ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳೆಗೆ ಸಿಂಗಾರ ಕಟ್ಟುವ ಮಳೆ ಚಿಟ್ಟೆ

Last Updated 29 ಮೇ 2015, 11:24 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಗುರುವಾರ ಸುರಿದ ಮುಂಗಾರಿನ ಮಳೆಗೆ ಹೊರಬಂದು ಸಸ್ಯಲೋಕ ಆವರಿಸಿದ ಸುಂದರ ಪಾತರಗಿತ್ತಿಗಳ ಸಂಸಾರ. ಮಕರಂದ ಹೀರುವ ಭರದಲ್ಲಿ ನೂರಾರು ಚಿಟ್ಟೆಗಳು ಇದ್ದಕ್ಕಿದ್ದಂತೆ ಪೊದೆಗಳಿಂದ ಹೊರಬರುವ ದೃಶ್ಯ ಈಗ ಸಾಮಾನ್ಯ. ಇಂತಹ ಪುಟ್ಟ ಜೀವಿಲೋಕದ ಹಲವು ನಮೂನೆಯ ಬಣ್ಣದ ಚಿಟ್ಟೆಗಳನ್ನು ಎಲ್ಲೆಡೆ ಕಾಣಬಹುದು. ಇಲ್ಲಿನ ಕೆರೆ, ಕಾಡು, ಹೊಳೆ, ದಡದ ಪರಿಸರದಲ್ಲಿ ಇವುಗಳ ಸಂತಾನೋತ್ಪತಿಯ ಕಾಲವೂ ಆಗಿದೆ.

ಇಂತಹ ಸೂಕ್ಷ್ಮ ಜೀವಿ ಪರಿಸರದಲ್ಲಿ ಅಪರೂಪಕ್ಕೆ ಕಂಡುಬರುವ ಅಟ್ಲಾಸ್ ಪತಂಗ, ಸದರ್ನ್ ಬರ್ಡ್‌ವಿಂಗ್‌, ಏರೋಪ್ಲೇನ್‌ ಚಿಟ್ಟೆ ಮೊದಲಾದ ವನ್ಯಜೀವಿಗಳ ಭಾಗವಾದ ಇವುಗಳನ್ನು ನೇರವಾಗಿ ಗುರುತಿಸಬಹುದು. ಒದ್ದೆಯಾದ ಮಣ್ಣಿನ ಮೇಲೆ ಕುಳಿತು ಕೆಲವು ರಸ ಹೀರಿದರೆ, ಮತ್ತಲವು ಬಳ್ಳಿ, ಸಸ್ಯದ ಹೂಗಳನ್ನು ಆಶ್ರಯಿಸಿ ಸಿಹಿ ಸಂಗ್ರಹ ಮಾಡುತ್ತವೆ.

ಪಶ್ಚಿಮ ಘಟ್ಟದಲ್ಲಿ ವಿಶೇಷವಾಗಿ ಕಂಡು ಬರುವ ಪಾತರಗಿತ್ತಿ ಪ್ರಭೇದಗಳು ಇಲ್ಲೂ ಕಂಡುಬರುತ್ತವೆ. ಮಳೆಗಾಲ ಮುಗಿದ ನಂತರ ಇವು ಕಾಣ ಸಿಗುತ್ತಿ ದ್ದವು. ಈಗಲೇ ಇವುಗಳ ದಂಡು ಕಾಣಿಸಿ ಪ್ರಕೃತಿಪ್ರಿಯರಲ್ಲಿ ಸೋಜಿಗ ತಂದಿದೆ.

‘ಮುಂಜಾನೆ ತೀರ ಚುರುಕಾಗಿ ಇರು ತ್ತವೆ. ಮಧ್ಯಾಹ್ನ ಸಸ್ಯಗಳ ಸುತ್ತಸೇರಿ ವಂಶಾಭಿವೃದ್ಧಿಗೂ ನೆರವಾಗುತ್ತವೆ. ಬಹ ಳಷ್ಟು ಕಡೆ ಎತ್ತರದ ಮರದ ತುಂಬ ಕುಳಿ ತಿರುತ್ತವೆ. ಗುಂಬಳ್ಳಿ, ಅಂಬಳೆಯ ನೀರಿನ ಹೊರತೆ ಬಳಿ ಈಗ ರೆಕ್ಕೆ ಅಗಲಿಸಿ ನೂರಾ ರು ಸಂಖ್ಯೆಯಲ್ಲಿ ಹಾರಾಡುವುದನ್ನು ಕಾಣಬಹುದು ಎನ್ನುತ್ತಾರೆ ಕೀಟತಜ್ಞರು.

ದೊಡ್ಡದು ಅಟ್ಲಾಸ್ ಪತಂಗ: ‘ಟ್ರೊಯಿಡೆಸ್ ಮೈನೊಸ್ ಮತ್ತು ಅಟ್ಟಾಕಸ್ ಅಟ್ಲಾಸ್ ಕುಟುಂಬಕ್ಕೆ ಸೇರಿದ ಅಂಗೈ ಅಗಲದ ಪಾತರಗಿತ್ತಿಗಳು ಈಗ ಎಲ್ಲೆಡೆ ಹೊರಬರುತ್ತವೆ. ಪ್ರಕೃತಿಯ ಬಣ್ಣವನ್ನೇ ಹೊದ್ದು ತನ್ನ ನಿಜ ರೂಪ ಮರೆಮಾಚುವ ದೊಡ್ಡದಾತ್ರದ ಚಿಟ್ಟೆಗಳು ಇಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT