ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಕಣ್ಣಿಗೆ ಯಾಕೆ ಬೀಳುವುದಿಲ್ಲ?

Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಕ್ರಮವಾಗಿ ಹಣ ಸಂಗ್ರಹಿಸುವವರ ಮತ್ತು ಅದನ್ನು ಲೇವಾದೇವಿ ವ್ಯವಹಾರಕ್ಕೆ ಬಳಸುವವರ ಬಗ್ಗೆ ಚುನಾವಣಾ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ, ದಾಳಿ ನಡೆಸಿ ಹಣ ವಶ ಪಡಿಸಿ­ಕೊಳ್ಳುತ್ತಾರೆ. ಲೋಕಾಯುಕ್ತದ ಅಧಿಕಾರಿಗಳು ಕೂಡ ಆಗೊಮ್ಮೆ ಈಗೊಮ್ಮೆ ದಾಳಿ ನಡೆಸಿ, ಅಕ್ರಮ ಸಂಪ­ತ್ತನ್ನು ಬಯಲಿಗೆಳೆಯುತ್ತಾರೆ. ಇವರ ಗಮನಕ್ಕೆ ಬರುವ ಅಕ್ರಮ ವ್ಯವಹಾರ ಆದಾಯ ಕರ ಇಲಾಖೆಯ ಗಮನಕ್ಕೆ ಯಾಕೆ ಬರುವುದಿಲ್ಲ?

ಹಾಡಹಗಲೇ ಲೂಟಿ ಹೊಡೆಯುವವರು, ರಾತ್ರಿ ಬೆಳಗಾಗುವುದರೊಳಗೆ ಶ್ರೀಮಂತರಾ­ದವರನ್ನು ಆದಾಯ ಕರ ಇಲಾಖೆಯವರು  ಯಾಕೆ ಪ್ರಶ್ನಿಸುವುದಿಲ್ಲ? 

ಇಂತಹ ಕುಳಗಳನ್ನು ಬಲಿ ಹಾಕಲು ವಿಶೇಷ ಬುದ್ಧಿ­ವಂತಿಕೆ ಬೇಡ. ನಿಶ್ಚಿತ ಆದಾಯ ಹೊಂದಿದವರು ಪ್ರತಿ ವರ್ಷ ಕಡ್ಡಾಯವಾಗಿ ತಮ್ಮ ಆದಾಯ ಬಹಿರಂಗ­ಪಡಿಸ­ಬೇಕು. ಇಲ್ಲದಿದ್ದರೆ ಶಿಕ್ಷೆ ಖಚಿತ. ಹಾಗಿರು­ವಾಗ ಅಕ್ರಮ­ ಸಂಪತ್ತು ಕೂಡುಹಾಕುವವರಿಗೆ ಯಾಕೆ ರಿಯಾಯ್ತಿ ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT