ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರ ವಿರುದ್ಧ ನಿರ್ಬಂಧ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘ­ಟನೆ ಹರ್ಕತ್‌ ಉಲ್‌ ಮುಜಾಹಿದೀನ್‌ ಮತ್ತು 2008ರ ಮುಂಬೈ ದಾಳಿ ಸೇರಿದಂತೆ ಭಾರತದ ವಿರುದ್ಧ ಸರಣಿ ದಾಳಿಯಲ್ಲಿ ಭಾಗಿಯಾಗಿರುವ ಲಷ್ಕರ್ –ಎ–ತಯಬಾದ (ಎಲ್‌ ಇಟಿ) ಇಬ್ಬರು ಮುಖಂಡರ ವಿರುದ್ಧ ಅಮೆರಿಕ ನಿರ್ಬಂಧ ಹೇರಿದೆ.

ಹರ್ಕತ್‌ ಉಲ್‌ ಮುಜಾಹಿದೀನ್‌ನ ಸ್ಥಾಪಕ ಫಸಲ್‌ ಉರ್ ರಹ್ಮಾನ್ ಖಲೀಲ್‌ ಮತ್ತು ಎಲ್‌ಇಟಿಗೆ ಆರ್ಥಿಕ ನೆರವು ಒದಗಿಸುತ್ತಿರುವ ಮಹಮ್ಮದ್‌ ನಯೀಮ್‌ ಶೇಖ್‌ ಮತ್ತು ಉಮರ್‌ ನಯೀಮ್‌ ಶೇಖ್‌ ವಿರುದ್ಧವೂ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕ ಹೇಳಿದೆ.
ಇವರಿಬ್ಬರಿಗೆ ಸೇರಿದ ಕಂಪೆನಿಗಳಾದ ಅಬ್ದುಲ್‌ ಹಮೀದ್ ಶಹಾಬುದ್ದೀನ್‌ ಮತ್ತು ನಿಯಾ ಇಂಟರ್‌ನ್ಯಾಷನಲ್‌ ವಿರುದ್ಧವೂ ನಿರ್ಬಂಧ ಹೇರಲಾಗಿದೆ.

ಈ ಸಂಸ್ಥೆಗಳು ಅಮೆರಿಕದಲ್ಲಿ ಹೊಂದಿ­ರುವ ಆಸ್ತಿಯನ್ನು ಮುಟ್ಟು­ಗೋಲು ಹಾಕಿಕೊಳ್ಳ­ಲಾಗುವುದು. ಈ ಸಂಸ್ಥೆಗಳೊಂದಿಗೆ ಅಮೆರಿಕ ಪ್ರಜೆಗಳು ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT