ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗಿನ ರಾಜಕಾರಣ ಅಸಹ್ಯ ಹುಟ್ಟಿಸುತ್ತದೆ

ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಬೇಸರ
Last Updated 20 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಅಂಡಮಾನಿನಲ್ಲಿ ಮಡಿದ ಸ್ವಾತಂತ್ರ್ಯ ಹೋರಾಟಗಾರ­ರನ್ನು ನೆನೆದಾಗ ಈಗಿನ ರಾಜಕಾರಣ ಅಸಹ್ಯ ಹುಟ್ಟಿಸುತ್ತದೆ’ ಎಂದು ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಬೇಸರ ವ್ಯಕ್ತಪಡಿಸಿದರು.

ಸಿರಿವರ ಪ್ರಕಾಶನವು ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮ­ದಲ್ಲಿ ಡಾ. ಎಚ್.ಎಸ್.ಎಂ.ಪ್ರಕಾಶ್ ಅವರು ಇಂಗ್ಲಿಷ್‌ಗೆ ಅನುವಾ­ದಿಸಿ­ರುವ ಡಾ. ಬಿ.ಟಿ.ಲಲಿತಾನಾಯಕ್  ಅವರ ‘ಗತಿ’ ಕಾದಂಬರಿ, ಡಾ.ಲತಾಗುತ್ತಿ ಅವರ ‘ಅಂದಮಾನಿನ ಎಳೆಯನು ಹಿಡಿದು’ ಪ್ರವಾಸ ಕಥನ ಮತ್ತು ವಿಜಯಾ ಮೋಹನ್ ಅವರ ‘ಜಾತಿ’ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ದಲಿತ ಮತ್ತು ಬಂಡಾಯ ಚಳವಳಿ ಸಂದರ್ಭದಲ್ಲಿ ಗತಿ ಕಾದಂಬ­­ರಿಗೆ ಮಹತ್ವದ ಸ್ಥಾನವಿದೆ. ಸಮಾಜದ ಅಂಚಿನ ಸಮು­ದಾಯ­ಗಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಈ ಕೃತಿ ಕೆಲಸ ಮಾಡಿದೆ’ ಎಂದರು.

‘ಜಾತಿ’ ಕಥಾ ಸಂಕಲನವನ್ನು ಕುರಿತು ಮಾತನಾಡಿದ ಲೇಖಕ ಡಾ.ಎಸ್. ನಟರಾಜ್ ಬೂದಾಳ್, ‘ಗಂಡಸರದ್ದು ಅಧಿಕಾರದ ಭಾಷೆ. ಅದರಲ್ಲಿ ವೈವಿಧ್ಯವಿಲ್ಲ. ಆದರೆ ಭಾಷೆ ಹೆಣ್ಣಿನಿಂದ ಹೆಣ್ಣಿಗೆ ಬದಲಾಗುತ್ತಾ ಹೋಗುತ್ತದೆ’ ಎಂದರು.

‘ಎಸ್‌.ಎಲ್.ಭೈರಪ್ಪ  ಅವರ ಕೃತಿ ಬಿಡುಗಡೆಯಾದರೆ ಸಮಾಜದ ಒಂದು ವರ್ಗ ಸಂಭ್ರಮಿಸುತ್ತದೆ. ಮತ್ತೊಂದು ವರ್ಗ ತಲ್ಲಣಗೊಳ್ಳು­ತ್ತದೆ. ಇಂದಿನ ಬಹುತೇಕ ಸಾಹಿತಿಗಳು ಕಥನ ರಾಜಕಾರಣದ ಮೂಲಕ ಸಾಂಸ್ಕೃತಿಕ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT