ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್‌ ಕಾನ್ಸಲ್ ಕಚೇರಿ ಉದ್ಘಾಟನೆ

Last Updated 28 ಆಗಸ್ಟ್ 2015, 19:38 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ರೇಲ್‌ ಕಾನ್ಸಲ್‌ ಜನರಲ್‌ ನೂತನ ಕಚೇರಿ ಹಲಸೂರಿನ ಮಿಲೇನಿಯಾ ಟವರ್ಸ್‌ನಲ್ಲಿ ಗುರುವಾರ ಉದ್ಘಾಟನೆಗೊಂಡಿತು.

ನವದೆಹಲಿಯಲ್ಲಿ ತನ್ನ ರಾಯಭಾರ ಕಚೇರಿಯನ್ನು ಹೊಂದಿರುವ ಇಸ್ರೇಲ್, ಆರಂಭದಲ್ಲಿ ಮುಂಬೈಯಲ್ಲಿ ಮಾತ್ರ ಕಾನ್ಸಲ್ ಜನರಲ್ ಕಚೇರಿ ಹೊಂದಿತ್ತು. ನಗರದಲ್ಲಿ  2013ರಲ್ಲಿ ಕಚೇರಿ ಆರಂಭವಾಗಿತ್ತು. ಈಗ ಪೂರ್ಣ ಪ್ರಮಾಣದ ಕಚೇರಿ ತೆರೆದಿದೆ. ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳು ಕರ್ನಾಟಕ ಕಚೇರಿಯ ವ್ಯಾಪ್ತಿಯಲ್ಲಿವೆ.

ಭಾರತದಲ್ಲಿರುವ ಇಸ್ರೇಲ್‌ ರಾಯಭಾರಿ ಡೇನಿಯಲ್‌ ಕಾರ್ಮನ್‌ ಮಾತನಾಡಿ, ‘ಪರಸ್ಪರ ಬಂಡವಾಳ ಹೂಡಿಕೆ, ಜಲ ನಿರ್ವಹಣೆ, ಬರಿದಾಗದ ಇಂಧನ ಮೂಲಗಳ ಅಭಿವೃದ್ಧಿ,  ಆಂತರಿಕ ಭದ್ರತೆ ಹಾಗೂ ಉಭಯ ರಾಷ್ಟ್ರಗಳ ಜನರನ್ನು ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ಬೆಸೆಯಲು ಈ ಕೇಂದ್ರ ಪೂರಕ’ ಎಂದರು.

ಕಾನ್ಸಲ್‌ ಜನರಲ್‌ ಡೋವ್ ಸೆಗೆವ್‌ ಸ್ಟೈನ್‌ಬರ್ಗ್‌ ಮಾತನಾಡಿ, ‘ಕಾನ್ಸುಲೇಟ್‌ ಕಚೇರಿ 2014ರ ಜುಲೈ ತಿಂಗಳಿಂದ ಇಲ್ಲಿಯವರೆಗೆ ಒಂದು ಸಾವಿರ ವೀಸಾಗಳನ್ನು ನೀಡಿದೆ. ದಕ್ಷಿಣ ಭಾರತದಲ್ಲಿ ಐದು ತೋಟಗಾರಿಕಾ ಕೌಶಲ ಕೇಂದ್ರಗಳನ್ನು ಸ್ಥಾಪಿಸಲು ನೆರವು ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT