ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಗ ಮಂದಿರ ನಿರ್ಮಿಸಿ: ವಘೇಲಾ ಸವಾಲು

Last Updated 21 ಮೇ 2014, 19:30 IST
ಅಕ್ಷರ ಗಾತ್ರ

ಗಾಂಧಿನಗರ (ಪಿಟಿಐ): ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ­ದೊಂದಿಗೆ ಆಯ್ಕೆಯಾಗಿರುವುದರಿಂದ ಅಯೋಧ್ಯೆಯಲ್ಲಿ ಸಾಂವಿಧಾನಿಕ ಚೌಕಟ್ಟಿ­ನೊಳಗೆ ರಾಮಮಂದಿರ ನಿರ್ಮಿಸಬೇಕು ಎಂದು ಗುಜರಾತ್‌ ವಿಧಾನ­ಸಭಾ ಪ್ರತಿಪಕ್ಷ ನಾಯಕರಾದ ಶಂಕರಸಿಂಗ್‌ ವಘೇಲಾ ಸವಾಲು ಹಾಕಿದ್ದಾರೆ.

ವಘೇಲಾ ಅವರ ಈ ಹೇಳಿಕೆಯು ಕಾಂಗ್ರೆಸ್‌ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.
‘ಅಡ್ವಾಣಿ ಅವರು ರಥಯಾತ್ರೆ ನಡೆಸಿದಾಗ ಬಿಜೆಪಿ ಅತ್ಯಧಿಕ ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ಆಗ ಅಧಿಕಾರಕ್ಕೆ ಬಂದುದು ಎನ್‌ಡಿಎ ಮೈತ್ರಿಕೂಟವಾದ್ದರಿಂದ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಹೊಂದಾಣಿಕೆ ಮಾಡಿಕೊಳ್ಳ­ಬೇಕಾಗಿತ್ತು.

ಈಗ ಬಿಜೆಪಿ ಸ್ವಂತ ಬಲದಿಂದಲೇ ಬಹುಮತ ಪಡೆದಿದೆ. ಮಂದಿರ ನಿರ್ಮಾಣಕ್ಕೆ ಎನ್‌ಡಿಎ ಕೂಡ ಒಪ್ಪುವುದಾದರೆ ಒಳ್ಳೆಯದೇ. ಇಲ್ಲದಿದ್ದರೆ ಬಿಜೆಪಿಯು ಸಾಂವಿಧಾನಿಕ ನೀತಿನಿಯಮಗಳಡಿ ರಾಮಮಂದಿರ ನಿರ್ಮಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT