ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್‌ನಲ್ಲಿ 22 ಕೈದಿಗಳಿಗೆ ಗಲ್ಲು ಶಿಕ್ಷೆ– ಖಂಡನೆ

Last Updated 27 ಮೇ 2015, 19:30 IST
ಅಕ್ಷರ ಗಾತ್ರ

ಟೆಹರಾನ್ (ಐಎಎನ್ಎಸ್): ಇರಾನ್‌ನ ಉತ್ತರ ಭಾಗದ ಕರಾಗ್ ನಗರದಲ್ಲಿ ಕಳೆದ ವಾರಾಂತ್ಯದಿಂದ ಒಟ್ಟು 22 ಮಂದಿ ಕೈದಿಗಳನ್ನು ಗಲ್ಲಿಗೇರಿಸಲಾಗಿದೆ.

ಇರಾನ್‌ನ ಮಾನವ ಹಕ್ಕುಗಳ ಸಂಘಟನೆಯು ಇದನ್ನು ತೀವ್ರವಾಗಿ ಖಂಡಿಸಿದೆ. ಈ ಕೈದಿಗಳಿಗೆ ಸಂಬಂಧಿಸಿದ ವಿಚಾರಣೆ ನ್ಯಾಯಸಮ್ಮತವಾಗಿ ನಡೆದಿಲ್ಲ. ಅವರಿಗೆ ಚಿತ್ರಹಿಂಸೆ ನೀಡಿ ಬಲವಂತವಾಗಿ ಪಡೆದ ತಪ್ಪೊಪ್ಪಿಗೆ ಹೇಳಿಕೆಯ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಯ ವಕ್ತಾರ ಮೊಹಮದ್ ಅಮಿರಿ ಮಮೊಗದ್ದಮ್ ಅವರು ಆಪಾದಿಸಿದ್ದಾರೆ.

ಈ  ರೀತಿಯ ಸಾಮೂಹಿಕ ಹತ್ಯೆಯನ್ನು ತಡೆಯಲು ವಿಶ್ವಸಂಸ್ಥೆ ಮತ್ತು ವಿಶ್ವಸಮುದಾಯ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ತಿಂಗಳ ಆರಂಭದಲ್ಲೂ 22 ಕೈದಿಗಳನ್ನು ಗಲ್ಲಿಗೇರಿಸಲಾಗಿತ್ತು. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ಕನಿಷ್ಠ 400 ಮಂದಿ ಕೈದಿಗಳನ್ನು ಗಲ್ಲಿಗೇರಿಸಲಾಗಿದೆ. ಇರಾನ್‌ನ ಅತಿ ದೊಡ್ಡ ಜೈಲು ಘಜೆಲ್ ಹಸಾರ್‌ನಲ್ಲಿ ಇನ್ನೂ ಸುಮಾರು ಎರಡು ಸಾವಿರ ಕೈದಿಗಳಿದ್ದು, ಅವರೆಲ್ಲರನ್ನೂ ಗಲ್ಲಿಗೇರಿಸುವ ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT