ ಬರುವ ಸೇನಾ ವಾಹನಗಳ ಸಂಶೋಧನೆ ಹಾಗೂ ಅಭಿವೃದ್ಧಿ (ಸಿವಿಆರ್‌ಡಿಇ) ವಿಭಾಗದ ಶಾಲೆ ಮುಚ್ಚಿಹೋದ ಕಾರಣ ಅಲ್ಲಿನ ಉದ್ಯೋಗಿಎಸ್‌. ಜೋಸೆಫ್‌್ ರಾಜ್‌ ಅವರಿಗೆ  ಬೇರೆಡೆ ಕೆಲಸ ಕೊಡುವಂತೆ ೨೦೦೯ರ ಏಪ್ರಿಲ್‌ನಲ್ಲಿ ಹೈಕೋರ್ಟ್‌್ ಇವರಿಬ್ಬರಿಗೆ ಆದೇಶ ನೀಡಿತ್ತು.

ಆದರೆ ಸಾರಸ್ವತ್ ಹಾಗೂ ಹೈದರಾಬಾದ್‌ನ ರಕ್ಷಣಾ ಲೋಹ ಸಂಶೋಧನಾ ಪ್ರಯೋಗಾಲಯದ (ಡಿಎಂಆರ್ಎಲ್‌) ನಿರ್ದೇಶಕ ಜಿ. ಮಾಲ­ಕೊಂಡಯ್ಯ  ಈ ಆದೇಶ ಪಾಲಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ನ್ಯಾಯಾಂಗ ನಿಂದನೆಗಾಗಿ ಇವರಿಬ್ಬರಿಗೆ ಮೂರು ವಾರಗಳ  ಜೈಲು ಶಿಕ್ಷೆ ಹಾಗೂ ತಲಾ ₨ ೨,೦೦೦ ದಂಡ ವಿಧಿಸಿ ಆದೇಶ ನೀಡಿದೆ.  ಇವರಿಬ್ಬರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT