ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರ ಬಾಗ್ದಾದಿ ಸಾವಿನ ನಾಟಕ

Last Updated 3 ಮೇ 2015, 19:30 IST
ಅಕ್ಷರ ಗಾತ್ರ

ವಿಧ್ವಂಸಕ ಕೃತ್ಯಗಳ ಮೂಲಕ ಜಗತ್ತಿನ ಹಲವು ದೇಶಗಳಲ್ಲಿ ಆತಂಕ ಸೃಷ್ಟಿಸುತ್ತಿರುವ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಅಬುಬಕರ್‌ ಅಲ್‌ ಬಾಗ್ದಾದಿ ಮೃತ ಪಟ್ಟಿದ್ದಾನೆ ಎಂದು ಕಳೆದ ಸೋಮವಾರ ವರದಿಯಾಗಿತ್ತು. ಇಸ್ರೇಲಿ ಆಸ್ಪತ್ರೆಯಲ್ಲಿ ಈತ ಕೊನೆಯುಸಿರೆಳೆದಿದ್ದಾನೆ ಎಂದೂ ಇರಾನ್‌ ರೇಡಿಯೊ ಹೇಳಿತ್ತು.

ಮಾರ್ಚ್‌ನಲ್ಲಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಬಾಗ್ದಾದಿ ಗಾಯಗೊಂಡಿದ್ದಾನೆ, ಆತ ಐಎಸ್‌ನ ಚಟುವಟಿಕೆಗಳನ್ನು ನಡೆಸಲು ಶಕ್ತಿ ಹೊಂದಿಲ್ಲ ಎನ್ನಲಾಗಿತ್ತು. ಆದರೆ, ಕಳೆದ ಶುಕ್ರವಾರ ಬಾಗ್ದಾದಿ  ಇನ್ನೂ ಜೀವಂತವಾಗಿದ್ದಾನೆ ಎಂಬ ಮತ್ತೊಂದು ಸುದ್ದಿ ಹೊರ ಬಂದಿದೆ. ಆತನ ಬೆನ್ನು ಹುರಿಗೆ ಗಾಯವಾಗಿದ್ದು, ಸಂಘಟನೆಯ ನೇತೃತ್ವ ವಹಿಸಿಕೊಳ್ಳಲು ಸಮರ್ಥನಾಗಿಲ್ಲ ಎಂದು ಹೇಳಲಾಗುತ್ತಿದೆ. ಇಡೀ ವಿಶ್ವಕ್ಕೆ ಬೇಕಾಗಿರುವ ಈ ಉಗ್ರ ಅಡಗಿಕೊಂಡಿರುವ ಮೋಸುಲ್‌ನ ರಹಸ್ಯ ಸ್ಥಳಕ್ಕೆ ತೆರಳಿರುವ ಇಬ್ಬರು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ‘ಗಾರ್ಡಿಯನ್‌’ ಪತ್ರಿಕೆ ಹೇಳಿದೆ.

ಬಾಗ್ದಾದಿಗೆ ಮೋಸುಲ್‌ನ ಆಸ್ಪತ್ರೆ ಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿ ಉಗ್ರರು ಬಿಗಿ ಭದ್ರತೆಯಲ್ಲಿ ಕಾಯುತ್ತಿದ್ದಾರೆ ಎಂಬ ಮಾಹಿತಿಗಳಿವೆ.  ಬಾಗ್ದಾದಿ, ಇರಾಕ್‌ನ ಉತ್ತರ ನಗರ ಮೋಸುಲ್‌ನಲ್ಲಿ ಹತ್ಯೆಯಾಗಿರುವುದಾಗಿ ಏಪ್ರಿಲ್‌ 23 ರಂದು ವರದಿಯಾಗಿತ್ತು. ಸಿರಿಯಾದ ಖಾಜ್‌ ಪ್ರಾಂತ್ಯದ ಮೇಲೆ ನಡೆದ  ದಾಳಿಯಲ್ಲಿ ಗಾಯಗೊಂಡಿದ್ದಾನೆ ಎಂದೂ ವರದಿಯಾಗಿತ್ತು. 

ಹೀಗೆ ಒಬ್ಬನೇ ವ್ಯಕ್ತಿ ಹಲವು ಬಾರಿ ಸಾಯುವುದು ಮತ್ತೆ ಬದುಕಿರುವುದಾಗಿ ವರದಿಯಾಗುವುದು ಅತ್ಯಂತ ಕುತೂಹಲಕಾರಿ ವಿದ್ಯಮಾನವಾಗಿದೆ. ಬಾಗ್ದಾದಿ ಮಾತ್ರ ಹಲವು ಬಾರಿ ಮರುಹುಟ್ಟು ಪಡೆಯುತ್ತಾನೆ. ಅಮೆರಿಕ ಸೇರಿದಂತೆ ವಿಶ್ವದ ದಾರಿ ತಪ್ಪಿಸುವ ಸಲುವಾಗಿ ಹೀಗೆ ಸಾಯುವ ಮತ್ತು ಬದುಕಿರುವ ಸುದ್ದಿಗಳನ್ನು ಹಬ್ಬಿಸಲಾ ಗುತ್ತಿದೆ ಎಂಬ ಶಂಕೆ ಈಗ ವ್ಯಕ್ತವಾಗಿದೆ. ಅಲ್‌ ಕೈದಾ ತನ್ನ ಇರಾಕ್ ಘಟಕಕ್ಕೆ ಐಎಸ್ಐಎಸ್‌ ಎಂದು ಹೆಸರಿಟ್ಟು ಅದಕ್ಕೆ ಬಾಗ್ದಾದಿಯನ್ನು ಮುಖ್ಯಸ್ಥನ ನ್ನಾಗಿ 2010ರ ಮೇ 16 ರಂದು ನೇಮಿಸಿತ್ತು.

ಅಂದಿನಿಂದ ಈವರೆಗೆ ಬಾಗ್ದಾದಿ ನಡೆಸಿದ ರಕ್ತಪಾತಕ್ಕೆ ಲೆಕ್ಕವೇ ಇಲ್ಲ. ಬಾಗ್ದಾದಿ ತಲೆಗೆ 10 ದಶಲಕ್ಷ ಡಾಲರ್‌ ಬಹುಮಾನವನ್ನು ಅಮೆರಿಕ ಘೋಷಿಸಿದೆ. ಈ ಉಗ್ರ ಸತ್ತಿರುವ ಮತ್ತು ಬದುಕಿರುವ ಅನುಮಾನದ ಸುದ್ದಿಗಳು ಮಾತ್ರ ಮಾಧ್ಯ ಮಗಳಲ್ಲಿ  ಆಗಾಗ ಹರಿದಾಡುತ್ತವೆ. ಒಟ್ಟಾರೆ ಪಾಶ್ಚಿ ಮಾತ್ಯ ರಾಷ್ಟ್ರಗಳಿಗೆ ಈತನ ಸಾವಿನ ಸುದ್ದಿ ಮಾತ್ರ ಕುತೂ ಹಲ ಹುಟ್ಟಿಸಿದೆ. ಇಸ್ಲಾಂ ಸಾಮ್ರಾಜ್ಯದ ಕನಸನ್ನು ಹುಟ್ಟು ಹಾಕಿ ರುವ ಬಾಗ್ದಾದಿ, ತಾನು ಅದರ ‘ಖಲೀಫಾ’ ಎಂದು ಈಗಾಗಲೇ ಘೋಷಿಸಿಕೊಂಡಿದ್ದಾನೆ. 

ಮಹತ್ವಾಕಾಂಕ್ಷೆ :   ಡಾಕ್ಟರೇಟ್‌ ಪದವಿ ಪಡೆದಿದ್ದರೂ ಈತನ ಮಹತ್ವಾಕಾಂಕ್ಷೆ ಇಸ್ಲಾಮಿಕ್‌ ಸಾಮ್ರಾಜ್ಯ ಸ್ಥಾಪನೆ. ಈತ ರಹಸ್ಯ ಸ್ಥಳದಲ್ಲಿ ಕುಳಿತು ತನ್ನ ಕಾರ್ಯತಂತ್ರವನ್ನು ಹೆಣೆಯುತ್ತಾನೆ ಎನ್ನಲಾಗುತ್ತದೆ. ಕಳೆದ ವರ್ಷದ ಜುಲೈ 5 ರಂದು ಮೋಸುಲ್‌ನ ಆಲ್ ನೂರಿ ಮಸೀದಿಯಲ್ಲಿ ರಂಜಾನ್‌ ಸಂದೇಶ ಸಾರಲು ತೆರಳಿದ್ದ. 2014ರ ಜುಲೈ 5ರಂದು ಈತನ ಭಾಷಣದ ವಿಡಿಯೊ ಬಹಿರಂಗವಾಗಿತ್ತು.

ಪ್ರತೀಕಾರದ ಕ್ರಮ ಸಾಧ್ಯತೆ: ಬಾಗ್ದಾದಿಗೆ ಆಗಿರುವ ಗಂಭೀರ ಗಾಯಕ್ಕೆ ಪ್ರತೀಕಾರ ಕ್ಕಾಗಿ ಐಎಸ್‌ ಉಗ್ರರು ಮತ್ತೆ ದಾಳಿ ನಡೆಸುವ

ಶಂಕೆ ವ್ಯಕ್ತವಾಗಿದೆ. ಯುರೋಪ್‌ ಮೇಲೆ ವಿಶೇಷವಾಗಿ ಬ್ರಿಟನ್‌ನಲ್ಲಿ ದಾಳಿ ನಡೆಯಬಹುದು ಎಂದು ಹೇಳಲಾಗುತ್ತಿದೆ. ವಾಯವ್ಯ ಇರಾಕ್‌ನಲ್ಲಿ ಅಮೆರಿಕ 2 ತಿಂಗಳ ಹಿಂದೆ ನಡೆಸಿದ ವಾಯು ದಾಳಿಯಲ್ಲಿ  ಐಎಸ್‌ ನೆಲೆಗಳು ನಾಶವಾಗಿವೆ ಎನ್ನಲಾಗುತ್ತಿದೆ. 

ಅಮೆರಿಕಕ್ಕೆ ತಲೆನೋವು:  ಐಎಸ್‌ ಉಗ್ರರ ನಿರ್ನಾಮಕ್ಕೆ ಮುಂದಾಗಿರುವ ಅಮೆರಿಕ ಇದಕ್ಕೆ ಸಾಕಷ್ಟು ಸೇನೆ, ರಕ್ಷಣಾ ಸಾಮಗ್ರಿಯನ್ನು ವಿನಿಯೋಗಿಸುತ್ತಿದೆ. ಸಾವಿರಾರು ಯೋಧರು ಇದರಲ್ಲಿ  ತೊಡಗಿದ್ದಾರೆ. ತಾಲಿಬಾನ್‌ ಮುಖ್ಯಸ್ಥ ಒಸಾಮ ಬಿನ್‌ ಲಾಡೆನ್‌ ಹತ್ಯೆ ನಂತರ ಅಲ್‌ ಬಾಗ್ದಾದಿ ಅಮೆರಿಕಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದಾನೆ. ಈತನ ತಲೆಗೆ ಕೇವಲ ಬಹುಮಾನ ಘೋಷಿಸಿದರೆ  ಸಾಲದೆಂಬುದು ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಗೊತ್ತಿದೆ. ನಿಮೃದ್‌   ನಗರವನ್ನು ನಾಶ ಮಾಡಿದ ನಂತರ ಮುಂದಿನ ಸರದಿ ಯಾವುದು ಎಂಬ ಪ್ರಶ್ನೆ ಅಮೆರಿಕದಲ್ಲಿ ಮೂಡಿದೆ.

ಐಎಸ್‌ಗೆ  ಅಷ್ಟೊಂದು ಪ್ರಮಾಣ ದಲ್ಲಿ  ನೆರವು ಎಲ್ಲಿಂದ ಹರಿದುಬರು ತ್ತಿದೆ, ಹಣಕಾಸಿನ ಮೂಲ ಯಾವುದು ಎಂಬುದೂ ಇನ್ನೂ ನಿಗೂಢವಾಗಿದೆ. ‘ಐಎಸ್‌ ಉಗ್ರರು ನಗರಗಳನ್ನು, ಗ್ರಾಮಗಳನ್ನು ನಾಶ ಮಾಡಿದ್ದಾರೆ, ಅಮಾಯಕ ಜನರನ್ನು ಕೊಂದಿದ್ದಾರೆ. ಇದೊಂದು ಹೇಡಿತನ ಕೃತ್ಯ. ಮುಂದಿನ ದಿನಗಳಲ್ಲಿ ಅವರು ನಡೆಸುವ ವಿನಾಶದ ಕೃತ್ಯಗಳಿಗೆ ದೇವರು ಅಭಯ ನೀಡ ಲಾರ’ ಎಂದು ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ.

ವಿಶ್ವದ 90 ರಾಷ್ಟ್ರಗಳಿಂದ 20 ಸಾವಿರ ಜನರು ಸಿರಿಯಾಕ್ಕೆ ಐಎಸ್‌್ ಸೇರಲು ಧಾವಿಸಿದ್ದಾರೆ ಎಂದು ಅಮೆ ರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ನಿಕೋ ಲಾಸ್‌ ರಸ್‌ ಮುಸೀನ್‌ ಹೇಳಿದ್ದಾರೆ.  ಇವರಲ್ಲಿ 3,400 ಜನರು ಪಾಶ್ಚಿಮಾತ್ಯ ರಾಷ್ಟ್ರಗಳ ಜನರು. 150 ಜನ ಅಮೆರಿಕದವರಿದ್ದಾರೆ.

ವಿಶ್ವಕ್ಕೆ ಆತಂಕ:   ಇಸ್ಲಾಮಿಕ್‌ ಸ್ಟೇಟ್‌ ತನ್ನ ಬೇರುಗಳನ್ನು ವಿಶ್ವದ ಹಲವು ರಾಷ್ಟ್ರಗಳಲ್ಲಿ ನೆಟ್ಟು ಬಲವಾಗಿ ಬೆಳೆಯುವುದು ಆತಂಕದ ವಿಷಯವೂ ಆಗಿದೆ.  ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ ನಡೆದ ಪ್ರತಿಭಟನೆ ವೇಳೆ ಐಎಸ್‌ ಧ್ವಜ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು. ಕೇಂದ್ರ ಸರ್ಕಾರ ಸಹ ಐಎಸ್‌ ಭಾರತದಲ್ಲಿ ನೆಲೆಯೂರಲು ಬಿಡುವುದಿಲ್ಲ ಎಂದು ಘೋಷಣೆ ಮಾಡಿದೆ.

ಮುಂಬೈನ ಕಲ್ಯಾಣ್‌ ಎಂಬಲ್ಲಿನ ಕೆಲವರು ಐಎಸ್‌ ಸೇರಿದ ಸುದ್ದಿಯಾಗಿತ್ತು.  ಪೊಲೀಸರ ವಶದಲ್ಲಿರುವ ಒಬ್ಬ ವಿಚಾರಣೆ ಎದುರಿಸುತ್ತಿದ್ದಾನೆ. ಈ ಸಂಘಟನೆಯ ಆಕರ್ಷಣೆಗೆ ಒಳಗಾಗಿದ್ದ ಹೈದರಾಬಾದ್‌ನ ಎಂಜಿನಿಯರ್‌ನನ್ನು  ಬಂಧಿಸಲಾಗಿದೆ.
ಐ.ಎಸ್ ಪರವಾಗಿ ಟ್ವೀಟ್ ಮಾಡು ತ್ತಿದ್ದ ಆರೋಪದ ಮೇಲೆ ಮೆಹದಿ ಮಸ್ರೂರ್‌ ಬಿಸ್ವಾಸ್‌ ಎಂಬಾತನ್ನು ಬೆಂಗಳೂರಿನಲ್ಲಿ  ಬಂಧಿಸಲಾಗಿದೆ. ಇನ್ಯಾವಾಗ ಅಲ್‌ ಬಾಗ್ದಾದಿ ಸಾಯುವ ಸುದ್ದಿ ಬರುತ್ತದೊ ಆನಂತರ ಬದುಕಿರುವ ಮಾಹಿತಿ ಪ್ರಕಟವಾಗುತ್ತದೊ ಯಾರು ಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT