ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯದ 5 ರಾಜ್ಯಗಳಲ್ಲಿ ನಾಳೆ ಮತದಾನ

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಐಎಎನ್‌ಎಸ್‌): ಲೋಕ­ಸಭೆ ಚುನಾವಣೆಗೆ ಎರಡನೇ ಹಂತದಲ್ಲಿ ಅರುಣಾಚಲ ಪ್ರದೇಶ, ಮಣಿಪುರ, ಮೇಘಾ­ಲಯ, ಮಿಜೋರಾಂ ಮತ್ತು ನಾಗಾ­ಲ್ಯಾಂಡ್‌ ರಾಜ್ಯಗಳ ಏಳು ಕ್ಷೇತ್ರ­ಗಳಲ್ಲಿ ಬುಧವಾರ ಮತದಾನ ನಡೆ­ಯಲಿದೆ.

ಅರುಣಾಚಲ ಪ್ರದೇಶ ವಿಧಾನಸಭೆಗೆ ಏ. 9ರಂದು ಮತದಾನ ನಡೆಯಲಿದೆ. ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಅವಿರೋಧ ಆಯ್ಕೆಯಾ­ಗಿರುವವರಲ್ಲಿ ಮುಖ್ಯ­ಮಂತ್ರಿ ನಬಮ್‌ ಟುಕಿ ಸೇರಿದ್ದಾರೆ.ಅರುಣಾಚಲ ಪ್ರದೇಶದಲ್ಲಿ ಒಟ್ಟು 7,59,498 ಮತದಾರರು ವಿಧಾನ­ಸಭೆ ಮತ್ತು ಲೋಕಸಭೆ ಚುನಾವಣೆ­ಯಲ್ಲಿ ತಮ್ಮ ಹಕ್ಕು ಚಲಾಯಿಸಲಿ­ದ್ದಾರೆ.

ನಾಗಾಲ್ಯಾಂಡ್‌ನಲ್ಲಿ ಲೋಕಸಭೆ ಚುನಾ­­ವಣೆಗಾಗಿ 2,059 ಮತಗಟ್ಟೆ­ಗಳನ್ನು ತೆರೆಯಲಾಗಿದ್ದು, ಮುಖ್ಯ­ಮಂತ್ರಿ ನೆಯಿಪ್ಯು ರಿಯೊ ಚುನಾವಣೆಗೆ ಸ್ಪರ್ಧಿಸಿ­ದ್ದಾರೆ. ಮಣಿಪುರದಲ್ಲಿ ಎರಡು ಸ್ಥಾನ­ಗಳಿಗೆ ಏ. 9 ಮತ್ತು 17­ರಂದು ಮತ­ದಾನ ನಡೆ­ಯಲಿದೆ. 899­626 ಮತ­ದಾರರು ಮತ­ದಾನ ಮಾಡಲು ಅರ್ಹತೆ ಪಡೆ­ದಿದ್ದಾರೆ. ಮಿಜೋರಾಂನಲ್ಲಿ 7,02189­ ಮತ­ದಾರು ತಮ್ಮ ಹಕ್ಕು ಚಲಾಯಿ­ಸಲಿ­ದ್ದಾರೆ. ರಾಜ್ಯದಾದ್ಯಂತ ಒಟ್ಟು 1129 ಮತಗಟ್ಟೆಗಳನ್ನು ತೆರೆಯಲಾಗಿದೆ.

ಶಾಂತಿಯುತ ಮತದಾನಕ್ಕಾಗಿ ಈ ಐದು ರಾಜ್ಯಗಳಲ್ಲಿ ಬಿಗಿ ಭದ್ರತೆ ಮಾಡ­ಲಾ­ಗಿದೆ. ಗಡಿ ಭದ್ರತಾ ಪಡೆ, ಕೇಂದ್ರೀಯ ಮೀಸಲು ಪೊಲೀಸ್‌ ಪಡೆ ಮತ್ತು ಅಸ್ಸಾಂ ರೈಫಲ್ಸ್‌ ಪಡೆಯ ಯೋಧರನ್ನು ಭದ್ರತೆಗಾಗಿ ನಿಯೋಜಿಸ­ಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿ­ ತಿಳಿಸಿದ್ದಾರೆ.

‘ಚುನಾವಣಾ ಕಾರ್ಯಕ್ಕೆ ಹೆಲಿಕಾ­ಪ್ಟರ್‌­ಗಳನ್ನು ಬಳಸಲಾಗಿದೆ. ಸಂಚಾರಿ ಕಣ್ಗಾವಲು ಪಡೆ ಚುನಾವಣಾ ಕಾರ್ಯದ ಮೇಲ್ವಿಚಾರಣೆ ನಡೆಸು­ತ್ತಿದೆ’ ಎಂದು ಅವರು ಹೇಳಿದ್ದಾರೆ.

ಮತಗಟ್ಟೆಗೆ ತೆರಳಿದ ಸಿಬ್ಬಂದಿ ತಂಡ ಐಜಾಲ್‌ ವರದಿ: ಸರ್ಕಾರೇತರ ಸೇವಾ ಸಂಸ್ಥೆಗಳ ಸಮನ್ವಯ ಸಮಿತಿ 72 ಗಂಟೆ­ಗಳ ಮಿಜೋರಾಂ ಬಂದ್‌ಗೆ ಕರೆ ನೀಡಿ­ದ್ದರೂ ಮಿಜೋರಾಂನ ಏಕೈಕ ಲೋಕ­ಸಭಾ ಸ್ಥಾನದ ಚುನಾವಣೆ ನಡೆಸಲು 157 ಮತಗಟ್ಟೆ ಸಿಬ್ಬಂದಿಯ ತಂಡಗಳು ತಮಗೆ ನಿಗದಿಪಡಿಸಿದ ಮತ­ಗಟ್ಟೆಗಳಿಗೆ ತೆರಳಿವೆ. ತ್ರಿಪುರಾದ­ಲ್ಲಿಯ ಆರು ನಿರಾ­ಶ್ರಿತರ ಶಿಬಿರಗಳಲ್ಲಿ 11 ಸಾವಿರ ಜನ­ರಿಗೆ ಅಂಚೆ ಮತದಾನಕ್ಕೆ ಅವಕಾಶ ಮಾಡಿ­ಕೊಟ್ಟಿರುವ ಚುನಾ­ವಣಾ ಆಯೋ­­ಗದ ಕ್ರಮವನ್ನು ಪ್ರತಿ­ಭಟಿಸಿ ಸರ್ಕಾರೇತರ ಸೇವಾ ಸಂಸ್ಥೆಗಳ ಸಮನ್ವಯ ಸಮಿತಿಯು ಬಂದ್‌ಗೆ ಕರೆ ನೀಡಿದೆ.

ಬಹಿರಂಗ ಪ್ರಚಾರ ನಾಳೆ ಕೊನೆ
ಮುಂಬೈ ವರದಿ:  ವಿದರ್ಭದ ಹತ್ತು ಲೋಕಸಭಾ ಕ್ಷೇತ್ರಕ್ಕೆ ಏ. 10ರಂದು ಚುನಾವಣೆ ನಡೆಯಲಿರುವ ಹಿನ್ನೆಲೆ­ಯಲ್ಲಿ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬೀಳಲಿದೆ.10 ಕ್ಷೇತ್ರಗಳಿಗೆ 201 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 1,21,75, 662 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT