ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಖನನದಲ್ಲಿ ನಾಣ್ಯಗಳು ಅಮೂಲ್ಯ ಪುರಾವೆ

ನಿವೃತ್ತ ಪ್ರೊ. ಎ.ವಿ. ನರಸಿಂಹಮೂರ್ತಿ ಅಭಿಮತ
Last Updated 24 ಜುಲೈ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಉತ್ಖನನದಲ್ಲಿ ನಾಣ್ಯಗಳ ಪಾತ್ರ ತುಂಬಾ ಮಹತ್ವದ್ದು. ಅವು ನಿರ್ಧಾರಿತ ಪುರಾವೆಗಳು. ಖಚಿತ ಮಾಹಿತಿ ನೀಡುತ್ತವೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ವಿಭಾಗದ ನಿವೃತ್ತ ಪ್ರಾಧ್ಯಾಪಕ ಎ.ವಿ. ನರಸಿಂಹಮೂರ್ತಿ ಪ್ರತಿಪಾದಿಸಿದರು.

ನಗರದಲ್ಲಿ ಭಾನುವಾರ ಮಿಥಿಕ್ ಸೊಸೈಟಿ ಹಾಗೂ ಎಸ್‌.ಆರ್‌. ರಾವ್‌ ಸ್ಮಾರಕ ಸಂಸ್ಥೆ ಆಯೋಜಿಸಿದ್ದ ‘ಕರ್ನಾಟಕ ದಲ್ಲಿ ಪುರಾತತ್ವ ಉತ್ಖನನದಲ್ಲಿ ನಾಣ್ಯಗಳ ಮಹತ್ವ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಉತ್ಖನನದ ವೇಳೆ ಸಿಗುವ ಮಡಿಕೆ ಚೂರು, ಕಲ್ಲಿನ ಚೂರುಗಳಿಗೆ ಕಾಲ ಮಾನ  ಇರಲ್ಲ. ಆದರೆ, ನಾಣ್ಯಗಳಿಂದ ಕಾಲದ ಸುಳಿವು ಸಿಗುತ್ತದೆ. ರಾಜನ ಚಿತ್ರವಿದ್ದರೆ, ಆಡಳಿತಯುಗ, ಧಾರ್ಮಿಕ ಸಂಕೇತ ಇದ್ದರೆ, ಧರ್ಮ ಹೀಗೆ ಎಲ್ಲವೂ ಗೊತ್ತಾಗುತ್ತದೆ. ನಾಣ್ಯ ತಯಾರಿಸಲು ಲೋಹವಿಜ್ಞಾನ ತಿಳಿದಿರಬೇಕು. ಆದ್ದ ರಿಂದ ತಂತ್ರಜ್ಞಾನವೂ ತಿಳಿಯು ತ್ತದೆ. ಹೀಗೆ ಉತ್ಖನನದಲ್ಲಿ ನಾಣ್ಯದ ಮಹತ್ವ ಅಪಾರ’ ವಿವರಿಸಿದರು.

‘ಬೆಂಗಳೂರಿನ ಎಚ್‌ಎಎಲ್‌ ಸೇರಿದಂತೆ ದಕ್ಷಿಣ  ಭಾರತದ ಹಲವೆಡೆ ರೋಮ್‍ ಚಿನ್ನದ ನಾಣ್ಯಗಳು ಸಿಕ್ಕಿವೆ.  ಅದರಿಂದ ದಕ್ಷಿಣ ಭಾರತ ಹಾಗೂ ರೋಮನ್  ಸಾಮ್ರಾಜ್ಯದ ನಡುವಣ ವ್ಯಾಪಾರದ ನಂಟು ತಿಳಿಯುತ್ತದೆ. ಮಸಾಲೆ ಪದಾರ್ಥ ಅದರಲ್ಲೂ ಮೆಣಸು, ಏಲಕ್ಕಿಗಾಗಿ ಅವರು ಇಲ್ಲಿಗೆ ಬಂದಿದ್ದರು’ ಎಂದರು.

‘ತಿರುಪತಿ–ತಿರುಮಲದ ಹುಂಡಿಗೆ ಭಕ್ತರು ಹಾಕಿದ್ದ ಹಳೆ ನಾಣ್ಯಗಳನ್ನು ಒಂದೊಮ್ಮೆ  ಕರಗಿಸಲು ಕೆಲವರು ಮುಂದಾಗಿದ್ದರು. ನಾಣ್ಯ ಕರಗಿಸುವುದು ಅಪರಾಧ.  ಆದ್ದರಿಂದ ಅದನ್ನು ಪುರಾ ತತ್ವ ಇಲಾಖೆಗೆ ನೀಡಲಾಗಿತ್ತು. ನನ್ನ ನೇತೃತ್ವದ 35 ಜನರ ತಂಡವು ಅವುಗ ಳನ್ನೆಲ್ಲ ವಿಶೇಷಣೆಗೆ ಒಳಪಡಿಸಿತ್ತು’.

‘ವಿಜಯನಗರ, ಮುಸಲ್ಮಾನರ ಆಳ್ವಿಕೆ, ಈಸ್ಟ್‌ ಇಂಡಿಯಾ ಕಂಪೆನಿ ಕಾಲದ್ದು ಸೇರಿದಂತೆ ಹಲವು ಬಗೆಯ ನಾಣ್ಯಗಳು ಸಿಕ್ಕಿದ್ದವು. ಮುಮ್ಮುಡಿ ಕೃಷ್ಣರಾಜ ಒಡೆಯರ್‌ ಕಾಲದ ನಾಣ್ಯ ಗಳು ಸಾಕಷ್ಟು ಸಂಖ್ಯೆಯಲ್ಲಿದ್ದವು. ಇದ ರಿಂದ ಕರ್ನಾಟಕದ ಜನರು ತಿರುಪತಿ–ತಿರುಮಲಕ್ಕೆ ಸಾಕಷ್ಟು ಭೇಟಿ ನೀಡು ತ್ತಿದ್ದರು ಎಂಬುದು ವೇದ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಉತ್ಖನನ ಮಾಡಿ ವಿಶ್ಲೇಷಣೆಗೆ ಒಳಪಡಿಸಿ ವಿವರಣೆ ದಾಖಲಿಸದಿದ್ದರೆ ಅದು ಕೇವಲ ಮ್ಯೂಸಿಯಂನಲ್ಲಿ ಪ್ರದ ರ್ಶನಕ್ಕೆ ಸೀಮಿತ ಆಗುತ್ತದೆ. ಅದ ಕ್ಕಿಂತಲೂ ಭೂ ತಾಯಿಯ ಗರ್ಭದಲ್ಲೇ ಅದನ್ನು ಉಳಿಸುವುದು ಉತ್ತಮ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಪುರಾತತ್ವ ಇಲಾಖೆಯ ಬೆಂಗಳೂರು ವೃತ್ತದ ಅಧೀಕ್ಷಕ ಟಿ. ಅರುಣ್‌ ರಾಜ್, ‘ಪುರಾತತ್ವ  ತಜ್ಞರ ಪಾಲಿಗೆ ನಾಣ್ಯಗಳು ಮೂಲಾಕ್ಷರಗ ಳಿದ್ದಂತೆ. ಆದರೆ, ನಾಣ್ಯಗಳ ಲಭ್ಯತೆ, ಅಲ ಭ್ಯತೆಯಿಂದಲೇ ಎಲ್ಲವನ್ನೂ ನಿಖರವಾಗಿ ನಿರ್ಧರಿಸಲಾಗದು’ ಎಂದರು.

‘ಕರ್ನಾಟಕದಲ್ಲಿ ರಾಷ್ಟ್ರಕೂಟರು ಆಳ್ವಿಕೆ ನಡೆಸಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಅವರ ಕಾಲದ ನಾಣ್ಯ ಸಿಕ್ಕಿರುವುದು ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ನಾಣ್ಯಗಳ ಲಭ್ಯತೆಯೇ ಎಲ್ಲ ವನ್ನೂ ಹೇಳುವುದಿಲ್ಲ. ಹೆಚ್ಚಿನ ವಿಶ್ಲೇ ಷಣೆ, ವಿವರಣೆ ಅತ್ಯಗತ್ಯ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್‍, ‘ತಂತ್ರಜ್ಞಾನದ ಅತ್ಯಾಧುನಿಕ ಕಾಲಘಟ್ಟದಲ್ಲಿ ಮಾನವೀಯ ಮೌಲ್ಯಗಳೇ ಆಧಾರ. ವಿಶ್ವದಲ್ಲಿ ದುರ ದೃಷ್ಟವಶಾತ್‍ ಸಾಂಸ್ಕೃತಿಕ ಭಯೋ ತ್ಪಾದನೆಯೂ ಸಂಭವಿಸುತ್ತಿದೆ. ಮಾನ ವೀಯ ಮೌಲ್ಯಗಳ ಜೊತೆಗೆ ಪುರಾತತ್ವ ತಾಣಗಳೂ ಭಯೋತ್ಪಾದನೆಗೆ ಬಲಿ ಯಾಗುತ್ತಿವೆ. ಆದ್ದರಿಂದ ಪುರಾತತ್ವ ತಾಣಗಳನ್ನು ಸಂರಕ್ಷಿಸಬೇಕಿದೆ’ ಎಂದರು.

ಪುಸ್ತಕ ಪ್ರದರ್ಶನ
ಕಾರ್ಯಕ್ರಮದಲ್ಲಿ ಡಾ.ಎಸ್‌. ಆರ್‌. ರಾವ್ ಅವರು ಲೋಥಾಲ್‌ ಹಾಗೂ ದ್ವಾರಕೆಯಲ್ಲಿ ನಡೆಸಿದ ಉತ್ಖನನ ಕುರಿತು ಚಿತ್ರಗಳ ಪ್ರದರ್ಶನ ನಡೆಯಿತು.

ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿ, ಡಾ.ರಾಜೇಂದ್ರ ಪ್ರಸಾದ್‌, ಜವಾಹರಲಾಲ್ ನೆಹರೂ, ಡಾ. ಝಾಕಿರ್ ಹುಸೇನ್‌ ಹೀಗೆ ಹಲವು ಗಣ್ಯರೊಡನೆ ಇರುವ ರಾವ್‌ ಅವರ ಚಿತ್ರಗಳು, ದ್ವಾರಕೆ, ಲೋಥಲ್‌ನಲ್ಲಿ ಉತ್ಖನನ ನಡೆಸುವಾಗ ತೆಗೆದ ಚಿತ್ರಗಳು, ದ್ವಾರಕೆ ಸಮುದ್ರದ ಅಡಿಯಲ್ಲಿ ಸಿಕ್ಕ ವಸ್ತುಗಳ ಚಿತ್ರಗಳು ಮತ್ತು ಅವರು ಬರೆದ ಪುಸ್ತಕಗಳು ಪ್ರದರ್ಶನದಲ್ಲಿ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT