ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಿಕೃತಿಗೆ ಕೊನೆ ಎಂದು?

ಅಕ್ಷರ ಗಾತ್ರ

ಶಾಲೆ ಎಂದರೆ ‘ದೇವಸ್ಥಾನ’, ಆ ದೇವಸ್ಥಾನದ ಒಳಗೆ ಕೈ ಮುಗಿದು  ಹೋಗ­ಬೇಕು, ಗುರುಗಳು ಎಂದರೆ ನಡೆದಾಡುವ ದೇವರು ಎಂಬ ನಂಬಿಕೆ ಇತ್ತು ಒಂದು ಕಾಲ­ದಲ್ಲಿ. ಈಗಿನ ಪರಿಸ್ಥಿತಿ ನೋಡಿದರೆ ಆ ನಂಬಿಕೆ ಸುಳ್ಳು ಎನ್ನುವ ಭಾವನೆ ಮೂಡು­ತ್ತದೆ. ಶಾಲೆಗಳಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ಇದಕ್ಕೆ ಪುಷ್ಟಿ ನೀಡುತ್ತವೆ.

ಆದರೆ, ಇದನ್ನೇ ಅವಲಂಬಿಸಿ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ತಪ್ಪುದಾರಿ ಹಿಡಿದಿದ್ದಾರೆ ಎಂದು ಸರಳೀಕರಿಸುವುದು ಸರಿಯಲ್ಲ. ಅತ್ಯಾಚಾರಕ್ಕೆ ಬಲಿಯಾದವರ ಉಡುಪು ಇಂಥ ಪ್ರಕರಣಗಳಿಗೆ ಕಾರಣ ಎನ್ನು­ವುದು ಸಬೂಬು ಆದೀತೇ ಹೊರತು ಸರಿಯಾದ ವಿವರಣೆ ಆಗಲಾರದು. ಅಷ್ಟಕ್ಕೂ ಚಿಕ್ಕಮಕ್ಕಳ ಉಡುಪುಗಳಲ್ಲಿ ಅಶ್ಲೀಲವಾದದ್ದು ಏನೂ  ಇಲ್ಲ. ವಿಕೃತ ರೂಢಿ­ಸುವು­ದರಲ್ಲಿ ಅಂತ­ರ್ಜಾಲ ಮತ್ತು ಸದಭಿರುಚಿಯಿಂದ ದೂರವಾಗಿರುವ ಕೆಲ ಸಿನಿಮಾಗಳ ಪಾತ್ರವೂ ಇದೆ. ವಯಸ್ಸಿನಲ್ಲಿ ಮಾತ್ರ ಪ್ರೌಢರಾದವರ ಇಂಥ ವಿಕಾರಗಳಿಗೆ ಕೊನೆ ಎಂದು?           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT