ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರ ಸ್ಥಿತಿ ಗಂಭೀರ

ಬೆಂಕಿ ಹಚ್ಚಿಕೊಂಡು, ಬಿಎಸ್‌ಪಿ ನಾಯಕನ ಅಪ್ಪಿಕೊಂಡ ಯುವಕ
Last Updated 29 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಲಖನೌ (ಐಎಎನ್‌ಎಸ್‌): ಉತ್ತರ ಪ್ರದೇ­ಶದ ಸುಲ್ತಾನ್‌ಪುರದಲ್ಲಿ ಲೋಕ­ಸಭಾ ಚುನಾವಣೆ ಮೇಲೆ ಟಿವಿ ಚರ್ಚೆ ನಡೆಯುತ್ತಿ­ದ್ದಾಗ ಯುವಕ­ನೊಬ್ಬ ಬೆಂಕಿ ಹಚ್ಚಿ­ಕೊಂಡು, ಬಿಎಸ್‌ಪಿ ನಾಯಕನನ್ನು ಅಪ್ಪಿಕೊಂಡ ಪರಿ­ಣಾಮ ಇಬ್ಬರಿಗೂ ತೀವ್ರ ಸುಟ್ಟ ಗಾಯಗ­ಳಾಗಿರುವುದಾಗಿ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸುಲ್ತಾನ್‌ಪುರ ಪಟ್ಟಣದ ಟಿಕೋ­ನಿಯ ಪಾರ್ಕ್‌­ನಲ್ಲಿ ಸೋಮವಾರ ರಾತ್ರಿ ದೂರ­­ದರ್ಶ­ನದ ‘ಜನಮತ­–­2014’ ಕಾರ್ಯಕ್ರ­ಮ­ದ ಚಿತ್ರೀಕರಣ ನಡೆಯು­ತ್ತಿ­ದ್ದಾಗ ಈ ದುರ್ಘಟನೆ ಜರುಗಿದೆ.

ವಿವಿಧ ರಾಜಕೀಯ ಪಕ್ಷಗಳ ನಾಯ­ಕರ ಮಧ್ಯೆ ಚರ್ಚೆ ನಡೆಯುತ್ತಿದ್ದಾಗ, ಮೈ­ಮೇಲೆ ಪೆಟ್ರೋಲ್‌ ಸುರಿದು­ಕೊಂಡು ಒದ್ದೆ­ಯಾಗಿದ್ದ ಯುವಕ­ನೊಬ್ಬ ದಿಢೀರ್‌ ಹೊರ­ನಡೆದು ಬೆಂಕಿ ಹಚ್ಚಿ­ಕೊಂಡನು. ನಂತರ ಆತ ಬಿಎಸ್‌ಪಿ ನಾಯಕ ಕಮ್ರು­ಜಾಮ ಫೌಜಿ ಅವರತ್ತ ಮುನ್ನುಗ್ಗಿ, ಅಪ್ಪಿಕೊಂಡನು. ಇದರಿಂದಾಗಿ ಅವ­­ರಿ­ಬ್ಬ­ರಿಗೂ ತೀವ್ರ ಸುಟ್ಟ ಗಾಯ­ಗಳಾದವು.

ಯುವಕನನ್ನು ಮಾವು ಜಿಲ್ಲೆಯ ದುರ್ಗೇಶ್‌ ಎಂದು ಗುರುತಿಸಲಾಗಿದ್ದು ಆತನಿಗೆ ಶೇ 95ರಷ್ಟು ಮತ್ತು ಫೌಜಿ ಅವ­­ರಿಗೆ ಶೇ 75ರಷ್ಟು ಸುಟ್ಟ ಗಾಯ­ಗಳಾಗಿವೆ. ಇಬ್ಬರನ್ನೂ ಇಲ್ಲಿನ ದೈಹಿಕ ಗಾಯಗಳ ಚಿಕಿತ್ಸಾ ಕೇಂದ್ರಕ್ಕೆ ದಾಖಲಿ­ಸಲಾಗಿದೆ. ಇಬ್ಬರ ಆರೋಗ್ಯ ಸ್ಥಿತಿ ಗಂಭೀ­ರ­­­ವಿ­ರುವುದಾಗಿ ಪೊಲೀಸರು ಹೇಳಿದ್ದಾರೆ.
ಇಬ್ಬರೂ ಜೀವನ್ಮರಣದೊಂದಿಗೆ ಹೋರಾ­­ಡುತ್ತಿದ್ದಾರೆ ಎಂದು ವೈದ್ಯ­ರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇವರಿಬ್ಬರನ್ನು ರಕ್ಷಿಸಲು ಮುಂದಾದ ಕಾಂಗ್ರೆಸ್‌ ನಾಯಕ ರಾಮ್‌ ಕುಮಾರ್‌ ಸಿಂಗ್‌ ಮತ್ತು ಮತ್ತೊಬ್ಬ ಮುಖಂಡ ಚೌಧರಿ ಹೃದಯ್‌ ರಾಮ್‌ ವರ್ಮ ಅವ­ರಿಗೂ ಅಲ್ಪಪ್ರಮಾಣದಲ್ಲಿ ಸುಟ್ಟ ಗಾಯ­­ಗಳಾಗಿವೆ.

ವ್ಯಕ್ತಿಯಿಂದ ಸ್ಥಳೀಯ ಹೋಟೆಲ್‌ ವೊಂದರ ಕೊಠಡಿ ‘ಕೀ’ಯನ್ನು ವಶಪಡಿ­ಸಿ­­ಕೊಳ್ಳ­ಲಾಗಿದೆ. ಇಂತಹ ಕಹಿ ಘಟನೆಗೆ ಕಾರಣ ಏನೆಂಬುದನ್ನು ತಿಳಿಯಲು ಪೊಲೀ­ಸರಿಗೆ ಇನ್ನೂ ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT