ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಕದನ ಸ್ಥಗಿತ: ವಿಮಾನ ಪತನ ಸ್ಥಳಕ್ಕೆ ತನಿಖಾಧಿಕಾರಿಗಳು

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಡೊನೆಟ್ಸ್ಕ್‌/ರೋಜೈಪ್ನ್‌(ಎಎಫ್‌ಪಿ/ ಎಪಿ): ಉಕ್ರೇನ್‌­ನಲ್ಲಿ ರಷ್ಯಾ ಪರ ಉಗ್ರರ ವಿರುದ್ಧದ ದಾಳಿ­ಯನ್ನು ಒಂದು ದಿನದ ಮಟ್ಟಿಗೆ ಸ್ಥಗಿತ­ಗೊ­ಳಿ­ಸಲು  ಉಕ್ರೇನ್‌ ಸರ್ಕಾರ ನಿರ್ಧರಿಸಿದೆ. ಮಲೇಷ್ಯಾ ಏರ್‌ಲೈನ್ಸ್‌ನ ಎಂ­ಎಚ್‌17 ವಿಮಾನ ಪತನದ ಬಗ್ಗೆ  ಅಂತರ­­­­ರಾಷ್ಟ್ರೀಯ ತನಿಖೆಗೆ ಈ ಹೋರಾಟ ಅಡ್ಡಿಯಾಗು­ತ್ತಿದೆ ಎಂದು ದಾಳಿ ಸ್ಥಗಿತಕ್ಕೆ ನಿರ್ಧರಿಸಲಾಗಿದೆ.

ಪತನ ಸ್ಥಳಕ್ಕೆ ತಜ್ಞರ ತಂಡ: ಈ ನಿರ್ಧಾರ­ದಿಂದಾಗಿ ಮಲೇಷ್ಯಾ ಏರ್‌­ಲೈನ್ಸ್‌ನ ಎಮ್‌ಎಚ್‌17 ವಿಮಾನ ಪತನಗೊಂಡ ಸ್ಥಳಕ್ಕೆ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ತನಿಖಾ ತಂಡ ಗುರುವಾರ ತಲುಪಿದೆ. ನೆದರ್‌ಲ್ಯಾಂಡ್‌ ಮತ್ತು ಆಸ್ಟ್ರೇಲಿ­ಯಾದ ಪೊಲೀಸ್‌ ಮತ್ತು ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ತಲುಪಿದ್ದು ಅಲ್ಲಿ ಉಳಿದಿರುವ ಪ್ರಯಾಣಿಕರ ಮೃತ­ದೇಹಗಳು ಮತ್ತು ಅವರ ವಸ್ತುಗಳನ್ನು ಸಂಗ್ರಹಿಸಲು ಒತ್ತು ನೀಡಲಿದ್ದಾರೆ. ವಿಮಾನ ಪತನ­ಗೊಂಡು ಎರಡು ವಾರ ಕಳೆದಿದೆ. ಹಾಗಾಗಿ ರೈಲಿನಲ್ಲಿ ಸಾಗಣೆ­ಯಾ­ಗದೆ ಉಳಿದಿರುವ ಮೃತದೇಹಗಳ ಸ್ಥಿತಿ ಹೇಗಿದೆ ಎಂದು ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT