ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಗ್ರಹ ತಲೆಕೆಳಗಾಗಿದೆ!

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಇದೇ ಮೊದಲ ಬಾರಿಗೆ ತಲೆ ಕೆಳಗಾಗಿರುವ ಗ್ರಹವೊಂದನ್ನು ಖಗೋಳ ವಿಜ್ಞಾನಿಗಳು ಆಕಸ್ಮಿಕವಾಗಿ ಪತ್ತೆ ಮಾಡಿದ್ದಾರೆ.

ಭೂಮಿಯಿಂದ 2,600 ಬೆಳಕಿನ ವರ್ಷಗಳಷ್ಟು ದೂರದಲ್ಲಿರುವ ‘ಕೆಒಐ–3278’ ಎಂದು ಹೆಸರಿಸಲಾಗಿರುವ ಸ್ವಯಂ – ಮಸೂರ (ಸೆಲ್ಫ್‌ ಲೆನ್ಸಿಂಗ್‌) ಅವಳಿ ತಾರಾ ವ್ಯವಸ್ಥೆಯಲ್ಲಿ ಈ ಗ್ರಹ ಇದೆ.

ಈ ತಾರಾ ವ್ಯವಸ್ಥೆ­ಯಲ್ಲಿ ಸಮೀಪದ ನಕ್ಷತ್ರದ ದ್ರವ್ಯರಾಶಿ­ಯನ್ನು ಆ ನಕ್ಷತ್ರವು ತನ್ನ ಜೋಡಿ ತಾರೆಯ ಬೆಳಕನ್ನು ಎಷ್ಟು ಪ್ರಬಲವಾಗಿ ವರ್ಧಿಸುತ್ತದೆ ಎನ್ನುವುದರ ಮೇಲೆ ಅಳೆಯಲಾಗುತ್ತದೆ.

ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಖಗೋಳವಿಜ್ಞಾನಿ ಎರಿಕ್‌ ಅಗೊಲ್‌ ಅವರೊಂದಿಗೆ ಕೆಲಸ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿ  ಎಥಾನ್‌ ಕ್ರೂಸ್‌ ಈ ಗ್ರಹವನ್ನು ಪತ್ತೆ ಮಾಡಿದ್ದಾರೆ.

ಇಂತಹ ತಾರಾ ವ್ಯವಸ್ಥೆ ಬ್ರಹ್ಮಾಂಡ­ದಲ್ಲಿ ಇರುವ ಸಾಧ್ಯತೆ ಇದೆ ಎಂಬುದನ್ನು 1973ರಲ್ಲಿ ಖಗೋಳ ವಿಜ್ಞಾನಿಗಳು ನಕ್ಷತ್ರಗಳ ವಿಕಸನ ಮಾದರಿಗಳ ಆಧಾರದಲ್ಲಿ ಊಹಿಸಿ­ದ್ದರು.

ಇತರ ಹಲವು ಕೌತುಕ ಸಂಶೋಧನೆ­ಗಳಂತೆ ಈ ಗ್ರಹ ಕೂಡ ಪತ್ತೆಯಾಗಿದ್ದು ಆಕಸ್ಮಿಕ­ವಾಗಿಯೇ.

ಗ್ರಹಗಳ ಪತ್ತೆ ಕಾರ್ಯದಲ್ಲಿ ನಿರತ­ವಾಗಿರುವ  ಕೆಪ್ಲರ್‌ ಬಾಹ್ಯಾಕಾಶ ದೂರ­ದರ್ಶಕ ಕಳುಹಿಸಿರುವ ದತ್ತಾಂಶ­ಗಳನ್ನು ಪರಿಶೀಲಿಸುತ್ತಿರುವ ಸಂದರ್ಭ­ದಲ್ಲಿ ‘ಕೆಒಐ–3278’ ಅವಳಿ ತಾರಾ ವ್ಯವಸ್ಥೆಯಲ್ಲಿ ‘ಬುಡಮೇಲಾಗಿರುವ’ ಗ್ರಹ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT