ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಂದ ಪಾರಂಪರಿಕ ನಗರ ಧ್ವಂಸ

Last Updated 6 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬಾಗ್ದಾದ್‌ (ಎಎಫ್‌ಪಿ): ಇಸ್ಲಾಮಿಕ್‌ ಸ್ಟೇಟ್‌ (ಐ.ಎಸ್‌) ಉಗ್ರರು ಇರಾಕ್‌ನ ಪ್ರಾಚೀನ ಅಸ್ಸಿರಿಯನ್‌ ನಿಮೃದ್‌ ನಗ­ರ­ಮತ್ತು ಅಲ್ಲಿನ ಪುರಾತತ್ವ ಕಟ್ಟಡಗಳನ್ನು ನೆಲಸಮಗೊಳಿ­ಸಿರುವುದಾಗಿ ಸರ್ಕಾರ ಶುಕ್ರವಾರ ದೃಢಪಡಿಸಿದೆ.

ಇರಾಕ್‌ನ ಐತಿಹಾಸಿಕ ಪಾರಂಪರಿಕ  ನಗರದ ಮೇಲೆ ಜಿಹಾದಿಗಳು ನಡೆಸಿದ ಇತ್ತೀಚಿನ ಭೀಕರ ದಾಳಿ ಇದಾಗಿದೆ. ಉಗ್ರರು ಕಳೆದ ವಾರವಷ್ಟೇ ಪಾರಂಪ­ರಿಕ ನಗರ ಮತ್ತು ಕಟ್ಟಡಗಳನ್ನು ನಾಶ­ಪಡಿ­ಸುವ ಪ್ರಕಟಣೆ ಹೊರಡಿಸಿದ್ದರು. ಐ.ಎಸ್‌ ಉಗ್ರರ ಪ್ರಮುಖ ತಾಣವಾದ ಇರಾಕ್‌ನ ಎರಡನೇ ಬೃಹತ್‌ ನಗರ ಮೋಸುಲ್‌ನ ಆಗ್ನೇಯ ದಿಕ್ಕಿ­ನಿಂದ 30 ಕಿ.ಮೀ. ದೂರದ ಟಿಗ್ರಿಸ್‌ ನದಿ ದಂಡೆ­ಯಲ್ಲಿ ನಿಮೃದ್‌ ನಗರವಿದೆ.

ಗುರುವಾರ ಮಧ್ಯಾಹ್ನದ ಪ್ರಾರ್ಥನೆ ನಂತರ ಉಗ್ರರು ಆರಂಭಿಸಿದ ನೆಲಸಮ ದಾಳಿ, ಶುಕ್ರವಾರವೂ ನಡೆದಿರುವು­ದಾಗಿ ಪುರಾತತ್ವ ಅಧಿಕಾರಿಗಳು ಹೇಳಿದ್ದಾರೆ.

  ನಿಮೃದ್‌ ನಗರ 13ನೇ ಶತಮಾನ ಬಿ.ಸಿ.ಯ ಅಸ್ಸಿರಿಯನ್‌ ಯುಗದ ರತ್ನಾ­ಭರಣಗಳು ಪತ್ತೆಯಾದುದಕ್ಕೆ ಪ್ರಸಿದ್ಧಿ­. 1988ರಲ್ಲಿ ಆಭರಣ ಮತ್ತು ಬೆಲೆ­ಬಾಳುವ ಕಲ್ಲುಗಳು ಇಲ್ಲಿ ಪತ್ತೆ­ಯಾಗಿ, ಇದು 20ನೇ ಶತಮಾ­ನದ ಮಹಾನ್‌ ಸಂಶೋ­ದನೆ ಎನಿಸಿತ್ತು.  ಇವುಗಳನ್ನು ಕೆಲ­ಕಾಲ ಇರಾಕ್‌ನ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿಡ­ಲಾ­ಗಿತ್ತು.

ಆದರೆ 2003­ರಲ್ಲಿ ನಡೆದ ಅಮೆರಿಕ ಆಕ್ರಮಣದಿಂದ ಲೂಟಿಯಾ­ಗಿದ್ದು, ಬಳಿಕ ಸೆಂಟ್ರಲ್‌ ಬ್ಯಾಂಕ್‌ ಕಟ್ಟಡ­ದಲ್ಲಿಡಲಾಯಿತು. ನಿಮೃದ್‌ ನಗರದ ಮೌಲ್ಯಯುತ ಕಲಾ­ಕೃತಿ­ಗಳನ್ನು ಮೋಸುಲ್‌, ಬಾಗ್ದಾದ್‌, ಪ್ಯಾರಿಸ್‌, ಲಂಡನ್‌ ಮತ್ತಿತರ ಕಡೆಗಳ ವಸ್ತು ಸಂಗ್ರ­ಹಾಲಯಗಳಿಗೆ ರವಾನಿಸಲಾಯಿತು.

ನ್ಯೂಯಾರ್ಕ್‌ನ ಸ್ಟೋನಿ ಬ್ರೂಕ್‌ ವಿಶ್ವವಿದ್ಯಾಲಯದಲ್ಲಿರುವ ಇರಾಕ್‌ನ ಪುರಾತತ್ವಜ್ಞ ಅಬ್ದುಲಮೀರ್‌ ಹಮ್ದಾನಿ ಅವರ ಪ್ರಕಾರ, ಪ್ರಾಚೀನ ಪಾರಂಪರಿಕ ನಗರ­ಗಳನ್ನು ನಾಶಪಡಿಸುವ ಗುರಿ ಹೊಂದಿ­ದ ಐ.ಎಸ್‌ ಉಗ್ರರು, ಮುಂದೆ 2,000 ವರ್ಷ­ಗಳಷ್ಟು ಹಳೆಯ ನೈನ್ವೆಹ್‌ ಪ್ರಾಂತ್ಯದಲ್ಲಿ­ರುವ ಸುಂದರ ವಿಶ್ವ ಪಾರಂ­ಪ­ರಿಕ ನಗರ ಹತ್ರ­ವನ್ನು ಹಾನಿಗೊಳಿಸುವ ಆತಂಕವಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಂಸ್ಕೃತಿಕ ಅಂಗವಾದ ಎಸ್ಕೋದ ನಿರ್ದೇಶಕ ಅಲೆಕ್ಸ್‌ ಪ್ರಾಥೆ, ಇರಾಕ್‌ನ ಪಾರಂಪರಿಕ ಶ್ರೀಮಂತಿಕೆ­­ ನಾಶ­ಪಡಿಸುವ ಉಗ್ರರ ಯತ್ನ ಎಂದಿದ್ದಾರೆ.

ಕ್ರಮಕ್ಕೆ ಯುನೆಸ್ಕೊ ಒತ್ತಾಯ
ಈ ಮಧ್ಯೆ, ಯುನೆಸ್ಕೊ ಮಹಾಪ್ರಧಾನ ನಿರ್ದೇಶಕ ಐರಿನಾ ಬೊಕೊವಾ ಅವರು ತುರ್ತಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಕರೆದು, ಮೋಸುಲ್‌ ವಸ್ತು ಸಂಗ್ರ­ಹಾಲಯ ನಾಶದ ಕುರಿತು ಅಂತರ­ರಾಷ್ಟ್ರೀಯ ಅಪರಾಧ ನ್ಯಾಯಾ­ಲಯ­ದಲ್ಲಿ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT