ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಕಂಪ್ಯೂಟರ್‌ ತರಬೇತಿ

Last Updated 22 ಡಿಸೆಂಬರ್ 2014, 19:32 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪಿ.ಇ.ಎಸ್‌. ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿ­ರುವ  ‘ಅಂತರ್ಜಾಲ ಪ್ರಪಂಚ’ ತರಬೇತಿ ಶಿಬಿರವು ಸೋಮವಾರ ಪ್ರಾರಂಭವಾ ಯಿತು.

ಶಿಬಿರದಲ್ಲಿ ನಾಲ್ಕು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 150 ವಿದ್ಯಾರ್ಥಿ­ಗಳಿಗೆ ಉಚಿತ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ.
‘2 ದಿನದ ಈ ಶಿಬಿರದಲ್ಲಿ ವಿದ್ಯಾ­ರ್ಥಿ­ಗಳಿಗೆ ಕಂಪ್ಯೂಟರ್‌ನ ಪ್ರಾಥಮಿಕ ಕಾರ್ಯದ ಪರಿಚಯ,  ನಿರೂಪಣೆ (ಪ್ರೆಜೆಂಟೇಷನ್‌), ತಪಶೀಲು ಪಟ್ಟಿ (ಸ್ಪ್ರೆಡ್‌ಶೀಟ್‌), ಅಂತರ್ಜಾಲ ಬಳಕೆ, ಇ–ಮೇಲ್ ರವಾನೆ ಇತ್ಯಾದಿ ತರಬೇತಿ ನೀಡಲಾಗುತ್ತದೆ. ಆನ್‌ಲೈನ್‌ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಸರ್ಕಾರ ಮತ್ತು ಇಂಟೆಲ್‌ ನೀಡುವ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತದೆ’ ಎಂದು ವಿವಿ­ಯ ಗಣಕಯಂತ್ರ ವಿಭಾಗ ಮುಖ್ಯಸ್ಥ ನಿತಿನ್‌ ಪೂಜಾರಿ ತಿಳಿಸಿದರು.

ಶಿಬಿರದಲ್ಲಿ ಕುಂಬಳಗೋಡು, ತಿಪ್ಪ­ಗೊಂಡನಹಳ್ಳಿ, ಕಗ್ಗಲಿಪುರ, ಚಿಕ್ಕನಾಯಕ­ನ­ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 150 ಮಕ್ಕಳು ಭಾಗವಹಿಸಿದ್ದರು.

ನಗರ ಜಿಲ್ಲಾ ಪಂಚಾಯಿತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯರಾಮ್‌, ದಕ್ಷಿಣ ವಲಯ 1ರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪ್ರಕಾಶ್‌, ಶಿಕ್ಷಣಾಧಿಕಾರಿ ಎನ್‌.ವೆಂಕಟೇಶ್‌ ಕುಲ­ಸಚಿವ ಕೃಷ್ಣಮೂರ್ತಿ ಉಪಸ್ಥಿತರಿ­ದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT